ಮುಂಬೈ:ಸರ್ಕಾರಿ ಕಂಪನಿಯಾದ (ಪಿಎಸ್​ಯು) ಇಂಡಿಯನ್ ರಿನ್ಯೂವಬಲ್ ಎನರ್ಜಿ ಡೆವಲಪ್‌ಮೆಂಟ್ ಏಜೆನ್ಸಿ (NSEBSEIndian Renewable Energy Development Agency Ltd. ಐಆರ್‌ಇಡಿಎ- ಇರೇಡಾ) ಷೇರುಗಳ ಬೆಲೆಯಲ್ಲಿ ಸೋಮವಾರ ತೀವ್ರ ಏರಿಕೆ ಕಂಡುಬಂದಿದೆ. ಕಂಪನಿಯ ಷೇರುಗಳ ಬೆಲೆ ಸೋಮವಾರ ಇಂಟ್ರಾ ಡೇ ವಹಿವಾಟಿನಲ್ಲಿ ಶೇ. 11ರಷ್ಟು ಏರಿಕೆಯಾಗಿ 179 ರೂ. ತಲುಪಿದವು.
ಶುಕ್ರವಾರ ಬಿಡುಗಡೆಯಾದ ಕಂಪನಿಯ ಬಲವಾದ ತ್ರೈಮಾಸಿಕ ಫಲಿತಾಂಶಗಳ ಹಿನ್ನೆಲೆಯಲ್ಲಿ ಈ ಷೇರುಗಳ ಬೆಲೆಗಳಲ್ಲಿ ಈ ಏರಿಕೆ ಕಂಡುಬಂದಿದೆ.
ಇರೇಡಾ ನಿವ್ವಳ ಲಾಭವು ಹಣಕಾಸು ವರ್ಷದ 2023-24 ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 33ರಷ್ಟು ಏರಿಕೆಯಾಗಿ 337.37 ಕೋಟಿ ರೂ.ಗಳಿಗೆ ತಲುಪಿದೆ, ಬಲವಾದ ತ್ರೈಮಾಸಿಕ ಫಲಿತಾಂಶಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ಷೇರು ಖರೀದಿಗೆ ಮುಗಿಬಿದ್ದರು. ಕಂಪನಿಯ ಲಾಭವು ಮುಖ್ಯವಾಗಿ ಆದಾಯದ ಹೆಚ್ಚಳದಿಂದ ಹೆಚ್ಚಾಗಿದೆ. 2022-23ರ ಹಣಕಾಸು ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಈ ಕಂಪನಿಯು 253.61 ಕೋಟಿ ರೂಪಾಯಿ ಗಳಿಸಿದೆ ಎಂದು ಷೇರು ಮಾರುಕಟ್ಟೆಗೆ ನೀಡಿರುವ ಮಾಹಿತಿಯಲ್ಲಿ ಕಂಪನಿ ತಿಳಿಸಿದೆ.2023-24 ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯವು 1,391.63 ಕೋಟಿ ರೂ. ಮುಟ್ಟಿದೆ. ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಆದಾಯವು 1,036.31 ಕೋಟಿ ರೂ. ಇತ್ತು.
ಪರಿಶೀಲನೆಯ ಅವಧಿಯಲ್ಲಿ ಕಂಪನಿಯ ವೆಚ್ಚಗಳು 911.96 ಕೋಟಿ ರೂ.ಗಳಾಗಿದ್ದು, ಹಿಂದಿನ ವರ್ಷದ ಅವಧಿಯಲ್ಲಿ ಇದು 747.93 ಕೋಟಿ ರೂ. ಇತ್ತು.
50 ದಿನಗಳಲ್ಲಿ 7x ರಿಟರ್ನ್ ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿಯು
ಇರೇಡಾ ಷೇರು 2023 ರ ಕೊನೆಯಲ್ಲಿ ಮಾರುಕಟ್ಟೆ ಪ್ರವೇಶಿಸಿತು. ಆಗ ಕಂಪನಿಯ ಐಪಿಒ ಷೇರು ಬೆಲೆ 32 ರೂ. ಇತ್ತು. ಕೇವಲ 50 ದಿನಗಳಲ್ಲಿ ಕಂಪನಿಯ ಷೇರುಗಳ ಬೆಲೆ 214 ರೂ. ತಲುಪಿತು. ಅಂದರೆ ಐಪಿಒ ಷೇರು ಬೆಲೆಗಿಂತ 7 ಪಟ್ಟು ಹೆಚ್ಚಾಗಿದೆ.

ಮುಖೇಶ್ ಅಂಬಾನಿಯ ಫೈನಾನ್ಸ್​ ಕಂಪನಿ ತ್ರೈಮಾಸಿಕ ಲಾಭ ಹೆಚ್ಚಳ: ಷೇರು ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ
ಮಾರ್ಚ್​ ತ್ರೈಮಾಸಿಕ ವರದಿಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷೆ: ರಿಲಯನ್ಸ್​ ಕಂಪನಿ ಷೇರುಗಳಿಗೆ ಬರುವುದೇ ಡಿಮ್ಯಾಂಡು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − seven =
Remember me
