ಭುವನೇಶ್ವರ: ಕರೊನಾ ವೈರಸ‌ನಿಂದಾಗಿ ಜಗತ್ತಿನೆಲ್ಲೆಡೆ ಈಗ ಮಾಸ್ಕ್‌ಗೆ ಬೇಡಿಕೆ ಹೆಚ್ಚಿದೆ. ಹಲವು ಮಳಿಗೆಗಳಲ್ಲಿ ಮಾಸ್ಕ್‌ ಸಿಗದೇ ಜನರು ಪರದಾಡುತ್ತಿದ್ದರೆ, ಇನ್ನು ಕೆಲವು ಮಳಿಗೆಗಳು 3-4 ಪಟ್ಟು ಹೆಚ್ಚಿನ ಬೆಲೆಗೆ ಮಾಸ್ಕ್‌ಗಳನ್ನು ಮಾರಾಟ ಮಾಡುತ್ತಿವೆ. ಮಾಸ್ಕ್‌ ಕೊರತೆಯನ್ನೇ ಬಂಡವಾಳವಾಗಿಸಿಕೊಂಡ ಕೆಲವರು ಸರ್ಕಾರಗಳ ಸೂಚನೆ, ನಿರ್ದೇಶನಗಳ ನಡುವೆಯೂ ಕಳಪೆ ಗುಣಮಟ್ಟದ ಬಟ್ಟೆಯಿಂದ ಮಾಸ್ಕ್‌ ತಯಾರಿಸಿ ಹಣ ಕೀಳುತ್ತಿದ್ದಾರೆ.
ಇದೇ ಕಾರಣಕ್ಕಾಗಿ ಮನೆಯಲ್ಲಿಯೇ ಸುಲಭದಲ್ಲಿ ಮಾಸ್ಕ್‌ ತಯಾರಿಸಿಕೊಳ್ಳಬಹುದು ಎಂದು ಈಗಾಗಲೇ ಸರ್ಕಾರ ಸೂಚನೆಯನ್ನೂ ಕೊಟ್ಟಿದ್ದು, ಅದನ್ನು ಹೇಗೆ ತಯಾರಿಸಿಕೊಳ್ಳಬಹುದು ಎಂಬ ಬಗ್ಗೆ ನಿರ್ದೇಶನವನ್ನೂ ನೀಡಿದೆ. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ ಎನ್ನುವ ಕಾರಣದಿಂದ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧಮೇಂದ್ರ ಪ್ರಧಾನ್‌ ಅವರ ಪತ್ನಿ ಮತ್ತು ಮಗಳು ಮನೆಯಲ್ಲಿಯೇ ಮಾಸ್ಕ್‌ ತಯಾರಿಸಿ ಅದನ್ನು ಅಗತ್ಯ ಇರುವವರಿಗೆ ಉಚಿತವಾಗಿ ಮಾರಾಟ ಮಾಡುತ್ತಿದ್ದಾರೆ.
ತಮ್ಮ ಪತ್ನಿ ಮತ್ತು ಮಗಳು ಮಾಸ್ಕ್‌ ತಯಾರಿಸುತ್ತಿರುವ ಫೋಟೋವನ್ನು ಧರ್ಮೇಂದ್ರ ಪ್ರಧಾನ್‌ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಪತ್ನಿ ಮೃದುಲಾ ಮತ್ತು ಮಗಳು ನೈಮಿಶಾ ಹೊಲಿಗೆ ಯಂತ್ರ ಬಳಸಿ ಮಾಸ್ಕ್ ತಯಾರಿಸುತ್ತಿರುವುದು ಚಿತ್ರದಲ್ಲಿ ಕಾಣಬಹುದು,
‘ ಮಾಸ್ಕ್‌ ಇಂದಿನ ತುರ್ತು ಅಗತ್ಯವಾಗಿದೆ. ಈ ಕಷ್ಟದ ಸಮಯದಲ್ಲಿ ನಾವೆಲ್ಲರೂ ಸಮಾಜಕ್ಕೆ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಮಾಡಬೇಕು. ಈ ನಿಟ್ಟಿನಲ್ಲಿ ನನ್ನ ಪತ್ನಿ ಮತ್ತು ಮಗಳು ಮಾಸ್ಕ್‌ ತಯಾರಿಸುವ ಬಗ್ಗೆ ಯೋಚಿಸಿ ಅದನ್ನು ಈಗಾಗಲೇ ಶುರು ಮಾಡಿದ್ದಾರೆ. ಅವರ ಬಗ್ಗೆ ನನಗೆ ಹೆಮ್ಮೆ ಇದೆ. ಎಷ್ಟು ಸಾಧ್ಯವೋ ಅಷ್ಟು ಮಾಸ್ಕ್‌ ತಯಾರಿಸಿ ಉಚಿತವಾಗಿ ಹಂಚುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜನ್ಸೀಸ್‌)
https://www.vijayavani.net/kerala-woman-in-israel-who-tested-positive-for-covid-19-shares-her-near-death-experience/
We should all try and do our bit for society in these difficult times. Proud of my wife Mridula and daughter Naimisha who are making safety masks for all of us at home, and also for others who need it. No better time to hone your skills and learn new ones.#Masks4Allpic.twitter.com/YtGNZvj7VS— Dharmendra Pradhan (@dpradhanbjp)April 7, 2020
We should all try and do our bit for society in these difficult times. Proud of my wife Mridula and daughter Naimisha who are making safety masks for all of us at home, and also for others who need it. No better time to hone your skills and learn new ones.#Masks4Allpic.twitter.com/YtGNZvj7VS


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
