ನವದೆಹಲಿ:ಮಾರ್ಚ್ ತಿಂಗಳ ಭವಿಷ್ಯ ನಿಧಿ (ಪಿಎಫ್) ವಂತಿಗೆ ಪಾವತಿಸುವ ಅವಧಿಯನ್ನು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮೇ ತಿಂಗಳವರೆಗೆ ಮುಂದೂಡಿದ್ದು, ಇದರಿಂದ 6 ಲಕ್ಷ ಉದ್ಯೋಗದಾತ ಸಂಸ್ಥೆಗಳಿಗೆ ಮತ್ತು 5 ಕೋಟಿ ಉದ್ಯೋಗಸ್ಥರಿಗೆ ಸಹಾಯವಾಗಲಿದೆ.
ಈ ವಂತಿಗೆಯನ್ನು ಏಪ್ರಿಲ್ 15ರೊಳಗೆ ಪಾವತಿಸಬೇಕಾಗಿತ್ತು. ಅದಕ್ಕೀಗ ಮೇ 15ರವರೆಗೂ ಸಮಯ ಸಿಗಲಿದೆ. ಕರೊನಾ ಹಾವಳಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿರುವುದರಿಂದ ಉದ್ಯೋಗಿಗಳು ಮತ್ತು ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿದ್ದು, ಅದಕ್ಕಾಗಿ ಈ ಅವಧಿ ವಿಸ್ತರಣೆಯ ಕ್ರಮ ಕೈಗೊಳ್ಳಲಾಗಿದೆ ಎಂದು ಇಪಿಎಫ್‌ಒ ಬುಧವಾರ ತಿಳಿಸಿದೆ.
ಮಾರ್ಚ್ ತಿಂಗಳ ವೇತನವನ್ನು ಪಾವತಿಸಿದ ಸಂಸ್ಥೆಗಳಿಗೆ ಇದು ಅನ್ವಯವಾಗುತ್ತದೆ. ಇದಲ್ಲದೇ ಮೇ 15ರೊಳಗೆ ಬಾಕಿ ವಂತಿಗೆ ಪಾವತಿಸುವ ಸಂಸ್ಥೆಗಳಿಗೆ ಬಡ್ಡಿ ಮತ್ತು ದಂಡದಿಂದಲೂ ವಿನಾಯಿತಿ ಸಿಗಲಿದೆ.
ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಪತ್ತೆ ಹಚ್ಚುವಿರಾ?: ನಿಮ್ಮಕಣ್ಣಿನ ದೃಷ್ಟಿ, ತಾಳ್ಮೆಗೊಂದು ಸವಾಲು!

ಮಗನ ಔಷಧಕ್ಕಾಗಿ ತಾಯಿಯ ಗೋಳಾಟ: ವಿಡಿಯೋಗೆ ಒಂದೇ ಗಂಟೆಯಲ್ಲಿ ಸಿಕ್ಕಿತು ಸ್ಪಂದನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 10 =
Remember me
