ನವದೆಹಲಿ:ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬುಧವಾರ (ನ.8) 10 ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಶೋಧ ಆರಂಭಿಸಿದ್ದು, ತ್ರಿಪುರಾ, ಅಸ್ಸಾಂ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಹರಿಯಾಣ, ಪುದುಚೇರಿ, ರಾಜಸ್ಥಾನ ಮತ್ತು ಜಮ್ಮು ಕಾಶ್ಮೀರ ರಾಜ್ಯಗಳಲ್ಲಿ ದಾಳಿ ನಡೆಸಿದೆ.
ಇದನ್ನೂ ಓದಿ:ಗ್ಲೆನ್ ಮ್ಯಾಕ್ಸ್‌ವೆಲ್ ಐತಿಹಾಸಿಕ ದ್ವಿಶತಕ; ಒನ್‌ ಮ್ಯಾನ್ ಶೋ ಅಲ್ಲ, ಒನ್‌ ಲೆಗ್ ಶೋ…ಕ್ರಿಕೆಟ್​ ದಿಗ್ಗಜರಿಂದ ಮೆಚ್ಚುಗೆ
ರಾಜ್ಯ ಪೊಲೀಸ್ ಪಡೆಗಳೊಂದಿಗೆ ನಿಕಟ ಸಮನ್ವಯದಲ್ಲಿ ಈ ಪ್ರಕರಣಗಳಿಗೆ ಸಂಬಂಧಿಸಿದ ಶಂಕಿತರ ವಸತಿ ಆವರಣ ಮತ್ತು ಇತರ ಸ್ಥಳಗಳಲ್ಲಿ ದಾಳಿಗಳು ನಡೆಯುತ್ತಿವೆ. ಅಪರಾಧದಲ್ಲಿ ಭಾಗಿಯಾಗಿರುವ ಶಂಕಿತರ ವಿರುದ್ಧ ನಿರ್ದಿಷ್ಟ ಒಳಹರಿವಿನ ಆಧಾರದ ಮೇಲೆ ಎನ್​ಐಎನ ಬಹು ತಂಡಗಳು 10 ರಾಜ್ಯಗಳಲ್ಲಿ ದಾಳಿ ಆರಂಭಿಸಿದೆ.
ಎನ್‌ಐಎ ಮೂಲಗಳ ಪ್ರಕಾರ, ಅಂತಾರಾಷ್ಟ್ರೀಯ ಸಂಪರ್ಕ ಹೊಂದಿರುವ ಮಾನವ ಕಳ್ಳಸಾಗಣೆದಾರರ ದಂಧೆಯನ್ನು ಬಯಲಿಗೆಳೆಯಲು ಈ 10 ರಾಜ್ಯಗಳಲ್ಲಿ ಎನ್‌ಐಎ ಅಧಿಕಾರಿಗಳು 48ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ:ನೋಟು ಅಮಾನ್ಯೀಕರಣಕ್ಕೆ 7 ವರ್ಷ: ನೋಟು ರದ್ದತಿಯ ಸಪ್ತ ವರ್ಷಗಳ ಪಯಣ ಹೇಗಿತ್ತು?
ಕಳೆದ ತಿಂಗಳು ಬೆಂಗಳೂರಿನ ಎನ್‌ಐಎ ತಂಡವು ಶ್ರೀಲಂಕಾದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ತಮಿಳುನಾಡಿನಿಂದ ಬಂಧಿಸಿತ್ತು. ಆರೋಪಿಯನ್ನು ಇಮ್ರಾನ್ ಖಾನ್ ಎಂದು ಗುರುತಿಸಲಾಗಿದ್ದು, ಇತರ ಸಹ ಆರೋಪಿಗಳೊಂದಿಗೆ ಶ್ರೀಲಂಕಾ ಪ್ರಜೆಗಳನ್ನು ಬೆಂಗಳೂರು ಮತ್ತು ಮಂಗಳೂರಿನ ವಿವಿಧ ಸ್ಥಳಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).
BBKS10: ರೊಚ್ಚಿಗೆದ್ದ ಮನೆಮಂದಿ; ಸಂಗೀತಾ-ಕಾರ್ತಿಕ್ ವ್ಯಕ್ತಿತ್ವ ಮಾತಿನಲ್ಲೇ ಚಿಂದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − thirteen =
Remember me
