ನವದೆಹಲಿ:ಕರೊನಾ ವೈರಸ್ ಚೀನಾದ ವುಹಾನ್​ನ ಪ್ರಯೋಗಾಲಯವೊಂದರಲ್ಲಿ ಸೃಷ್ಟಿಸಿದ ಮಾನವ ನಿರ್ವಿುತ ವೈರಸ್ ಎಂದು ಫ್ರಾನ್ಸ್​ನ ಖ್ಯಾತ ವೈರಾಣು ತಜ್ಞ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಲ್ಯೂಕ್ ಮೊಂಟಾಗ್ನಿಯರ್ ಹೇಳಿಕೆ ಜಗತ್ತಿನಾದ್ಯಂತ ವಿಜ್ಞಾನ ರಂಗದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿದೆ.
ವುಹಾನ್​ನ ಪ್ರಯೋಗಾಲಯ ವೊಂದರಲ್ಲಿ ಎಚ್​ಐವಿ/ಏಡ್ಸ್ ರೋಗಕ್ಕೆ ಲಸಿಕೆ ತಯಾರಿಸಲು ಪ್ರಯತ್ನಿಸುತ್ತಿದ್ದಾಗ ಸಾರ್ಸ್-ಸಿಒವಿ-2 ವೈರಸ್ ಸೃಷ್ಟಿಯಾಗಿದೆ. ಆದ್ದರಿಂದಲೇ ಜಗತ್ತಿನೆಲ್ಲೆಡೆ ಸಾಂಕ್ರಾಮಿಕ ರೋಗ ಹರಡಿದೆ. ಹೀಗಾಗಿ ಇದು ‘ಮಾನವ ನಿರ್ವಿುತ’ ಎಂದು ಮಾಂಟಾಗ್ನಿಯರ್ ವಿಶ್ಲೇಷಿಸಿದ್ದಾರೆ.
‘ಕರೊನಾ ವೈರಸ್​ನ ಜೀವಜಾಲದಲ್ಲಿ (ಜಿನೊಮ್ ಎಚ್​ಐವಿ ಅಂಶಗಳು ಮತ್ತು ಮಲೇರಿಯಾ ಕೀಟಾಣು ಉನ್ನತ ಪ್ರಮಾಣದಲ್ಲಿ ಅನುಮಾನಾಸ್ಪದ ರೀತಿಯಲ್ಲಿವೆ. ವೈರಸ್​ನ ಗುಣಲಕ್ಷಣಗಳನ್ನು ನೋಡಿದರೆ ಅದು ಪ್ರಕೃತಿಸಹಜವಾಗಿ ಹುಟ್ಟಿದ್ದು ಎನ್ನಲಾಗದು’ ಎಂದು ಮೊಂಟಾಗ್ನಿಯರ್ ಹೇಳಿದ್ದಾರೆ. ವುಹಾನ್ ನ್ಯಾಷನಲ್ ಬಯೋಸೇಫ್ಟಿ ಪ್ರಯೋಗಾಲಯದಲ್ಲಿ ಒಂದು ‘ಕೈಗಾರಿಕಾ’ ಅವಘಡ ಸಂಭವಿಸಿರಬೇಕು ಎಂಬುದು ಅವರ ತರ್ಕ. ಈ ಪ್ರಯೋಗಾಲಯ 2000ದ ಆಂಭದಿಂದಲೂ ಈ ಕರೊನಾ ವೈರಸ್​ಗಳ ವಿಚಾರದಲ್ಲಿ ವಿಶೇಷವಾದ ಪ್ರಯೋಗಗಳನ್ನು ನಡೆಸುತ್ತಿದೆ. ಫ್ರೆಂಚ್ ಸುದ್ದಿ ವಾಹಿನಿಯೊಂದಿಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಚ್​ಐವಿ/ಏಡ್ಸ್ ವೈರಸ್ ಕಂಡು ಹಿಡಿದ ಸಹಸಂಶೋಧನೆಗೆ ಮೊಂಟಾಗ್ನಿಯರ್ ಇತರ ಇಬ್ಬರು ವಿಜ್ಞಾನಿಗಳೊಂದಿಗೆ 2008ರಲ್ಲಿ ನೊಬೆಲ್ ಪ್ರಶಸ್ತಿ ಹಂಚಿಕೊಂಡಿದ್ದಾರೆ.
ವುಹಾನ್ ಲ್ಯಾಬ್ ನಿರಾಕರಣೆ
ಕರೊನಾ ವೈರಸ್ ಹರಡಲು ತಮ್ಮ ಪ್ರಯೋಗಾಲಯ ಕಾರಣವೆಂಬ ಆರೋಪವನ್ನು ವುಹಾನ್​ನ ರಕ್ಷಣಾ ಲ್ಯಾಬ್ ಸ್ಪಷ್ಟವಾಗಿ ತಳ್ಳಿಹಾಕಿದೆ. ‘ಈ ರೀತಿ ಆಗಲು ಸಾಧ್ಯವೇ ಇಲ್ಲ’ ಎಂದು ಪ್ರಯೋಗಾಲಯದ ನಿರ್ದೇಶಕ ಯುವಾನ್ ಜಿಮಿಂಗ್ ಸ್ಪಷ್ಟಪಡಿಸಿದ್ದಾರೆ. ಚೀನಾವೇ ವೈರಸ್​ಗೆ ಹೊಣೆ ಎಂಬ ಸಿದ್ಧಾಂತವನ್ನು ತಳ್ಳಿ ಹಾಕಿರುವ ಅವರು, ಜನವರಿಯಲ್ಲೇ ವಿಶ್ವ ಆರೋಗ್ಯ ಸಂಸ್ಥೆಗೆ ಎಲ್ಲ ಮಾಹಿತಿ ಒದಗಿಸಿಲಾಗಿದೆ ಎಂದಿದ್ದಾರೆ. ಪ್ರಾಣಿ ಮಾಂಸ ಮಾರಾಟ ಮಾರುಕಟ್ಟೆಯೊಂದರಲ್ಲಿ ಪ್ರಾಣಿಯೊಂದರಿಂದ ವೈರಸ್ ಮಾನವನಿಗೆ ಹಬ್ಬಿದೆ ಎಂಬುದು ಚೀನಾ ವಿಜ್ಞಾನಿಗಳ ವಿವರಣೆ.
ಕರೊನಾ ಸೋಂಕಿತರು ಆರು ದಿನಗಳಲ್ಲೇ ಚೇತರಿಸಿಕೊಳ್ಳುವಂತೆ ಮಾಡುತ್ತೇನೆ…ಆಯುರ್ವೇದ ಫಾರ್ಮುಲಾ ಸಿದ್ಧವಾಗಿದೆ ಎನ್ನುತ್ತಿರುವ ಶಿಕ್ಷಕ; ಇದೊಂದು ಇಂಟರೆಸ್ಟಿಂಗ್​ ವಿಚಾರ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − four =
Remember me
