ಮುಂಬೈ:ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಗುಜರಾತ್‌ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಮುಂಬೈನಲ್ಲಿ ಇಸ್ಲಾಮಿಕ್‌ ಬೋಧಕ ಮುಫ್ತಿ ಸಲ್ಮಾನ್‌ ಅಝಾರಿಯನ್ನು ಬಂಧಿಸಿದ್ದಾರೆ.
ಮುಂಬೈ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ, ಗುಜರಾತ್ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಭಾನುವಾರ ಮುಂಬೈನಲ್ಲಿ ಇಸ್ಲಾಮಿಕ್ ಬೋಧಕ ಮುಫ್ತಿ ಸಲ್ಮಾನ್ ಅಝಾರಿಯನ್ನು ಉಗ್ರ ಭಾಷಣ ಮಾಡಿದ ಆರೋಪದ ಮೇಲೆ ಬಂಧಿಸಿದೆ.
ಗುಜರಾತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದುಗಳನ್ನು ನಾಯಿಗೆ ಹೋಲಿಸಿದ ಬಳಿಕ ವಿವಾದ ಉಂಟಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಟಿಎಸ್‌ ಅಧಿಕಾರಿಗಳು ಮುಫ್ತಿ ಸಲ್ಮಾನ್‌ ಅಝಾರಿ ಅವರನ್ನು ಮುಂಬೈನಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಮುಫ್ತಿ ಸಲ್ಮಾನ್ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನೂರಾರು ಬೆಂಬಲಿಗರು ಠಾಣೆಯ ಹೊರಗೆ ಜಮಾಯಿಸಿದ್ದರು. ಈ ಪ್ರದೇಶದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಪೊಲೀಸರು ಮಫ್ತಿ ಬೆಂಬಲಿಗರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೌಲಾನಾ ಮುಫ್ತಿ ಸಲ್ಮಾನ್ ಅಝಾರಿಯನ್ನು ಕರೆತಂದ ನಂತರ ಘಾಟ್ಕೋಪರ್ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದ ಮುಫ್ತಿ, ದ್ವೇಷಭಾಷಣ ಮಾಡಿದ್ದರು. “ಈಗ ನಾಯಿಗಳ ಕಾಲ ನಡೆಯುತ್ತಿದೆ. ಮುಂದೆ ನಮಗೂ ಒಂದು ಕಾಲ ಬರುತ್ತದೆ” ಎಂಬುದಾಗಿ ಹೇಳಿದ್ದರು ಎಂದು ತಿಳಿದುಬಂದಿದೆ. ಈ ವಿಡಿಯೊ ವೈರಲ್‌ ಆಗುತ್ತಲೇ  ಮುಫ್ತಿಯನ್ನು ಬಂಧಿಸಲಾಗಿದೆ.
'Hindus are dogs, it's their time but our time will also come – IsIamic leader Mufti Salman Azhari openly threatens Hindus for consequences"
This won't attract media coverage. It won't be called a hate speech but if any Hindu replies to him in his own language, that will become…pic.twitter.com/Oek0nG5dGt
— Mr Sinha (@MrSinha_)February 2, 2024

ಪೊಲೀಸ್‌ ಠಾಣೆಯ ಕಿಟಕಿಯಿಂದಲೇ ಸಾವಿರಾರು ಅನುಯಾಯಿಗಳನ್ನು ಉದ್ದೇಶಿಸಿ ಬಂಧಿತ ಮುಫ್ತಿ ಸಲ್ಮಾನ್‌ ಅಝಾರಿ ಮಾತನಾಡಿದ್ದಾರೆ. “ನಾನೇನೂ ಅಪರಾಧ ಮಾಡಿ ಇಲ್ಲಿಗೆ ಬಂಧಿಲ್ಲ. ನಾನು ಕ್ರಿಮಿನಲ್‌ ಅಲ್ಲವೇ ಅಲ್ಲ. ಹಾಗಾಗಿ, ಯಾರೂ ಪ್ರಚೋದನಕಾರಿಯಾಗಿ ನಡೆದುಕೊಳ್ಳಬಾರದು. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ತನಿಖೆಗೆ ನಾನು ಸಹಕರಿಸುತ್ತಿದ್ದೇನೆ. ದಯಮಾಡಿ ಯಾರು ಕೂಡ ಪ್ರತಿಭಟನೆ ನಡೆಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಾರದು. ದಯಮಾಡಿ ಪ್ರತಿಭಟನೆ ಕೈಬಿಡಿ” ಎಂಬುದಾಗಿ ಮುಫ್ತಿ ಸಲ್ಮಾನ್‌ ಅಝಾರಿ ಹೇಳಿರುವ ವಿಡಿಯೋ ವೈರಲ್‌ ಆಗಿದೆ.
ಸಾನಿಯಾ ಮಿರ್ಜಾ ಮಗನಿಗೆ ಶಾಲೆಯಲ್ಲಿ ಕಿರುಕುಳ; ಇನ್ಮುಂದೆ ಶಾಲೆಗೆ ಹೋಗುವುದಿಲ್ಲವೆಂದು ಹಠ ಹಿಡಿದ ಪುತ್ರ..ತಂದೆ 3ನೇ ಮದುವೆಯೇ ಕಾರಣ!

8 ವರ್ಷದ ನಂತ್ರ ಮೊದಲ ಬಾರಿಗೆ ಬುರ್ಖಾ ತೆಗೆದು ಫೋಟೋ ಪೋಸ್​ ಕೊಟ್ಟ ಕ್ರಿಕೆಟರ್ ಇರ್ಫಾನ್ ಪಠಾಣ್ ಪತ್ನಿ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:5 × 1 =
Remember me
