ಗುಂಟೂರು (ಆಂಧ್ರಪ್ರದೇಶ):ಸಾಕಷ್ಟು ಕನಸಗಳನ್ನು ಹೊತ್ತು ಮದುವೆ ಎಂಬ ಬಂಧನಕ್ಕೆ ಒಳಗಾದ ನವವಧುವಿಗೆ ಸವಿನೆನಪಿನಂತೆ ಉಳಿಯಬೇಕಾಗಿದ್ದ ಮೊದಲ ರಾತ್ರಿ ಸೈಕೋ ಪತಿಯ ರಾಕ್ಷಸಿ ವರ್ತನೆಯಿಂದ ನರಕವಾಗಿ ಪರಿಣಮಿಸಿದ ಘಟನೆ ಗುಂಟೂರಿನಲ್ಲಿ ಬೆಳಕಿಗೆ ಬಂದಿದೆ.
ಮೊದಲ ರಾತ್ರಿ ಜೀವನದ ಉದ್ದಕ್ಕೂ ಉಳಿಯುವ ಸವಿರಾತ್ರಿ. ಆದರೆ, ಆ ಸವಿರಾತ್ರಿ ಕಹಿರಾತ್ರಿಯಾಗಿ ಬದಲಾದ ವಧುವಿನ ನೋವಿನ ಕತೆ ಇದು. ಹೈದರಾಬಾದ್​ನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುವ ಗುಂಟೂರು ಮೂಲದ ಯುವತಿ ಅದೇ ಹೈದರಾಬಾದ್​ನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿರುವ ಪ್ರಕಾಶಂ ಜಿಲ್ಲೆಯ ಯುವಕನನ್ನು ವರಿಸಿದ್ದಳು.
ಇದನ್ನೂ ಓದಿ:VIDEO| ಭಾರೀ ಗಾತ್ರದ ಮೊಸಳೆಯ ಮಿಂಚಿನ ವೇಗದ ಬೇಟೆ ನೋಡಿ ಬೆಕ್ಕಸ ಬೆರಗಾದ ನೆಟ್ಟಿಗರು!
ಮದುವೆ ಬಳಿಕ ಹೊಸ ಜೀವನಕ್ಕೆ ಎಂಟ್ರಿ ಕೊಟ್ಟ ವಧು ಸುಂದರ ವೈವಾಹಿಕ ಜೀವನದ ಕನಸು ಕಂಡಿದ್ದಳು. ಮೊದಲ ರಾತ್ರಿಯಲ್ಲಿ ಪತಿಯ ಸಾಂಗತ್ಯ ಬಯಸಿದ್ದ ವಧುವಿಗೆ ಪತಿಯ ವಿಚಿತ್ರ ವರ್ತನೆ ನೋಡಿ ಕಣ್ಣೀರಿಡುತ್ತಾ ಮಧುಚಂದ್ರದ ಕೋಣೆಯಿಂದ ಹೊರಬಂದಿದ್ದಳು. ಪತಿಯಲ್ಲಿ ಏನಾದರೂ ಬದಲಾವಣೆ ಆಗಬಹುದೇನೋ ಎಂಬ ಬಯಕೆಯಿಂದ ಎರಡು ತಿಂಗಳು ಆತನ ಸನಿಹವೇ ಇದ್ದಳು. ಕಳೆದ ಎರಡು ದಿನಗಳ ಹಿಂದೆ ಮತ್ತೆ ಮೊದಲ ರಾತ್ರಿಯನ್ನು ಹಿರಿಯರು ನಿಶ್ಚಯಿಸಿದ್ದರು. ಆದರೆ, ಎರಡು ತಿಂಗಳಲ್ಲಿ ಪತಿಯಲ್ಲಿ ಏನೂ ಬದಲಾವಣೆ ಆಗಿರಲಿಲ್ಲ.
ಮದುವೆ ನಂತರ ರಾತ್ರಿಗಿಂತ ಈ ಬಾರಿಯ ರಾತ್ರಿ ಇನ್ನೂ ಘೋರವಾಗಿತ್ತು. ಅಕ್ಷರಶಃ ವಧುವಿಗೆ ನರಕವನ್ನು ತೋರಿಸಿದ್ದ. ಪತ್ನಿಗೆ ಅರಿವಳಿಕೆ ಇಂಜಕ್ಸನ್​ ನೀಡಿ, ಬ್ಲೇಡ್​ನಿಂದ ಆಕೆಯ ಜನನಾಂಗದ ಬಳಿ ಗಾಯ ಮಾಡಿ ರಾಕ್ಷಸನಂತೆ ವರ್ತಿಸಿದ್ದ. ಪತಿಯ ನಡವಳಿಕೆಯಿಂದ ತುಂಬಾ ಹೆದರಿದ ವಧು ಮಾರನೇ ದಿನ ಬೆಳಗ್ಗೆ ಅಳುತ್ತಲೇ ತನ್ನ ಪಾಲಕರ ಬಳಿ ಎಲ್ಲ ಹೇಳಿಕೊಂಡಳು.
ಇದನ್ನೂ ಓದಿ:70 ವರ್ಷದ ವೃದ್ಧನಿಗೆ ಮಹಿಳೆಯೊಂದಿಗೆ ಲಿವ್​ ಇನ್​ ರಿಲೇಷನ್​ಶಿಪ್​! ವಿಚಾರ ತಿಳಿದ ಮಕ್ಕಳು ಮಾಡಿದ್ದೇನು ಗೊತ್ತಾ?
ಅದೇ ದಿನ ವರನ ಬಗ್ಗೆ ಅವರ ಮನೆಯವರಿಗೆ ವಧುವಿನ ಕಡೆಯವರು ದೂರು ನೀಡಿದ್ದಾರೆ. ಆದರೆ, ಇದರಿಂದ ಕುಪಿತಗೊಂಡ ವರನ ತಂದೆ ನಿಮ್ಮ ಮಗಳು ಕೆಲಸಕ್ಕೆ ಬಾರದವಳು ಎಂದು ಹಿಯ್ಯಾಳಿಸಿದ್ದಾರೆ. ಇದಾದ ಬಳಿಕ ವಧುವಿನ ಪಾಲಕರು ಗುಂಟೂರು ಗ್ರಾಮಾಂತರ ಪೊಲೀಸ್​ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ದೂರಿಗೆ ಸ್ಪಂದಿಸಿರುವ ಎಸ್​ಪಿ ಪ್ರಕರಣವನ್ನು ನರಸರಾವ್​ಪೇಟೆಗೆ ವರ್ಗಾಹಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ.(ಏಜೆನ್ಸೀಸ್​)
ಬಿಜೆಪಿ ಶಾಸಕನಿಗೆ ಖಡಕ್​ ಎಚ್ಚರಿಕೆ ನೀಡಿದ ಹುಬ್ಬಳ್ಳಿ ಹುಲಿ ವಿಶ್ವನಾಥ ಸಜ್ಜನರ್..!

ಶೌಚಗೃಹದಲ್ಲಿ ಮಹಿಳಾ ಪೇದೆ ಮೊಬೈಲ್ ನಂಬರ್: ಇದರ ಹಿಂದಿದೆ ವಾಟ್ಸ್​ಆ್ಯಪ್​ ಗ್ರೂಪ್​ ದುರ್ಬಳಕೆ!

ವಿದೇಶಿ ಡ್ರಗ್ಸ್ ಪೆಡ್ಲರ್​ಗಳನ್ನು 1 ಕಿ.ಮೀ. ಚೇಸ್ ಮಾಡಿದ ಎನ್​ಸಿಬಿ; ಇಬ್ಬರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − four =
Remember me
