ಚೆನ್ನೈ:ರಾಡಾರ್ ಇಮೇಜಿಂಗ್ ಉಪಗ್ರಹ ಇಒಎಸ್​-01 ಸೇರಿ 10 ಉಪಗ್ರಹಗಳನ್ನು ಇಂದು ಉಡಾವಣೆ ಮಾಡುವುದಕ್ಕೆ ಇಸ್ರೋ ಸಜ್ಜಾಗಿದೆ. ಈಗಾಗಲೇ ಇದಕ್ಕೆ ಕೌಂಟ್​ ಡೌನ್ ಶುರುವಾಗಿದ್ದು, ಶ್ರೀಹರಿ ಕೋಟಾದ ಮೊದಲನೇ ಲಾಂಚ್​ ಪ್ಯಾಡ್​ನಿಂದ ಅಪರಾಹ್ನ 3.02 ಗಂಟೆಗೆ ಉಡಾವಣೆಯಾಗಲಿದೆ.
ಇಒಎಸ್​-01 ಉಪಗ್ರಹ ಈ ಮೊದಲು ರಿಯಾಸ್ಯಾಟ್​-2ಬಿಆರ್​2 ಆಗಿತ್ತು. ಅದರಲ್ಲಿ ಸಿಂಥೆಟಿಕ್​ ಅಪರ್ಚರ್​ ರಾಡಾರ್ ಇದ್ದು, ಎಲ್ಲ ಹವಾಮಾನ ಪರಿಸ್ಥಿತಿಯಲ್ಲೂ ಫೋಟೋ ತೆಗೆಯುವ ಸಾಮರ್ಥ್ಯಹೊಂದಿದೆ. ಹಗಲು ಮತ್ತು ರಾತ್ರಿ ನಿಗಾ ಇರಿಸುವ ದೃಷ್ಟಿಯಿಂದ ಈ ಉಪಗ್ರಹ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಎಲ್ಲ ರೀತಿಯ ನಾಗರಿಕ ಚಟುವಟಿಕೆಗಳೂ ಇದರಲ್ಲಿ ದಾಖಲಾಗಲಿವೆ. ಭದ್ರತೆ, ಸುರಕ್ಷತೆಯ ದೃಷ್ಟಯಿಂದ ನಿಗಾ ಇರಿಸುವುದಕ್ಕೆ ಇದನ್ನು ಉಪಯೋಗಿಸಲಾಗುತ್ತಿದೆ.
ಇದನ್ನೂ ಓದಿ:ತಾಂತ್ರಿಕ ಕಾರಣಕ್ಕೆ ‘GISAT-1’ಉಪಗ್ರಹ ಉಡಾವಣೆ ಮುಂದೂಡಿದ ಇಸ್ರೋ
ಇಂದಿನ ಉಡಾವಣೆಯೊಂದಿಗೆ ಇಸ್ರೋ ಒಟ್ಟು 328 ವಿದೇಶಿ ಉಪಗ್ರಹ ಉಡಾವಣೆ ಮಾಡಿದ ದಾಖಲೆ ನಿರ್ಮಿಸಲಿದೆ. ಭಾರತದ ಉಪಗ್ರಹದ ಹೊರತಾಗಿ, ಲಿಥುವಾನಿಯಾ (1-ಟೆಕ್ನಾಲಜಿ ಡೆಮಾನ್​ಸ್ಟ್ರೇಟರ್​), ಲಕ್ಸಂಬರ್ಗ್​ ( ಕ್ಲಿಯೋಸ್ ಸ್ಪೇಸ್​ನಿಂದ 4 ಮಾರ್ಟೈಮ್​ ಅಪ್ಲಿಕೇಶನ್​ ಸ್ಯಾಟಲೈಟ್ಸ್ ), ಅಮೆರಿಕದ 4 ಲೆಮುರ್​ ಮಲ್ಟಿ ಮಿಷನ್ ರಿಮೋಟ್​ ಸೆನ್ಸಿಂಗ್ ಉಪಗ್ರಹಗಳು ಸೇರಿ 9 ಇತರೆ ಉಪಗ್ರಹಗಳು ಪಿಎಸ್​ಎಲ್​ವಿ-ಸಿ49 ಮೂಲಕ ಉಡಾವಣೆಯಾಗಲಿವೆ. (ಏಜೆನ್ಸೀಸ್)
ದೀಪಾವಳಿ ಸಂಭ್ರಮಕ್ಕೆ ಸಾವರಿನ್ ಗೋಲ್ಡ್ ಬಾಂಡ್: ಗ್ರಾಂಗೆ 5,177 ರೂಪಾಯಿ ದರ ಸೋಮವಾರದಿಂದ ಲಭ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 4 =
Remember me
