ನವದೆಹಲಿ:ವಿವಿಧ ಕ್ಷೇತ್ರಗಳ ತಜ್ಞರ ಅನುಭವವನ್ನು ಶೈಕ್ಷಣಿಕವಾಗಿ ಬಳಸಿಕೊಳ್ಳಲು ಮುಂದಾಗಿರುವ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ), ‘ಪ್ರೊಫೆಸರ್ಸ್ ಆಫ್ ಪ್ರಾಕ್ಟೀಸ್’ ಎಂಬ ಹೊಸ ವರ್ಗದಲ್ಲಿ ವಿಷಯತಜ್ಞ ಬೋಧಕರನ್ನು ನೇಮಕ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದೆ. ಈ ರೀತಿಯ ವಿಷಯತಜ್ಞರಿಗೆ ಔಪಚಾರಿಕ ಪದವಿ ವಿದ್ಯಾರ್ಹತೆ ಅಥವಾ ಪ್ರಬಂಧ, ಸಂಶೋಧನಾ ಲೇಖನ ಪ್ರಕಟಿಸಿರಬೇಕು ಎಂಬ ಕಟ್ಟಳೆ ಇಲ್ಲ.
ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯ ಒಟ್ಟು ಮಂಜೂರಾದ ಹುದ್ದೆಗಳ ಪೈಕಿ ಗರಿಷ್ಠ ಶೇ.10ಕ್ಕೆ ವಿಷಯ ತಜ್ಞರನ್ನು ನೇಮಿಸಿ ಕೊಳ್ಳಬಹುದು ಎಂಬ ನಿರ್ಧಾರವನ್ನು ಕಳೆದವಾರ ನಡೆದ ಯುಜಿಸಿಯ 560ನೇ ಸಭೆಯಲ್ಲಿ ಕೈಗೊಳ್ಳಲಾಗಿದೆ. ಜತೆಗೆ ನೇಮಕ ಕುರಿತ ಕರಡು ಮಾರ್ಗಸೂಚಿಯನ್ನು ಅನುಮೋದಿಸಲಾಗಿದ್ದು, ಮುಂದಿನ ತಿಂಗಳು ಅಧಿಕೃತವಾಗಿ ಈ ಮಾರ್ಗಸೂಚಿ ಪ್ರಕಟವಾಗಲಿದೆ.
ಕರಡು ಮಾರ್ಗಸೂಚಿಯ ನಿಬಂಧನೆಗಳು:ವಿಷಯತಜ್ಞ ಬೋಧಕರನ್ನು ಉದ್ಯಮಗಳಿಂದ ಪ್ರಾಯೋಜಿತ, ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಂತ ಮೂಲದಿಂದ ಮತ್ತು ಗೌರವ ಸಂಭಾವನೆಯ ಆಧಾರದಲ್ಲಿ ನೇಮಕ ಮಾಡಿಕೊಳ್ಳಬಹುದು. ಕ್ರೋಡೀಕೃತ ವೇತನವನ್ನು ಪರಸ್ಪರ ಮಾತುಕತೆಯ ಮೂಲಕ ನಿಗದಿ ಮಾಡಿಕೊಳ್ಳುವುದು ಒಳಿತು. ನೇಮಕಾತಿ ಒಂದು ವರ್ಷದ್ದಾಗಿರಬೇಕು. ಅಗತ್ಯತೆಯ ಆಧಾರದಲ್ಲಿ ಸೇವೆ ವಿಸ್ತರಣೆ ಮಾಡಬಹುದು. ಆದರೆ, ಒಟ್ಟಾರೆ ನಾಲ್ಕು ವರ್ಷ ಮೀರಬಾರದು.
ಅಭ್ಯರ್ಥಿಗಳಿಗೆ ಬೋಧನ ಕೌಶಲ, ವಹಿಸಿದ ಹೊಣೆಗಾರಿಕೆಗೆ ಬದ್ಧರಾಗಿ ಕರ್ತವ್ಯ ನಿರ್ವಹಿಸುವ ಜಾಣ್ಮೆ ಇರಬೇಕು. ವಿವಿ ಅಥವಾ ಶಿಕ್ಷಣ ಸಂಸ್ಥೆಗಳು ಈ ವಿಷಯ ಬೋಧಕರನ್ನು ಬಳಸಿಕೊಳ್ಳಲು ಅನುಕೂಲವಾಗುವಂತಹ ಪಠ್ಯಕ್ರಮ ಅಥವಾ ಕೋರ್ಸ್​ನಲ್ಲಿ ಮಾಪಾಟು ಮಾಡಿಕೊಳ್ಳಬಹುದು.
ನವೀನ ಪರಿಕಲ್ಪನೆಯ, ಉದ್ಯಮಶೀಲತೆಗೆ ಉತ್ತೇಜನ ನೀಡುವ ಯೋಜನೆಗಳನ್ನು ಶಿಕ್ಷಣ ಸಂಸ್ಥೆಗಳು ತಮ್ಮ ನೀತಿಯ ಇತಿಮಿತಿಗೆ ಅನುಗುಣವಾಗಿ ಹೊಂದಬಹುದು. ಉದ್ದಿಮೆಗಳ ಜತೆಗೂಡಿ ಕಾರ್ಯಾಗಾರ, ವಿಚಾರ ಸಂಕಿರಣ, ತರಬೇತಿ ಕಾರ್ಯಕ್ರಮ, ಸಂಶೋಧನೆಗಳನ್ನು ನಡೆಸಬಹುದು. ಇದಕ್ಕೆ ಅಗತ್ಯವಾದ ಜವಾಬ್ದಾರಿಯನ್ನು ವಿಷಯ ತಜ್ಞರಿಗೆ ನೀಡಬಹುದು.
ಅಭ್ಯರ್ಥಿಗಳು ಅರ್ಜಿಗಳನ್ನು ಕುಲಪತಿಗಳಿಗೆ ಅಥವಾ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಿಗೆ ಕಳುಹಿಸಬಹುದು. ಇಂಥ ಅರ್ಜಿಗಳನ್ನು ಅಥವಾ ಸೂಕ್ತವಾದ ಅಭ್ಯರ್ಥಿಗಳನ್ನು ವಿವಿ ಇಲ್ಲವೇ ಶಿಕ್ಷಣ ಸಂಸ್ಥೆಗಳ ನೇಮಕಾತಿ ಸಮಿತಿಯಲ್ಲಿ ರ್ಚಚಿಸಿ, ಪರಿಶೀಲಿಸಿ ಪರಿಗಣಿಸಬಹುದು. ಈ ನೇಮಕಾತಿ ಸಮಿತಿಯಲ್ಲಿ ಇಬ್ಬರು ಹಿರಿಯ ಪ್ರಾಧ್ಯಾಪಕರು, ವಿಷಯ ಪರಿಣತರಾದ ಓರ್ವ ಬಾಹ್ಯ ಪರೀಕ್ಷಕರು ಇರಬೇಕು. ಸಮಿತಿ ಶಿಫಾರಸಿನ ಅನ್ವಯ ವಿವಿ ಮತ್ತು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ನೇಮಕಾತಿ ಕುರಿತ ಅಂತಿಮ ನಿರ್ಧಾರ ಕೈಗೊಳ್ಳಬಹುದು.
ಯಾವ ವರ್ಗದವರಿಗೆ ಅವಕಾಶ?:ಇಂಜಿನಿಯರಿಂಗ್, ವಿಜ್ಞಾನ, ಮಾಧ್ಯಮ, ಸಾಹಿತ್ಯ, ಉದ್ಯಮಶೀಲತೆ, ಸಮಾಜ ವಿಜ್ಞಾನ, ಲಲಿತ ಕಲೆ, ನಾಗರಿಕ ಸೇವೆ, ಸೇನಾಪಡೆಗಳ ಅನುಭವಿಗಳು ವಿಜ್ಞಯತಜ್ಞ ಪ್ರಾಧ್ಯಾಪಕರಾಗಬಹುದು. ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 15 ವರ್ಷದ ಅನುಭವ ಇರಬೇಕು. ಹಿರಿಯ ಹಂತದಲ್ಲಿ ಕಾರ್ಯ ನಿರ್ವಹಿಸಿರಬೇಕು. ಆದರೆ, ಈಗಾಗಲೇ ಬೋಧಕರಾಗಿದ್ದವರು ಅಥವಾ ನಿವೃತ್ತ ಶಿಕ್ಷಕರಿಗೆ ಅವಕಾಶ ಇಲ್ಲ.
ವೋಟರ್​ ಐಡಿಗೆ ಆಧಾರ್ ಲಿಂಕ್ ಮಾಡದಿದ್ದರೆ ಹೆಸರು ರದ್ದಾಗುತ್ತಾ?: ಇಲ್ಲಿದೆ ಚುನಾವಣಾ ಆಯೋಗದ ಸ್ಪಷ್ಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
