ನವದೆಹಲಿ: ಲಾಕ್​ಡೌನ್ ಹಿನ್ನೆಲೆಯಲ್ಲಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಆರಂಭಿಸಲಾಗಿರುವ ವಂದೇ ಭಾರತ್ ಮಿಷನ್​ನಲ್ಲಿ ಈಗಾಗಲೇ 6 ಸಾವಿರಕ್ಕೂ ಹೆಚ್ಚು ಭಾರತೀಯರು ಸ್ವದೇಶಕ್ಕೆ ಬಂದು ಸೇರಿದ್ದಾರೆ. 12 ದೇಶಗಳಿಂದ 31 ವಿಶೇಷ ವಿಮಾನಗಳ ಮೂಲಕ ಭಾರತೀಯರನ್ನು ಕರೆತರಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ತಿಳಿಸಿದೆ.
ಬ್ರಿಟನ್​ನಿಂದ ಹೊರಟಿದ್ದ ಬೋಯಿಂಗ್ 773 ವಿಮಾನ ಮಂಗಳವಾರ ಹೈದರಾಬಾದ್ ವಿಮಾನ ನಿಲ್ದಾಣ ಬಂದು ತಲುಪಿದೆ. ಇದರಲ್ಲಿ 331 ಭಾರತೀಯರು ಬಂದಿದ್ದಾರೆ. ನಂತರ ಇದೇ ವಿಮಾನವು ದೆಹಲಿ ಮುಖಾಂತರ ಅಮೆರಿಕಕ್ಕೆ ತೆರಳಿದೆ. 87 ಜನರು ಈ ವಿಮಾನದಲ್ಲಿ ಅಮೆರಿಕಕ್ಕೆ ತೆರಳಿದ್ದಾರೆ. ಬಾಂಗ್ಲಾದೇಶದ ಢಾಕಾದಲ್ಲಿ ಸಿಲುಕಿದ್ದ 169 ವಿದ್ಯಾರ್ಥಿಗಳನ್ನು ಜಮ್ಮು-ಕಾಶ್ಮೀರಕ್ಕೆ ಕರೆ ತರಲಾಗಿದೆ. ಬಾಂಗ್ಲಾದೇಶದಿಂದ ದೇಶಕ್ಕೆ ಮರಳಿದ ನಾಲ್ಕನೇ ವಿಮಾನ ಇದಾಗಿದೆ. ಫಿಲಿಪ್ಪೀನ್ಸ್​ನ ಮನಿಲಾದಿಂದ ಹೊರಟಿದ್ದ ವಿಮಾನವು ಅಹಮದಾಬಾದ್ ಬಂದು ತಲುಪಿದೆ.
ಇದನ್ನೂ ಓದಿಕೆಎಸ್‌ಆರ್‌ಟಿಸಿ ಬಸ್, ಮೆಟ್ರೋ ರೈಲು ಸಂಚಾರ ಯಾವಾಗ ಆರಂಭ?
ಈ ವಿಮಾನದಲ್ಲಿ 139 ವಿದ್ಯಾರ್ಥಿಗಳು ಬಂದಿಳಿದಿದ್ದಾರೆ. ವಿದ್ಯಾರ್ಥಿಗಳನ್ನು ಅವರ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದೆ. ಕೇರಳದ ಕಣ್ಣೂರಿಗೆ ಮಂಗಳವಾರದಂದು ಮೊದಲ ವಿಮಾನ ಬಂದು ತಲುಪಿದೆ. ಬೆಳಗ್ಗೆ 10.30ಕ್ಕೆ ದುಬೈನಿಂದ ಹೊರಟಿದ್ದ ವಿಮಾನ ಸಂಜೆ 7.10ಕ್ಕೆ ಕಣ್ಣೂರಿಗೆ ಬಂದಿಳಿದಿದೆ. ಕಣ್ಣೂರಿನ 109, ಕಾಸರಗೋಡಿನ 47 ಮತ್ತು ಕೋಳಿಕೋಡ್​ನ 12 ಭಾರತೀಯರು ಈ ವಿಮಾನದಲ್ಲಿ ಬಂದಿಳಿದಿದ್ದಾರೆ. ಓಮನ್​ನಿಂದ ಎರಡನೇ ವಿಮಾನವು ಭಾರತಕ್ಕೆ ಬಂದಿಳಿದಿದೆ. ಈ ಹಿಂದೆ ಮೇ.9ರಂದು ಓಮನ್ ಮತ್ತು ಕುವೈತ್​ನಿಂದ ಎರಡು ವಿಮಾನಗಳ ಮೂಲಕ 362 ಭಾರತೀಯನ್ನು ಕೇರಳದ ಕೊಚ್ಚಿಗೆ ತಂದು ಬಿಡಲಾಗಿತ್ತು. ಮಾಲ್ಡೀವ್ಸ್​ಗೆ ತೆರಳಿದ್ದ ಐಎನ್​ಎಸ್ ಮಗರ್ ಯುದ್ಧ ನೌಕೆಯು ಕೇರಳದ ಕೊಚ್ಚಿಗೆ ಸಂಜೆ 6 ಗಂಟೆಯ ಹೊತ್ತಿಗೆ ಮರಳಿದೆ.
ಎರಡನೇ ಹಂತಕ್ಕೆ ಅಣಿ
ವಂದೇ ಭಾರತ್ ಮಿಷನ್​ನ ಮೊದಲನೇ ಹಂತ ಮೇ 16ಕ್ಕೆ ಮುಗಿಯಲಿದ್ದು ಅಂದಿನಿಂದ ಮೇ 22ರವರೆಗೆ ಎರಡನೇ ಹಂತ ಜಾರಿಯಲ್ಲಿರಲಿದೆ. ಎರಡನೇ ಹಂತದಲ್ಲಿ 149 ವಿಮಾನಗಳ ಮೂಲಕ ಭಾರತೀಯರನ್ನು ಕರೆತರಲಾಗುವುದು. ಒಟ್ಟು 31 ದೇಶಗಳಲ್ಲಿರುವವರನ್ನು ಕರೆ ತರುವುದಾಗಿ ತಿಳಿಸಲಾಗಿದೆ. ಅಮೆರಿಕದಿಂದ 13 ವಿಮಾನ, ಅರಬ್ ಸಂಯುಕ್ತ ಸಂಸ್ಥಾನದಿಂದ (ಯುಎಇ) 11, ಕೆನಡಾದಿಂದ 10, ಸೌದಿ ಅರೇಬಿಯಾ ಮತ್ತು ಬ್ರಿಟನ್​ನಿಂದ ತಲಾ 9, ಮಲೇಷ್ಯಾ ಮತ್ತು ಓಮನ್​ನಿಂದ ತಲಾ 8, ಕಜಕಿಸ್ತಾನ್ ಮತ್ತು ಆಸ್ಟ್ರೇಲಿಯಾದಿಂದ ತಲಾ 7 ವಿಮಾನ ಗಳು ಬರಲಿವೆ. ಉಕ್ರೇನ್, ಕತಾರ್, ಇಂಡೋನೇಷ್ಯಾ, ರಷ್ಯಾ, ಫಿಲಿಪೈನ್ಸ್, ಫ್ರಾನ್ಸ್, ಸಿಂಗಾಪುರ ಹಾಗೂ ಹಲವು ದೇಶಗಳಿಂದ ಭಾರತೀಯರನ್ನು ಕರೆತರಲಾಗುತ್ತಿದೆ. ಮೇ 7ರಿಂದ ವಂದೇ ಭಾರತ್ ಮಿಷನ್ ಆರಂಭವಾಗಿದೆ. ಒಟ್ಟು 64 ವಿಮಾನಗಳ ಮೂಲಕ 12 ದೇಶಗಳಲ್ಲಿರುವ 15,000 ಭಾರತೀಯರನ್ನು ಮೊದಲನೇ ಹಂತದಲ್ಲಿ ಕರೆತರಲಾಗುತ್ತಿದೆ.
ವಿದೇಶಿಗರಿಗೆ ಅವಕಾಶ
ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತೀಯರನ್ನು ಕರೆತರುವುದಷ್ಟೇ ಅಲ್ಲದೆ, ಭಾರತದಲ್ಲಿರುವ ವಿದೇಶಿಗರನ್ನು ಸಹ ಅವರ ದೇಶಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಇದುವರೆಗೆ 25 ವಿಮಾನಗಳಲ್ಲಿ 883 ವಿದೇಶಿಗರನ್ನು ಅವರ ದೇಶಗಳಿಗೆ ಕಳುಹಿಸಲಾಗಿದೆ. ವಂದೇ ಭಾರತ್ ಮಿಷನ್ ಮೂಲಕ ಕಾರ್ಯಾಚರಣೆ 12 ದೇಶಗಳಿಂದ 31 ವಿಶೇಷ ವಿಮಾನ ಆಗಮನ
ಈ ವ್ಯಕ್ತಿಗೆ ಬಿಲ್ ನೋಡಿ ಕರೆಂಟ್ ಹೊಡೆದಂಗಾಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − ten =
Remember me
