ಚೆನ್ನೈ :ಚೆಕ್​​ಪೋಸ್ಟ್​ನಲ್ಲಿ ಡ್ಯೂಟಿ ಮಾಡುವಾಗ ವ್ಯಕ್ತಿಯೊಬ್ಬನಿಗೆ ಥಳಿಸಿ ಅವನ ಸಾವಿಗೆ ಕಾರಣನಾದ ಪೊಲೀಸ್​ ಅಧಿಕಾರಿಯನ್ನು ಬಂಧಿಸಲಾಗಿದೆ. ತಮಿಳುನಾಡಿನ ಸೇಲಂನ ಎಥಾಪುರ್​ ಪೊಲೀಸ್ ಠಾಣೆಯ ಸಬ್​ಇನ್ಸ್​ಪೆಕ್ಟರ್​ ಪೆರಿಯಾಸ್ವಾಮಿ, ಬಂಧಿತ ಆರೋಪಿ.
ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಮಟ್ಟಿರುವ 45 ವರ್ಷ ವಯಸ್ಸಿನ ಮುರುಗೇಶನ್​, ನಿನ್ನೆ ಇಬ್ಬರು ಸ್ನೇಹಿತರೊಂದಿಗೆ ಪಕ್ಕದ ಹಳ್ಳಿಗೆ ಹೋಗಿ ಮದ್ಯ ಸೇವಿಸಿ ಹಿಂತಿರುಗುತ್ತಿದ್ದ. ಅವರನ್ನು ಸೇಲಂ ನಗರದ ಚೆಕ್​ಪೋಸ್ಟ್​ನಲ್ಲಿ ಪೊಲೀಸರು ತಡೆದರು. ವಾದವಿವಾದದ ನಂತರ ಮುರುಗೇಶನ್​ನನ್ನು ಪೊಲೀಸರು ಥಳಿಸಿದರು ಎನ್ನಲಾಗಿದೆ.
ಇದನ್ನೂ ಓದಿ:ಭಾರತದ ಕಾನೂನು ಪಾಲಿಸಲು ಮೀನಮೇಷ- ನಿಷೇಧವಾಗುತ್ತಾ ವಾಟ್ಸ್‌ಆ್ಯಪ್‌? ಕೋರ್ಟ್‌ ಬಾಗಿಲಿಗೆ ಟೆಕಿ
ಈ ಘಟನೆಯ ಬಗೆಗಿನ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿತ್ತು. ಮೃತ ಮುರುಗೇಶನ್​ನೊಂದಿಗಿದ್ದ ವ್ಯಕ್ತಿಯು ಅವನನ್ನು ಬಿಟ್ಟುಬಿಡಿ ಎಂದು ಗೋಗರೆದರೂ, ಅವನನ್ನು ಹೊಡೆಯುತ್ತಿರುವುದು. ಮಾತನಾಡಲೂ ಕಷ್ಟುಪಡುತ್ತಿದ್ದ ಮುರುಗೇಶನ್,​ ನಂತರ ರಸ್ತೆಯಲ್ಲೇ ಮೂರ್ಛೆ ಹೋಗುವುದು ವಿಡಿಯೋದಲ್ಲಿ ದಾಖಲಾಗಿತ್ತು ಎನ್ನಲಾಗಿದೆ.
ಸಂತ್ರಸ್ತನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಸೇಲಂನ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಇಂದು ಬೆಳಿಗ್ಗೆ ಮೃತಪಟ್ಟಿದ್ದಾನೆ.(ಏಜೆನ್ಸೀಸ್)
ಐಎಂಎ ದೂರುಗಳ ವಿರುದ್ಧ ಸುಪ್ರೀಂ ಮೊರೆ ಹೋದ ಬಾಬಾ ರಾಮ್​​ದೇವ್​

ಮಗುವಿನೊಂದಿಗೆ 12ನೇ ಮಹಡಿಯಿಂದ ನೆಲಕ್ಕೆ ಹಾರಿ ಮಹಿಳೆ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + fourteen =
Remember me
