ನವದೆಹಲಿ:ಯೆಸ್ ಬ್ಯಾಂಕ್​ನಲ್ಲಿ ನಡೆದಿರಬಹುದಾದ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಈಗ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಹೆಚ್ಚಿದೆ. ಶಿಮ್ಲಾ ಬಳಿ ಇರುವ ಅವರ ಮನೆಯನ್ನು (ಕಾಟೇಜ್) ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆಯೂ ಅಧಿಕಾರಿಗಳು ಚಿಂತನೆ ನಡೆಸುತ್ತಾರೆ.
ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಬಂಧಿತರಾಗಿರುವ ಯೆಸ್ ಬ್ಯಾಂಕ್ ಮಾಜಿ ಅಧ್ಯಕ್ಷ ರಾಣಾ ಕಪೂರ್​ಗೆ ಎರಡು ಕೋಟಿ ರೂಪಾಯಿಗೆ ಒಂದು ಪೇಂಟಿಂಗ್ ಮಾರಿದ್ದ ಪ್ರಕರಣದಲ್ಲಿ ಇಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಖ್ಯಾತ ಕಲಾವಿದ ಎಂ.ಎಫ್. ಹುಸೇನ್ ರಚಿಸಿದ್ದ ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿಯವರ ಭಾವಚಿತ್ರವನ್ನು ಪ್ರಿಯಾಂಕಾರಿಂದ ಎರಡು ಕೋಟಿ ರೂಪಾಯಿಗೆ ಖರೀದಿಸುವಂತೆ ದಕ್ಷಿಣ ಮುಂಬೈನ ಮಾಜಿ ಕಾಂಗ್ರೆಸ್ ಸಂಸದ ಮಿಲಿಂದ್ ದೆವೊರಾ ತಮ್ಮನ್ನು ಒತ್ತಾಯಿಸಿದ್ದರು ಎಂದು ವಿಚಾರಣೆ ವೇಳೆ ಇ.ಡಿ. ಅಧಿಕಾರಿಗಳಿಗೆ ಕಪೂರ್ ಹೇಳಿದ್ದರು. ಆ ಹಣವನ್ನು ಶಿಮ್ಲಾ ಬಳಿ ಕಾಟೇಜ್ ನಿರ್ವಿುಸಲು ಪ್ರಿಯಾಂಕಾ ಬಳಸಿದ್ದರು. ಆರೋಪಿ ಕಪೂರ್​ರಿಂದ ಪಡೆದಿರುವ ಹಣ ‘ಅಪರಾಧದಿಂದ ಗಳಿಸಿದ ಆದಾಯ’ ಎಂದು ಅಕ್ರಮ ಹಣ ವರ್ಗಾವಣೆ ತಡೆ ಕಾನೂನು (ಪಿಎಂಎಲ್​ಎ) ಪರಿಗಣಿಸುತ್ತದೆ. ಹೀಗಾಗಿ ಅಕ್ರಮ ಸಂಪಾದನೆಯಿಂದ ನಿರ್ವಿುಸಲಾದ ಕಟ್ಟಡ ಮುಟ್ಟುಗೋಲಿಗೆ ಅರ್ಹವಾಗುತ್ತದೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ. ಈ ಪ್ರಕರಣದಲ್ಲಿ ದೇವರಾರನ್ನು ಕೂಡ ವಿಚಾರಿಸುವ ಸಾಧ್ಯತೆಯಿದೆ.
ಹುಸೇನ್​ರ ಪೇಂಟಿಂಗ್ ಮಾರಿದ್ದು ಕಾನೂನುಬಾಹಿರ ವ್ಯವಹಾರವಲ್ಲ. ಆ ಆದಾಯವನ್ನು ಅವರು ಐಟಿ ರಿಟರ್ನ್ಸ್​ನಲ್ಲಿ ನಮೂದಿಸಿದ್ದಾರೆ ಎಂದು ಕಾಂಗ್ರೆಸ್ ಈಗಾಗಲೇ ಸ್ಪಷ್ಟಪಡಿಸಿದೆ.
ಪೇಂಟಿಂಗ್ ನಿಜವಾದ ಮಾಲೀಕರು ಯಾರು?
ಪೇಂಟಿಂಗ್ ಬಗೆಗಿನ ಪ್ರಿಯಾಂಕಾರ ಮಾಲೀಕತ್ವದ ಬಗ್ಗೆಯೂ ಇ.ಡಿ. ತನಿಖೆ ನಡೆಸಲಿದೆ. 1985ರಲ್ಲಿ ಕಾಂಗ್ರೆಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹುಸೇನ್ ಈ ಕಲಾಕೃತಿಯನ್ನು ರಾಜೀವ್ ಗಾಂಧಿಗೆ ಅರ್ಪಿಸಿದ್ದರು. ಅದು ಕಾಂಗ್ರೆಸ್ ಪಕ್ಷದ ಸೊತ್ತೇ ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಮೂಲಗಳು ಹೇಳಿವೆ.
ದೆವೊರಾ ಒತ್ತಡ?
ಕಪೂರ್ ಪೇಂಟಿಂಗನ್ನು ಸ್ವಯಿಚ್ಛೆಯಿಂದ ಖರೀದಿಸಿಲ್ಲ. ಮಿಲಿಂದ್ ದೆವರಾ ಅವರ ಒತ್ತಡ ಮೇರೆಗೆ ಕೊಂಡಿದ್ದಾರೆ ಎನ್ನುವುದನ್ನು ಸಾಬೀತುಪಡಿಸುವ ಸಂದೇಶಗಳು ಹಾಗೂ ಇ ಮೇಲ್​ಗಳು ಕಪೂರ್​ರ ಸ್ಮಾರ್ಟ್ ಫೋನ್​ನಲ್ಲಿ ಲಭ್ಯವಾಗಿವೆ ಎಂದು ಇ.ಡಿ. ಮೂಲಗಳು ಹೇಳಿವೆ.
ಪರ್ಯಾಯ ಪಾವತಿಗೆ ಅವಕಾಶ
ಯೆಸ್ ಬ್ಯಾಂಕ್ ಗ್ರಾಹಕರು ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿ ವರ್ಗಾವಣೆ (ಎನ್​ಇಎಫ್​ಟಿ-ನೆಫ್ಟ್) ಮತ್ತು ತಕ್ಷಣ ಪಾವತಿ ಸೇವೆ (ಐಎಂಪಿಎಸ್) ಮೂಲಕ ಕೆಲವು ನಿರ್ದಿಷ್ಟ ಪಾವತಿಗಳನ್ನು ಮಾಡಬಹುದು ಎಂದು ಸೂಪರ್​ಸೀಡ್ ಆಗಿರುವ ಯೆಸ್ ಬ್ಯಾಂಕ್ ಮಂಗಳವಾರ ಹೇಳಿದೆ. ಕ್ರೆಡಿಟ್ ಕಾರ್ಡ್ ಬಾಕಿ ಮತ್ತು ಬೇರೆ ಬ್ಯಾಂಕ್ ಖಾತೆಗಳ ಸಾಲಗಳನ್ನು ನೆಫ್ಟ್ ಮತ್ತು ಐಎಂಪಿಎಸ್ ಮೂಲಕ ಪಾವತಿ ಮಾಡಬಹುದು ಎಂದು ಯೆಸ್ ಬ್ಯಾಂಕ್ ಟ್ವೀಟ್​ನಲ್ಲಿ ತಿಳಿಸಿದೆ.
ಸಾಲಗಳ ಬಗ್ಗೆ ತನಿಖೆ
ದಿವಾನ್ ಹೌಸಿಂಗ್ ಫೈನಾನ್ಸ್ (ಡಿಎಚ್​ಎಫ್​ಎಲ್) ಅಲ್ಲದೆ ಇತರ ಕಾರ್ಪೆರೇಟ್ ಕಂಪನಿಗಳಿಗೆ ಯೆಸ್ ಬ್ಯಾಂಕ್ ನೀಡಿದ್ದ ದೊಡ್ಡ ಮೊತ್ತದ ಸಾಲದ ಬಗ್ಗೆಯೂ ಇ.ಡಿ. ತನಿಖೆ ನಡೆಸಲಿದೆ. ದೊಡ್ಡ ಸಾಲ ಪಡೆದವರು ಮರುಪಾವತಿಸದಿರುವುದರಿಂದ ಬ್ಯಾಂಕ್​ಗೆ ಅಪಾರ ಆರ್ಥಿಕ ನಷ್ಟವಾಗಿದೆ. ಡಿಎಚ್​ಎಫ್​ಎಲ್​ಗೆ ಯೆಸ್ ಬ್ಯಾಂಕ್ ಮಂಜೂರು ಮಾಡಿದ್ದ ನಾಲ್ಕು ಸಾವಿರ ಕೋಟಿ ರೂಪಾಯಿ ಸಾಲವನ್ನು ವಸೂಲಿ ಮಾಡದಿರಲು ಡಿಎಚ್​ಎಫ್​ಎಲ್​ನಿಂದ 600 ಕೋಟಿ ರೂಪಾಯಿ ಲಂಚ ಪಡೆದ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಸಿಂಧ್ಯಾ ರಾಜೀನಾಮೆ ನೀಡುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯಿಂದ ಅಚ್ಚರಿಯ ಕ್ರಮ; ಟ್ವಿಟರ್​ ಮೂಲಕ ಘೋಷಣೆ

ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು: ಎಲ್ಲ ಸಚಿವರಿಂದಲೂ ರಾಜೀನಾಮೆ ಪಡೆದ ಕಮಲನಾಥ್, ಸೋನಿಯಾ ಭೇಟಿಗೆ ಧಾವಿಸಿದ ರಾಹುಲ್ ಗಾಂಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
