ನವದೆಹಲಿ:ದೆಹಲಿ-ಮುಂಬೈ ಇಂಡಿಗೊ ಏರ್ಲೈನ್ಸ್ ವಿಮಾನದಲ್ಲಿ 24 ವರ್ಷದ ವೈದ್ಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ 47 ವರ್ಷದ ಪ್ರಾಧ್ಯಾಪಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಪ್ರಾಧ್ಯಾಪಕ ರೋಹಿತ್ ಶ್ರೀವಾಸ್ತಾವ್ ಎಂಬುವವರನ್ನು ನ್ಯಾಯಾಂಗ ಕಸ್ಟಡಿಯಲ್ಲಿ ರಿಮಾಂಡ್ ಮಾಡಲಾಗಿದ್ದು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಗರ್ಭಿಣಿ ಪತ್ನಿಯ ಹತ್ಯೆ; ಏರೋಪ್ಲೇನ್​ನಲ್ಲಿ ಬಯಲಾಯ್ತು ಸಾವಿನ ರಹಸ್ಯ!
ಸಹರ್ ಪೊಲೀಸರ ಪ್ರಕಾರ, ಪಾಟನಾದಿಂದ ಬಂದ ರೋಹಿತ್ ಮತ್ತು ವೈದ್ಯೆ ದೆಹಲಿ ವಿಮಾನದಲ್ಲಿ ಅಕ್ಕಪಕ್ಕದಲ್ಲಿ ಕುಳಿತಿದ್ದರು. ವಿಮಾನ ದೆಹಲಿಯಿಂದ ಬುಧವಾರ ಬೆಳಿಗ್ಗೆ 5.30 ರ ಸುಮಾರಿಗೆ ಹೊರಟಿದೆ.
“ ಪ್ರಯಾಣದ ಸಮಯದಲ್ಲಿ, ಶ್ರೀವಾಸ್ತಾವ್ ಉದ್ದೇಶಪೂರ್ವಕವಾಗಿ ವೈದ್ಯೆಯನ್ನು ಅನುಚಿತವಾಗಿ ಮುಟ್ಟಿದರು ಎಂದು ದೂರುದಾರರು ಆರೋಪಿಸಿದ್ದಾರೆ, ” ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದು ವಿಮಾನ ಇಳಿಯುವ ಮುನ್ನವೇ ಆಪಾದಿತ ಘಟನೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಎಕ್ಸಾಂ ದಿನವೇ ವಿದ್ಯಾರ್ಥಿ ಸಾವು ಪ್ರಕರಣದ ಇನ್ನೊಂದು ಮುಖ: ಏಕೈಕ ಪುತ್ರನನ್ನು ಕಳೆದುಕೊಂಡ ತಾಯಿಯ ಪ್ರಶ್ನೆಗಳಿವು..
ಇಬ್ಬರು ಸಹ-ಪ್ರಯಾಣಿಕರು ಒಬ್ಬರ ಮೇಲೆ ಇನ್ನೊಬ್ಬರು ವಾಗ್ದಾಳಿ ಮಾಡಲು ಶುರು ಮಾಡಿದ್ದು ಸಿಬ್ಬಂದಿ ಮಧ್ಯಪ್ರವೇಶಿಸಬೇಕಾಗಿ ಬಂದಿತ್ತು ಎಂದು ಅಧಿಕಾರಿ ಹೇಳಿದರು. ವಿಮಾನ ಇಳಿದ ನಂತರ, ಅಧಿಕಾರಿಗಳು ಇಬ್ಬರೂ ಪ್ರಯಾಣಿಕರನ್ನು ಸಹಾರ್ ಪೊಲೀಸ್ ಠಾಣೆಗೆ ಕರೆದೊಯ್ದು ಎಫ್ಐಆರ್ ದಾಖಲಿಸಿಕೊಂಡಿದ್ದು ನಂತರ ವೈದ್ಯೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + eleven =
Remember me
