ಮುಂಬೈ: ಬಾಲಿವುಡ್ ನಿರ್ಮಾಪಕ ಕೃಷ್ಣಕುಮಾರ್ ಅವರ ಒಬ್ಬಳೇ ಮಗಳು ತಿಶಾ ಕುಮಾರ್ ತೀರಾ ಚಿಕ್ಕ ವಯಸ್ಸಿನಲ್ಲಿ ಅಂದರೆ 20 ವರ್ಷ ವಯಸ್ಸಿನಲ್ಲೇ ತೀರಿಕೊಂಡಿದ್ದಾಳೆ.
ಟಿ ಸಿರೀಸ್ ನಿರ್ಮಾಣ ಸಂಸ್ಥೆಯ ಅಧ್ಯಕ್ಷರಾಗಿರುವ ಕೃಷ್ಣ ಕುಮಾರ್ ಅವರ ಏಕೈಕ ಪುತ್ರಿ ಟಿಶಾ ಕುಮಾರ್. 6 ಸೆಪ್ಟೆಂಬರ್ 2003 ರಂದು ಜನಿಸಿದರು. ಆಕೆಗೆ ಪ್ರಸ್ತುತ 20 ವರ್ಷ. ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದ ಈಕೆ ಜರ್ಮನಿಯಲ್ಲಿ ಅತ್ಯಾಧುನಿಕ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ವೈದ್ಯರು ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ. ತಿಶಾ ಕುಮಾರ್ ಅವರ ದೇಹವನ್ನು ಭಾರತಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ.
ಒಬ್ಬಳೇ ಮಗಳು ಚಿಕ್ಕವಯಸ್ಸಿನಲ್ಲಿ ಸಾವನ್ನಪ್ಪಿದ್ದರಿಂದ ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದರು. ಟಿ ಸಿರೀಸ್ ಬ್ಯಾನರ್ ಟೀಶ ಕುಮಾರ್ ಸಾವಿನ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ. ಕೃಷ್ಣ ಕುಮಾರ್ ಅವರ ಪುತ್ರಿ ತಿಶಾ ಅವರು ಕ್ಯಾನ್ಸರ್​ನಿಂದ ಸಾವನ್ನಪ್ಪಿದ್ದಾರೆ, ದಯವಿಟ್ಟು ಈ ಕಷ್ಟದ ಸಮಯದಲ್ಲಿ ಖಾಸಗಿತನವನ್ನು ಗೌರವಿಸಿ ಎಂದು ಮನವಿ ಮಾಡಲಾಗಿದೆ.
ಹಲವು ವರ್ಷಗಳಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ತಿಶಾ ಕುಮಾರ್ ಜುಲೈ 18ರಂದು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕೊನೆಯುಸಿರೆಳೆದಿದ್ದರು. ಈ ಬಗ್ಗೆ ಜುಲೈ 19ರಂದು ತಿಶಾ ಕುಮಾರ್ ಕುಟುಂಬಸ್ಥರು ಮಾಹಿತಿ ನೀಡಿದ್ದು, ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಬಾಲಿವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ನಿರ್ಮಾಣ ಸಂಸ್ಥೆಯಾಗಿರುವ ಟಿ ಸಿರೀಸ್ ಅನ್ನು ಭೂಷಣ್ ಕುಮಾರ್ ನೋಡಿಕೊಳ್ಳುತ್ತಿದ್ದಾರೆ. ಕೃಷ್ಣ ಕುಮಾರ್ ಅವರ ಕಿರಿಯ ಸಹೋದರ. ಕೃಷ್ಣ ಕುಮಾರ್ ಅವರು ಟಿ-ಸೀರೀಸ್ ನಿರ್ಮಾಣ ಕಂಪನಿಯ ಭಾಗವಾಗಿದ್ದಾರೆ. ಪ್ರಸ್ತುತ, ಅವರು ಈ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1995 ರಲ್ಲಿ, ಕೃಷ್ಣ ಕುಮಾರ್ ಅವರು ಬೇವಫ ಸನಮ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು. ಆ ನಂತರ ಅವರು ನಟನಾಗಿರದೆ ನಿರ್ಮಾಪಕರಾಗಿ ಉಳಿದರು. ಚಿತ್ರದ ನಿರ್ಮಾಣ ಕಾರ್ಯವನ್ನು ಅವರೇ ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷ, ರಣಬೀರ್ ಕಪೂರ್ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ಕಾಂಬೋ ಅನಿಮಲ್ ಚಿತ್ರವನ್ನು ಟಿ ಸಿರೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − seven =
Remember me
