ನವದೆಹಲಿ:ಬ್ರಿಟನ್​​ ಪ್ರಧಾನಿ ರಿಷಿ ಸುನಕ್​ ಮತ್ತು ಅವರ ಪತ್ನಿ ಅಕ್ಷತಾ ಮೂತ್ರಿ ಇಂದು (ಸೆ.10) ಬೆಳಗ್ಗೆ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ದೆಹಲಿ ನಡೆಯುತ್ತಿರುವ ಜಿ-20 ಶೃಂಗಸಭೆಗೆ ಆಗಮಿಸಿರುವ ಸುನಕ್​, ಶುಕ್ರವಾರ (ಸೆ.08) ಮಾಧ್ಯಮಗಳ ಮುಂದೆ ಮಾತನಾಡುವಾಗ ತಮ್ಮನ್ನು ತಾವು “ಹೆಮ್ಮೆಯ ಹಿಂದು” ಎಂದು ಹೇಳಿಕೊಂಡರು. ಅಲ್ಲದೆ, ದೆಹಲಿಯದ ದೇವಾಲಯಕ್ಕೆ ಭೇಟಿ ನೀಡುವ ಆಸೆಯನ್ನು ವ್ಯಕ್ತಪಡಿಸಿದ್ದರು.
ಇಂದು ಬೆಳಗ್ಗೆ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿದ ಸುನಕ್​ ದಂಪತಿ, ಸುಮಾರು ಒಂದು ಗಂಟೆಗಳ ಕಾಲ ಸಮಯ ಕಳೆದರು. ಅವರ ಆಗಮನಕ್ಕೂ ಮುನ್ನ ದೇವಾಲಯದಲ್ಲಿ ಅಗತ್ಯವಾದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿತ್ತು. ದೇವಸ್ಥಾನದ ಏರಿಯಾದಲ್ಲಿ ಭದ್ರತಾ ಸಿಬ್ಬಂದಿಯ ದೊಡ್ಡ ಗುಂಪನ್ನು ನಿಯೋಜನೆ ಮಾಡಲಾಗಿತ್ತು.
ಹಿಂದಿನ ಶುಕ್ರವಾರ ಸುನಕ್ ಅವರು ಹಿಂದು ಹಬ್ಬ ರಕ್ಷಾ ಬಂಧನವನ್ನು ಆಚರಿಸಿದರು. ನಾನೊಬ್ಬ ಹೆಮ್ಮೆಯ ಹಿಂದು. ನಾನು ಹೀಗೆ ಬೆಳೆದಿದ್ದೇನೆ, ನಾನು ಹೀಗೇ ಇದ್ದೇನೆ ಮತ್ತು ಮುಂದೆಯೂ ಹೀಗೆ ಇರುತ್ತೇನೆ. ನಾನು ಮುಂದಿನ ಒಂದೆರಡು ದಿನಗಳಲ್ಲಿ ದೆಹಲಿಯಲ್ಲಿ ಇರುವ ಸಮಯದಲ್ಲಿ ಮಂದಿರಕ್ಕೆ ಭೇಟಿ ನೀಡುತ್ತೇನೆ ಎಂದು ಶುಕ್ರವಾರ ಹೇಳಿದರು.
ಇದನ್ನೂ ಓದಿ:ಮಳೆ ಭೀತಿ ನಡುವೆ ಇಂದು ಭಾರತ-ಪಾಕ್ ಸೂಪರ್ ಸೆಣಸಾಟ: ರೋಹಿತ್ ಪಡೆಗೆ ಕೆಎಲ್ ರಾಹುಲ್ ಬಲ
ಶನಿವಾರ ಆರಂಭವಾಗಿರುವ ಎರಡು ದಿನಗಳ G20 ಶೃಂಗಸಭೆಯಲ್ಲಿ ಭಾಗವಹಿಸಲು ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಶುಕ್ರವಾರ ದೆಹಲಿಗೆ ಬಂದಿಳಿದರು. ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಆತ್ಮೀಯವಾಗಿ ಬರಮಾಡಿಕೊಂಡರು ಮತ್ತು ರುದ್ರಾಕ್ಷಿ ಮಣಿಗಳು, ಭಗವದ್ಗೀತೆಯ ಪ್ರತಿ ಮತ್ತು ಹನುಮಾನ್ ಚಾಲೀಸಾವನ್ನು ಅವರಿಗೆ ಉಡುಗೊರೆಯಾಗಿ ನೀಡಲಾಯಿತು.
ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ರಿಷಿ ಸುನಕ್ ಅವರನ್ನು ಭೇಟಿಯಾಗಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ವ್ಯಾಪಾರ ಸಂಬಂಧಗಳನ್ನು ಗಾಢವಾಗಿಸಲು ಮತ್ತು ಹೂಡಿಕೆಯನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಉಭಯ ನಾಯಕರು ಚರ್ಚಿಸಿದರು. ಶೃಂಗಸಭೆ ನಡೆಯುತ್ತಿರುವ ಕೇಂದ್ರ ದೆಹಲಿಯ ಪ್ರಗತಿ ಮೈದಾನದ ಸುತ್ತಮುತ್ತ ಬಹು ಪದರದ ಭದ್ರತೆಯನ್ನು ಹಾಕಲಾಗಿದೆ. ನವದೆಹಲಿ ಮತ್ತು ಗಡಿ ಪ್ರದೇಶಗಳಲ್ಲಿ ಸಂಚಾರ ನಿಯಮಗಳನ್ನು ಕಠಿಣಗೊಳಿಸಲಾಗಿದೆ.(ಏಜೆನ್ಸೀಸ್​)
ವಿನೂ ಮಂಕಡ್ ಟ್ರೋಫಿ ಸಂಭಾವ್ಯ ರಾಜ್ಯ ತಂಡದಲ್ಲಿ ಸಮಿತ್ ದ್ರಾವಿಡ್

ಮೊರಾಕ್ಕೋ ಭೀಕರ ಭೂಕಂಪಕ್ಕೆ ಮೃತಪಟ್ಟವರ ಸಂಖ್ಯೆ 2000ಕ್ಕೆ ಏರಿಕೆ: ಕಂಬನಿ ಮಿಡಿದ ಜಗತ್ತು, ನೆರವಿನ ಮಹಾಪೂರ

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:3 + 7 =
Remember me
