ನವದೆಹಲಿ:ಏನೋ ಹೇಳಲು ಹೋಗಿ ಅತ್ಯಾಚಾರದ ಬಗ್ಗೆ ಅಪಹಾಸ್ಯ ಮಾಡಿರುವ ಈ ಜಾಹಿರಾತಿನ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿದ್ದು, ಸಂಸ್ಥೆಯ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಎರಡು ಜಾಹಿರಾತುಗಳು ಸದ್ಯ ವಿವಾದಕ್ಕೆ ಕಾರಣವಾಗಿದೆ.
ಇದನ್ನು ವೀಕ್ಷಿಸಿದ ಟ್ವಿಟರ್​ ಬಳಕೆದಾರರು ಎಎಸ್​ಸಿಐ ಗೆ ಟ್ಯಾಗ್​ ಮಾಡಿ ದಯವಿಟ್ಟು ಇದರ ಪ್ರಸಾರಕ್ಕೆ ತಡೆಹಿಡಿಯಬೇಕೆಂದು ಮನವಿ ಮಾಡಿ ಅಭಿಯಾನವನ್ನೇ ಆರಂಭಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಸಂಸ್ಥೆಗೆ ನೊಟೀಸ್​​ ಜಾರಿ ಮಾಡಿದೆ.
https://twitter.com/RishitaPrusty_/status/1532632641815515136?s=20&t=v8RMuLiwC1UyEa9nDVaQ_Mrxk3HiLA5F_5-50xChO9M
ಸಾರ್ವಜನಿಕರ ಹಿತಾಸಕ್ತಿ ಇಲ್ಲದ ಹಾಗೂ ಸಮಾಜದಲ್ಲಿ ಇನ್ನಷ್ಟು ಅತ್ಯಾಚಾರ ಪ್ರಕರಣಗಳಿಗೆ ಪ್ರಚೋದಿಸುವಂತಿರುವ ಈ ಜಾಹಿರಾತನ್ನು ಕೂಡಲೇ ಹಿಂಪಡೆಯಬೇಕೆಂದು ಅಡ್ವರ್ಟೈಸ್​​ಮೆಂಟ್​ ಸ್ಟಾಂಡರ್ಡ್​ ಆಫ್​ ಇಂಡಿಯಾ (ಎಎಸ್​ಸಿಐ) ಎಚ್ಚರಿಕೆ ನೀಡಿದೆ.
https://twitter.com/monikamanchanda/status/1532587311019438080?s=20
ಶೂಟ್​​ ಎಂಬ ಹೆಸರಿನ ಬಾಡಿ ಸ್ಪ್ರೇ ಜಾಹಿರಾತು ಇದಾಗಿದ್ದು, ಇದರಲ್ಲಿ ಬಳಸಲಾಗಿರುವ ದೃಶ್ಯ ಹಾಗೂ ಪದಗಳು ಅತ್ಯಾಚಾರಕ್ಕೆ ಪ್ರೇರೇಪಿಸುವಂತಿದೆ. ಒಂದು ಜಾಹಿರಾತಿನಲ್ಲಿ ಕೋಣೆಯಲ್ಲಿ ಯುವಕ -ಯುವತಿ ಕುಳಿತಿರುತ್ತಾರೆ. ಇಲ್ಲಿ ನಾಲ್ವರು ಯುವಕರು ಬಂದು ಬಾಡಿ ಸ್ಪ್ರೇಯನ್ನು ಕೇಳುತ್ತಾರೆ. ಹಾಗೆ ಸೂಪರ್​ ಮಾರ್ಕೆಟ್​ನಲ್ಲಿ ಕೂಡ ಒಬ್ಬ ಯುವತಿಗೆ ನಾಲ್ವರು ಯುವಕರು ಬಾಡಿ ಸ್ಟ್ರೇ ಕೇಳುತ್ತಾರೆ. ಈ ಎರಡೂ ಜಾಹಿರಾತಿನಲ್ಲಿ ಬಳಸಿರುವ ಪದ ಅತ್ಯಾಚಾರಕ್ಕೆ ಪ್ರಚೋದಿಸುವಂತಿದೆ ಎಂಬುದು ಟ್ವಿಟ್ಟಿಗರ ಆರೋಪವಾಗಿದೆ.(ಏಜೆನ್ಸೀಸ್​)
ಹೈದರಾಬಾದ್​​ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಟಿಆರ್​ಎಸ್​ ಮುಖಂಡನ ಪುತ್ರ ಭಾಗಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + seventeen =
Remember me
