ಬೆಂಗಳೂರು:‘ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎನ್ನುವಂತಾಗಿದೆ ಪ್ರಾದೇಶಿಕ ಸಾರಿಗೆ ಕಚೇರಿ (ಆರ್​ಟಿಒ) ಮೋಟಾರು ವಾಹನ ನಿರೀಕ್ಷಕರ ಪರಿಸ್ಥಿತಿ. 2008ರಲ್ಲಿ ಸೇರ್ಪಡೆಯಾಗಿರುವ 105 ಮೋಟಾರು ವಾಹನ ನಿರೀಕ್ಷಕರ ನೇಮಕಾತಿಯನ್ನು ಸಿಂಧುಗೊಳಿಸಿ ಮುಂಬಡ್ತಿ ನೀಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದರೂ ಪಾಲಿಸಲು ಮೀನಮೇಷ ಎಣಿಸುತ್ತಿರುವ ಸಾರಿಗೆ ಇಲಾಖೆಗೆ ಈಗ ನ್ಯಾಯಾಂಗ ನಿಂದನೆ ಭೀತಿ ಶುರುವಾಗಿದೆ. ಈ ಮಧ್ಯೆ ಬಡ್ತಿ ಕೊಡಲು ತಲಾ ಒಬ್ಬ ಬ್ರೇಕ್ ಇನ್​ಸ್ಪೆಕ್ಟರ್​ರಿಂದ 10 ಲಕ್ಷ ರೂ.ವರೆಗೆ ಲಂಚಕ್ಕೆ ಬೇಡಿಕೆ ಇಟ್ಟಿರುವ ಗಂಭೀರ ಆರೋಪವೂ ಕೇಳಿಬಂದಿದೆ.
ಬರೋಬ್ಬರಿ 15 ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ 2022 ಆ.30ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಅಭಯ್ ಎಸ್. ಓಕ್ ನೇತೃತ್ವದ ಪೀಠ ಅಂತ್ಯ ಹಾಡಿತ್ತು. ಷರತ್ತುಬದ್ಧವಾಗಿ ನೇಮಕಗೊಂಡು 15 ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ 105 ಇನ್​ಸ್ಪೆಕ್ಟರ್​ಗಳ ಸೇವೆಯನ್ನು ಅವರು ಸೇರ್ಪಡೆಯಾದ ದಿನದಿಂದಲೇ ಪರಿಗಣಿಸುವುದಾಗಿ ಸಾರಿಗೆ ಇಲಾಖೆ ಕಾರ್ಯದರ್ಶಿ ಹೇಳಿಕೆಯನ್ನು ನ್ಯಾಯಪೀಠ ಮಾನ್ಯ ಮಾಡಿತ್ತು. ಸುಪ್ರೀಂಕೋರ್ಟ್ ಆದೇಶಿಸಿ ಒಂದೂವರೆ ತಿಂಗಳು ಕಳೆದರೂ ಈವರೆಗೆ ಮುಂಬಡ್ತಿ ಪ್ರಕ್ರಿಯೆಯೇ ಆರಂಭವಾಗಿಲ್ಲ. ಸಾರಿಗೆ ಇಲಾಖೆ ಉದಾಸೀನ ಧೋರಣೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬ್ರೇಕ್ ಇನ್​ಸ್ಪೆಕ್ಟರ್​ಗಳು, ಸುಪ್ರೀಂಕೋರ್ಟ್​ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದು ಅದಕ್ಕೆ ಬೇಕಾದ ಸಿದ್ಧತೆ ಆರಂಭಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ವಿಚಾರಿಸಿದರೆ ಸಾರಿಗೆ ಇಲಾಖೆ ಆಯುಕ್ತರನ್ನು ಕೇಳಿ ಎನ್ನುತ್ತಾರೆ. ಆಯುಕ್ತರಿಗೆ ಮನವಿ ಸಲ್ಲಿಸಿದರೆ, ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ನಡೆಯಬೇಕು ಎಂಬ ಸಮಜಾಯಿಷಿ ನೀಡುತ್ತಿದ್ದಾರೆ. ಬೇಕಾಬಿಟ್ಟಿ ವರ್ತನೆಯಿಂದ ರೋಸಿಹೋಗಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ತೀರ್ವನಿಸಿದ್ದೇವೆ ಎಂದು ಬ್ರೇಕ್ ಇನ್​ಸ್ಪೆಕ್ಟರ್​ಗಳು ಅಳಲು ತೋಡಿಕೊಂಡಿದ್ದಾರೆ. ಇಲಾಖಾ ಮಟ್ಟದಲ್ಲಿ ಮುಂಬಡ್ತಿ ಕೊಡುವುದು ಸಾಮಾನ್ಯ ಪ್ರಕ್ರಿಯೆ ಆಗಿರುವುದರಿಂದ ಒಂದೇ ವಾರದಲ್ಲಿ ಪೂರ್ಣಗೊಳಿಸಬಹುದು. ಆದರೆ, ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ. ತಲಾ ಒಬ್ಬ ಬ್ರೇಕ್ ಇನ್​ಸ್ಪೆಕ್ಟರ್ 10 ಲಕ್ಷ ರೂ.ನಂತೆ ನಿರೀಕ್ಷೆ ಮಾಡಲಾಗುತ್ತಿದೆ. ಆದರೆ, ಅಷ್ಟೊಂದು ಮೊತ್ತ ಕೊಡಲು ಯಾರೂ ಒಪ್ಪದ ಹಿನ್ನೆಲೆಯಲ್ಲಿ ಮುಂಬಡ್ತಿ ಪ್ರಕ್ರಿಯೆ ಪ್ರಗತಿ ಕಂಡಿಲ್ಲ. ಸುಪ್ರೀಂಕೋರ್ಟ್ ಆದೇಶದ ನಂತರವೂ ಲಂಚಕ್ಕಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.
ಹಳಬರಿಗೆ ಬಡ್ತಿ ಸಿಕ್ಕರೆ ಹೊಸಬರಿಗೆ ಜಾಗ:ರಾಜ್ಯದಲ್ಲಿ 20ಕ್ಕೂ ಅಧಿಕ ಆರ್​ಟಿಒಗಳಲ್ಲಿ ಇನ್​ಸ್ಪೆಕ್ಟರ್​ಗಳೇ ಇಲ್ಲ. ಹೀಗಾಗಿ ಒಬ್ಬ ಇನ್​ಸ್ಪೆಕ್ಟರ್ ಮೂರಾಲ್ಕು ಕಚೇರಿಗಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಹೈಕೋರ್ಟ್ ಆದೇಶದ ಅನ್ವಯ ಈಗಾಗಲೆ 141 ಬ್ರೇಕ್ ಇನ್​ಸ್ಪೆಕ್ಟರ್​ಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇನ್ನೊಂದೆಡೆ ಸುಪ್ರೀಂಕೋರ್ಟ್ ಆದೇಶದನ್ವಯ ಪ್ರತ್ಯೇಕವಾಗಿ 33 ಅಭ್ಯರ್ಥಿಗಳ ನೇಮಕಾತಿಯೂ ನಡೆಯುತ್ತಿದೆ. ಇದು ಪೂರ್ಣಗೊಂಡರೆ ಒಟ್ಟು 174 ಮೋಟಾರು ವಾಹನ ನಿರೀಕ್ಷಕರು ಸಾರಿಗೆ ಇಲಾಖೆಗೆ ಸೇರ್ಪಡೆಯಾಗಲಿದ್ದಾರೆ. 105 ಮಂದಿಗೆ ಹಿರಿಯ ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಬಡ್ತಿ ಕೊಟ್ಟರೆ ಹೊಸದಾಗಿ ಬರುವವರಿಗೆ ಅನುಕೂಲವಾಗಲಿದೆ.
ಕೆಎಟಿ ಆದೇಶಕ್ಕೂ ಕಿಮ್ಮತ್ತಿಲ್ಲ:ಕಾಲಮಿತಿ ವೇತನ ಬಡ್ತಿ ಕೊಡಲು ಸಾರಿಗೆ ಇಲಾಖೆಗೆ ನಿರ್ದೇಶನ ನೀಡುವಂತೆ ಕೆಲ ಬ್ರೇಕ್ ಇನ್​ಸ್ಪೆಕ್ಟರ್​ಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ, 3 ತಿಂಗಳ ಒಳಗೆ ಕಾಲಮಿತಿ ವೇತನ ಬಡ್ತಿ ಕೊಡಬೇಕು ಎಂದು 2021ರ ನ.11ರಂದೇ ಆದೇಶ ಹೊರಡಿಸಿದೆ. ಆದರೆ, ಕೆಎಟಿ ಆದೇಶವಾಗಿ 10 ತಿಂಗಳಾದರೂ ಈವರೆಗೆ ಪಾಲಿಸಿಲ್ಲ. ಈಗ ಸುಪ್ರೀಂಕೋರ್ಟ್ ಆದೇಶಕ್ಕೂ ಬೆಲೆ ಕೊಡದೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಅಂದಿನ ಪರಿಸ್ಥಿತಿಯೇ ಬೇರೆ, ಈಗ ಹಾಗಿಲ್ಲ: ಯಕ್ಷಗಾನಕ್ಕೆ ಕಾಲಮಿತಿ ಒಳಿತು..

‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 4 =
Remember me
