|ಡಾ. ಎಸ್.ಆರ್. ಕೇಶವಅರ್ಥಶಾಸ್ತ್ರ ಪ್ರಾಧ್ಯಾಪಕ, ಬೆಂಗಳೂರು ವಿವಿ
ಬಜೆಟ್ ಅಲ್ಪಾವಧಿಯಲ್ಲಿ ಮಾತ್ರವಲ್ಲದೆ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಿದೆ. ವಿವಿಧ ಮೂಲಸೌಕರ್ಯ ಯೋಜನೆಗೆ ಧನಸಹಾಯ ಮಾಡಲು ಸಾರ್ವಜನಿಕ ಬಂಡವಾಳ ವೆಚ್ಚವನ್ನು 7.50 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವುದರೊಂದಿಗೆ ಆರ್ಥಿಕತೆ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ. ಇದು ಹಿಂದಿನ ವರ್ಷಕ್ಕಿಂತ ಶೇ. 35.4 ಹೆಚ್ಚಾಗಿದೆ. ಇದು ಆರ್ಥಿಕತೆಯಲ್ಲಿ ಖಾಸಗಿ ಹೂಡಿಕೆಯನ್ನು ವೃದ್ಧಿಸುತ್ತದೆ. ಇದರೊಂದಿಗೆ ಕೇಂದ್ರ ಸರ್ಕಾರ ರಾಜ್ಯದ ಸಾಮಾನ್ಯ ಸಾಲಕ್ಕಿಂತ ಹೆಚ್ಚಿನ ಆರ್ಥಿಕತೆ ಬಲಪಡಿಸಿಲು ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲವಾಗಿ ಒಂದು ಲಕ್ಷ ಕೋಟಿ ರೂ. ನೀಡಲಿದೆ.
ಕೃಷಿಯ ಆಧುನೀಕರಣ:ಕೃಷಿ ಉತ್ಪಾದಕತೆ ಹೆಚ್ಚಿಸಲು ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಸಲು ಮತ್ತು ಆ ಮೂಲಕ ಕೃಷಿ ವಲಯದಲ್ಲಿ ಆದಾಯವನ್ನು ಹೆಚ್ಚಿಸಲು, ರಾಗಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಬ್ರಾ್ಯಂಡಿಂಗ್, ಬೆಳೆ ಮೌಲ್ಯಮಾಪನಕ್ಕಾಗಿ ಕಿಸಾನ್ ಡ್ರೋನ್​ಗಳ ಬಳಕೆ, ಭೂ ದಾಖಲೆಗಳು, ಕೀಟನಾಶಕಗಳ ಸಿಂಪಡಣೆ, ಸ್ಟಾರ್ಟ್​ಅಪ್​ಗಳನ್ನು ಉತ್ತೇಜಿಸುವುದು. ಯಾಂತ್ರೀಕರಣ, ಐಟಿ ಬೆಂಬಲವನ್ನು ನೀಡುವುದರಿಂದ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಲೆಯನ್ನು ತರುತ್ತದೆ.
ಒಳಗೊಳ್ಳುವಿಕೆಯ ಇ-ಶಿಕ್ಷಣ:ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ದೇಶ ಸಜ್ಜಾಗಿದೆ. 2022-23ರ ಬಜೆಟ್ ಅಂದಾಜಿನ ಪ್ರಕಾರ ಮುಂಬರುವ ಹಣಕಾಸು ವರ್ಷದಲ್ಲಿ ಶಿಕ್ಷಣಕ್ಕಾಗಿ ಸರ್ಕಾರ 104,278 ಕೋಟಿ ರೂ. 1-12 ನೇ ತರಗತಿಗಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಪೂರಕ ಶಿಕ್ಷಣ ಒದಗಿಸಲು ‘ಒಂದು ವರ್ಗ-ಒಂದು ಟಿವಿ ಚಾನೆಲ್’ ಮತ್ತು 200 ಚಾನೆಲ್ ಪ್ರಾರಂಭ ಸೇರಿ ವಿವಿಧ ಉಪಕ್ರಮಗಳು ಶಿಕ್ಷಣದ ಗುಣಮಟ್ಟ ಸುಧಾರಿಸುವಲ್ಲಿ ಮಹತ್ವದ ಪರಿಣಾಮ ಬೀರುತ್ತವೆ.
ಉದ್ಯೋಗ ಸೃಷ್ಟಿಗೆ ಹೊಸ ಮಾರ್ಗಗಳು:ಅನಿಮೇಷನ್, ವಿಷುಯಲ್ ಎಫೆಕ್ಟ್ ್ಸ ಗೇಮಿಂಗ್ ಮತ್ತು ಕಾಮಿಕ್(ಎವಿಜಿಸಿ) ವಲಯವು ಯುವ ಪೀಳಿಗೆಗೆ ದೊಡ್ಡ ಅವಕಾಶವನ್ನು ಒದಗಿಸುತ್ತದೆ.
ರಕ್ಷಣಾ ಹಂಚಿಕೆಯಲ್ಲಿ ಹೆಚ್ಚಳ:ಚೀನಾ ಮತ್ತು ಪಾಕಿಸ್ತಾನದ ಆಕ್ರಮಣದಿಂದಾಗಿ ಪದೇ ಪದೆ ಗಡಿ ಉದ್ವಿಗ್ನತೆ ಉಂಟಾಗಿದ್ದು, ಈ ವರ್ಷದ ಬಜೆಟ್ ಹಂಚಿಕೆಯಲ್ಲಿ ಶೇ.10 ಹೆಚ್ಚಳ ಮಾಡಿ, 5.25 ಲಕ್ಷ ಕೋಟಿ ರೂ. ಕೈಗಾರಿಕೆ, ಸ್ಟಾರ್ಟ್​ಅಪ್ ಮತ್ತು ಅಕಾಡೆಮಿಗಳಿಗೆ ಆರ್ ಆಂಡ್ ಡಿ ಬಜೆಟ್​ಗೆ ರಕ್ಷಣಾ ಹಂಚಿಕೆಯ ಶೇ. 25 ಮೀಸಲಿಡುವ ಪ್ರಸ್ತಾಪವು ಗೇಮ್ ಚೇಂಜರ್ ಆಗಿರುತ್ತದೆ. ಪ್ರಾಮಾಣಿಕ ಆದಾಯ ತೆರಿಗೆ ಪಾವತಿದಾರಿಗೆ ಸ್ಟಾಂಡರ್ಡ್ ಡಿಡಕ್ಷನ್ ಕಡಿತ ಹೆಚ್ಚಿಸಿ ಸ್ವಲ್ಪ ಪರಿಹಾರ ನೀಡಿದ್ದರೆ ಹೆಚ್ಚು ಉತ್ತಮವಾಗಿರುತ್ತಿತ್ತು.
|ಡಾ.ಸಿ.ಎನ್.ಮಂಜುನಾಥ್ನಿರ್ದೇಶಕರು ಜಯದೇವ ಹೃದ್ರೋಗ ಆಸ್ಪತ್ರೆ
ಕೇಂದ್ರ ಬಜೆಟ್​ನಲ್ಲಿ ಟೆಲಿ ಮೆಡಿಷನ್ ವಿಷಯ ಪ್ರಸ್ತಾಪಿಸಿರುವುದನ್ನು ಹೊರತು ಪಡಿಸಿದರೆ, ವೈದ್ಯಕೀಯ ಕ್ಷೇತ್ರದಲ್ಲಿ ಯಾವುದಕ್ಕೂ ನಿರೀಕ್ಷಿತ ಆದ್ಯತೆಗಳು ಸಿಕ್ಕಿಲ್ಲ. ಕೋವಿಡ್ ನಂತರ ಟೆಲಿ ಮೆಡಿಷನ್​ಗೆ ಮಹತ್ವ ಬಂದಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಈ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು ಮುಂದಾಗಿವೆ. ಯುವಕರು ಮತ್ತು ಮಧ್ಯ ವಯಸ್ಕರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಸಾವಿನ ಪ್ರಮಾಣವೂ ಏರಿಕೆ ಆಗುತ್ತಿರುವುದು ಆತಂಕಕಾರಿ ಸಂಗತಿ. ಈ ಬಗ್ಗೆ ಕೇಂದ್ರ ಸರ್ಕಾರ ವಿಶೇಷವಾಗಿ ಹೆಚ್ಚಿನ ಗಮನ ನೀಡಬೇಕಿತ್ತು. ಕ್ಯಾನ್ಸರ್​ಗೆ ರಾಷ್ಟ್ರೀಯ ಆದ್ಯತೆ ನೀಡಿರುವಂತೆ ಹೃದಯದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ಆದ್ಯತೆ ನೀಡಿದ್ದರೆ ಆ ಮೂಲಕ ರಾಜ್ಯಕ್ಕೂ ಹೆಚ್ಚಿನ ಅನುದಾನ ಬರಲು ಅನುಕೂಲವಾಗುತ್ತಿತ್ತು.
ಅದರಲ್ಲಿ ಪೊಲೀಸರ ತಪ್ಪಿಲ್ಲ, ಇದರಲ್ಲಿ ತಪ್ಪಿತ್ತು..: ಸಂಚಾರ ಪೊಲೀಸರ ವಿರುದ್ಧದ ಟೀಕೆಗಳಿಗೆ ರವಿಕಾಂತೇಗೌಡ ಲಿಖಿತ ಉತ್ತರ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + 14 =
Remember me
