ಮುಂಬೈ:ಯೆಸ್​ ಬ್ಯಾಂಕ್​ ದಿವಾಳಿ ಎಬ್ಬಿಸಿದ ಸಂಸ್ಥಾಪಕ ರಾಣಾ ಕಪೂರ್​ಗೆ ಸಿಬಿಐ ಶಾಕ್ ನೀಡಿದೆ. ಮುಂಬೈನಲ್ಲಿ ರಾಣಾ ಕಪೂರ್​ಗೆ ಸೇರಿದ ಮನೆ ಹಾಗೂ ಕಚೇರಿಗಳು ಸೇರಿ ಒಟ್ಟು ಏಳು ಸ್ಥಳಗಳಲ್ಲಿ ಸೋಮವಾರ ಸಿಬಿಐ ದಾಳಿ ನಡೆಸಿದೆ. ರಾಣಾ ಕಪೂರ್, ದಿವಾನ್ ಹೌಸಿಂಗ್ ಮತ್ತು ಫೈನಾನ್ಸ್ ಲಿಮಿಡೆಟ್ ಕಂಪನಿಯಿಂದ ಸುಮಾರು 600 ಕೋಟಿ ರೂಪಾಯಿ ಲಂಚ ಪಡೆದಿರುವ ಆರೋಪದ ಮೇಲೆ ಸಿಬಿಐ ಅಧಿಕಾರಿಗಳ ತಂಡ ದಾಳಿಮಾಡಿ ಶೋಧಿಸಿದೆ.
ರಾಣಾ ಕಪೂರ್(62), ಡಿಹೆಚ್​ಎಫ್​​ಎಲ್​ನ ಪ್ರವರ್ತಕ ಕಪಿಲ್ ವಧಾವನ್ ಅವರ ಡಿಹೆಚ್​ಎಫ್​​ಎಲ್​ ಕಂಪನಿಗೆ ಯೆಸ್​ ಬ್ಯಾಂಕ್​ ಮೂಲಕ ಅಕ್ರಮವಾಗಿ ಹಣಕಾಸಿನ ನೆರವು ನೀಡಿದ್ದರು. ಈ ಮೂಲಕ ಕ್ರಿಮಿನಲ್ ಪಿತೂರಿ ನಡೆಸಿ ರಾಣಾ ಮತ್ತು ಕುಟುಂಬದ ಸದಸ್ಯರು ವೈಯಕ್ತಿಕ ಲಾಭ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಿಬಿಐ ಎಫ್​ಐಆರ್​ನಲ್ಲಿ ತಿಳಿಸಿರುವಂತೆ ಈ ಹಗರಣ 2018ರ ಏಪ್ರಿಲ್ ಮತ್ತು ಜೂನ್ ತಿಂಗಳಲ್ಲಿ ನಡೆದಿದ್ದು, ಯೆಸ್​ ಬ್ಯಾಂಕ್​​​​ ಸುಮಾರು 3,700 ಕೋಟಿಯಷ್ಟು ಸಾಲವನ್ನು ಡಿಎಚ್​ಎಫ್​ಎಲ್ ಕಂಪನಿಗೆ ಅಲ್ಪ ಅವಧಿಗೆ ​ಡಿಬೆಂಚರ್​ ಮೂಲಕ ನೀಡಿತ್ತು.
ಇದಕ್ಕಾಗಿ ಕಪಿಲ್ ವಾಧವನ್ 600 ಕೋಟಿ ರೂಪಾಯಿಯನ್ನ ಕಿಕ್ ಬ್ಯಾಂಕ್ ರೂಪದಲ್ಲಿ ರಾಣಾ ಕಪೂರ್ ಮತ್ತು ಅವರ ಕುಟುಂಬ ಸದಸ್ಯರ ಒಡೆತನದ ‘ಡುಇಟ್ ಅಬರ್ನ್ ವೆಂಚರ್ಸ್ (ಇಂಡಿಯಾ) ಪ್ರೈವೇಟ್ ಲಿಮಿಡೆಟ್​ಗೆ ಸಂದಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಭಾನುವಾರ ಇ.ಡಿ. ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ರಾಣಾ ಕಪೂರ್ ಅವರನ್ನ ಬಂಧಿಸಿತ್ತು. ರಾಣಾರನ್ನು ವಿಚಾರಣೆಗಾಗಿ ಮುಂಬೈ ಕೋರ್ಟ್ ಬುಧವಾರದ ವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ. (ಏಜೆನ್ಸೀಸ್)
ಯೆಸ್​ ಬ್ಯಾಂಕ್​ ಗ್ರಾಹಕರೇ ಹೆದರಬೇಡಿ, ನಿಮ್ಮೊಂದಿಗೆ ನಾವಿದ್ದೇವೆ: ಎಸ್​ಬಿಐ ಅಧ್ಯಕ್ಷರಿಂದ ಭರವಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
