ನವದೆಹಲಿ:ದೇಶದ ಮೊಟ್ಟ ಮೊದಲ ಇಂಗ್ಲೀಷ್ ಸುದ್ದಿ ನಿರೂಪಕಿ ಗೀತಾಂಜಲಿ ಅಯ್ಯರ್ ಅವರು ನಿಧನರಾಗಿದ್ದಾರೆ. 1971ರಲ್ಲಿ ದೂರದರ್ಶನ ಸೇರಿದ್ದ ಅವರು, 30 ವರ್ಷಗಳ ಕಾಲ ನಿರೂಪಕಿಯಾಗಿ ರಾಷ್ಟ್ರೀಯ ಸುದ್ದಿ ವಾಚನದ ಮೂಲಕ ಜನರಿಗೆ ಚಿರಪರಿಚಿತರಾಗಿದ್ದರು.
ಮೂರು ದಶಕಗಳ ವೃತ್ತಿ ಜೀವನದಲ್ಲಿ ನಾಲ್ಕು ಬಾರಿ ಅತ್ಯತ್ತಮ ನಿರೂಪಕಿ ಪ್ರಶಸ್ತಿ ಪಡೆದುಕೊಂಡಿದ್ದರು. ವೃತ್ತಿ ಹಾಗೂ ಸಾಧನೆಗಳಿಗಾಗಿ 1989ರಲ್ಲಿ ಮಹಿಳೆಯರಿಗಾಗಿ ನೀಡುವ ‘ಇಂದಿರಾ ಗಾಂಧಿ ಪ್ರಿಯದರ್ಶಿನಿ’ ಪ್ರಶಸ್ತಿಗೆ ಭಾಜನರಾಗಿದ್ದರು. ಜತೆಗೆ ‘ಖಂಡಾನ್’ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು.
ಇದನ್ನೂ ಓದಿ:ಪ್ರಧಾನಿ ಮೋದಿ ಕಲಿತ ಶಾಲೆಗೆ ಅಧ್ಯಯನ ಪ್ರವಾಸ; ಪ್ರತಿ ಜಿಲ್ಲೆಯಿಂದ 2 ವಿದ್ಯಾರ್ಥಿಗಳಿಗೆ ಅವಕಾಶ!
ದೂರದರ್ಶನದಲ್ಲಿ ಸುದ್ದಿ ನಿರೂಪಕಿಯಾಗಿದ್ದ ಗೀತಾಂಜಲಿ ಅಯ್ಯರ್, ನಿವೃತ್ತಿಯ ನಂತರ ಗೀತಾಂಜಲಿ ಕಾರ್ಪೊರೇಟ್ ಸಂವಹನ, ಸರ್ಕಾರಿ ಸಂಪರ್ಕ ಮತ್ತು ಮಾರ್ಕೆಟಿಂಗ್‌ ಕ್ಷೇತ್ರ ಪ್ರವೇಶಿಸಿದ್ದರು. ಜತೆಗೆ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ(CII)ಯಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
