ಪುಣೆ:ಮಾಜಿ ವಿದ್ಯಾರ್ಥಿಯೊಬ್ಬ ತನ್ನ ಮಹಿಳಾ ಪ್ರೊಫೆಸರ್​ಗೆ ಬ್ಲಾಕ್​ಮೇಲ್​ ಮಾಡಿ ನಾಲ್ಕು ಲಕ್ಷ ರೂ.ಗೆ ಬೇಡಿಕೆಯಿಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.ಇದನ್ನೂ ಓದಿ:ಮದುವೆ ಮುಗಿಸಿ ಮನೆಗೆ ಹೊರಟವರು ಸೇರಿದ್ದು ಮಸಣಕ್ಕೆ..!ಬಿಹಾರ ಮೂಲದ ಮಯಾಂಕ್ ಸಿಂಗ್ ಎಂಬಾತನೇ ಆರೋಪಿಯಾಗಿದ್ದು, ಈತ ಮಹಾರಾಷ್ಟ್ರದ ವಿಶ್ವವಿದ್ಯಾಲಯವೊಂದರಲ್ಲಿ ವಿದ್ಯಾರ್ಥಿಯಾಗಿದ್ದ. ಪರೀಕ್ಷೆಯಲ್ಲಿ ಪಾಸಾದ ನಂತರವೂ ತನ್ನ ಮಹಿಳಾ ಪ್ರೊಫೆಸರ್ ಜೊತೆ ಇನ್‌ಸ್ಟಾಗ್ರಾಂನಲ್ಲಿ ಆಗಾಗ್ಗೆ ಚಾಟ್ ಮಾಡುತ್ತಿದ್ದ. ನಂತರ ಇವರಿಬ್ಬರು ಪರಸ್ಪರ ವಾಟ್ಸ್​​ಆ್ಯಪ್​​ ಕರೆ ಮಾಡಲು ಆರಂಭಿಸಿದ್ದರು. ಹೀಗಿರುವಾಗಲೇ ಮಯಾಂಕ್​ ಪ್ರೊಫೆಸರ್​ ಜತೆಗಿನ ಎಲ್ಲ ಕರೆಗಳನ್ನು ರೆಕಾರ್ಡ್ ಮಾಡಿಕೊಂಡು ಅವುಗಳನ್ನು ವಿಶ್ವವಿದ್ಯಾಲಯದ ಬಹಿರಂಗಗೊಳಿಸುವುದಾಗಿ ಹೆದರಿಸುತ್ತಿದ್ದನು.ಹೀಗಾಗಿ ಆಕೆ ಅವನು ಹೇಳಿದಂತೆ ಕೇಳಬೇಕಾದ ಪರಿಸ್ಥಿತಿಗೆ ಸಿಲುಕಿದ್ದು, ಇದನ್ನೇ ಮಯಾಂಕ್​​​ ತನ್ನ ಲಾಭಕ್ಕಾಗಿ ಬಳಸಿಕೊಳ್ಳು ಯತ್ನಿಸಿದ್ದಾನೆ. ಇತ್ತೀಚೆಗಷ್ಟೇ ಮಯಾಂಕ್​ ಆಕೆಗೆ ವಿಡಿಯೋ ಕಾಲ್ ಮಾಡಿ, ತಾನು ಹೇಳಿದಂತೆ ನಡೆದುಕೊಳ್ಳದಿದ್ದರೆ ತಮ್ಮ ಚಾಟಿಂಗ್​​ನ ಸ್ಕ್ರೀನ್ ಶಾಟ್ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದ.ಇದನ್ನೂ ಓದಿ:ಪೊಲೀಸರಿಂದ ತಪ್ಪಿಸಿಕೊಳ್ಳಲು ಸಿನಿಮೀಯವಾಗಿ ಮಹಡಿಯಿಂದ ಹಾರಿದ ಆರೋಪಿ! ಮುಂದೇನಾಯ್ತು?ಅದಕ್ಕೆ ಹೆದರಿದ ಪ್ರೊಫೆಸರ್, ವಿದ್ಯಾರ್ಥಿ ಹೇಳಿದಂತೆಯೇ ವಿಡಿಯೋ ಕಾಲ್​​ನಲ್ಲಿ ಬೆತ್ತಲೆಯಾಗಿದ್ದಾಳೆ. ಕರೆ ರೆಕಾರ್ಡ್ ಮಾಡಿಕೊಂಡ ಆರೋಪಿಯು ವಿಡಿಯೋವನ್ನು ಆಕೆಯ ಪತಿಗೆ ಕಳುಹಿಸಿ 4 ಲಕ್ಷ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದ. ಕೊನೆಗೆ ಪ್ರೊಫೆಸರ್ ದಂಪತಿ ಪೊಲೀಸರನ್ನು ಸಂಪರ್ಕಿಸಿ ವಿದ್ಯಾರ್ಥಿಯ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 3 =
Remember me
