ಆಗ್ರಾ:ಮಾನಸಿಕ ನೆಮ್ಮದಿಯ ಜತೆಗೆ ಮುದ ನೀಡುತ್ತದೆ ಎಂದು ಸಾಲು ಕೊಲೆಗಳಿಗೆ ಯೋಜಿಸುತ್ತಿದ್ದ ಮಾನಸಿಕ ವಿಕೃತನನ್ನು ಆಗ್ರಾ ಪೊಲೀಸರು ಬಂಧಿಸಿದ್ದಾರೆ.
ಇಟಾ ಬಳಿಯ ಧರ್ಮಪುರ್​ ಗ್ರಾಮದ ನಿವಾಸಿ ರಾಧೇ ಶ್ಯಾಂ (30) ಬಂಧಿತ. ಈತ ತನ್ನ ಸಹೋದರ ಸಂಬಂಧಿಗಳಾದ ಇಬ್ಬರು ಬಾಲಕರನ್ನು ಹತ್ಯೆ ಮಾಡಿದ್ದ. ಕೊಡಲಿಯಿಂದ ಕೊಚ್ಚಿ ತನ್ನ ಅಣ್ಣನನ್ನೇ ಕೊಲ್ಲಲು ಯತ್ನಿಸುತ್ತಿದ್ದಾಗ ಸಂಬಂಧಿಕರ ಕೈಗೆ ಸಿಕ್ಕಿಬಿದ್ದಿದ್ದಾಗಿ ಸಕ್ರೌಲಿ ಪೊಲೀಸ್​ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ನಟಿ ರಮ್ಯಾ ಕೃಷ್ಣನ್​ ಕಾರಿನಲ್ಲಿ ಪತ್ತೆಯಾಯ್ತು ನೂರಕ್ಕೂ ಹೆಚ್ಚು ಮದ್ಯದ ಬಾಟಲ್​ಗಳು…!
ಈತ ಈ ವರ್ಷದ ಫೆಬ್ರವರಿ 4ರಂದು ಸತ್ಯೇಂದ್ರ ಎಂಬ ಬಾಲಕನನ್ನು ಹಾಗೂ ಜೂನ್​ 9ರಂದು ಪ್ರಶಾಂತ್​ ಎಂಬ ಬಾಲಕನನ್ನು ಕೊಂದಿದ್ದ. ಶನಿವಾರ ರಾತ್ರಿ ಗಾಢ ನಿದ್ದೆಯಲ್ಲಿದ್ದ ತನ್ನ ಅಣ್ಣ ವಿಶ್ವನಾಥ್​ ಸಿಂಗ್​ನನ್ನು ಕೊಡಲಿಯಿಂದ ಕೊಚ್ಚಿ ಕೊಲ್ಲಲು ಯತ್ನಿಸುತ್ತಿದ್ದಾಗ ಸಂಬಂಧಿಕರು ಆತನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದರು ಎಂದು ಹೇಳಿದ್ದಾರೆ.
ನನಗೆ ಜನರು ಸಾಯುವುದನ್ನು ನೋಡಲು ತುಂಬಾ ಸಂತೋಷವಾಗುತ್ತಿತ್ತು. ನಾನು ಕೊಂದಾಗ ಅವರು ಪ್ರಾಣಬಿಡುತ್ತಿದ್ದ ರೀತಿಯನ್ನು ಕಂಡು ಮನಸ್ಸಿಗೆ ಮುದವಾಗುತ್ತಿತ್ತು. ಹಾಗಾಗಿ ನಾನು ಕೊಲೆಗಳನ್ನು ಮಾಡಿದ್ದೇನೆ. ಅಲ್ಲದೆ, ಇನ್ನೂ ಮೂರು ಜನರನ್ನು ಕೊಲ್ಲಲು ಯೋಜನೆ ಹಾಕಿಕೊಂಡಿದ್ದೆ ಎಂದು ವಿಚಾರಣೆ ವೇಳೆ ತಪ್ಪೊಪ್ಪಿಗೆಯಲ್ಲಿ ಹೇಳಿರುವುದಾಗಿ ತಿಳಿಸಿದ್ದಾರೆ.
ಕರೊನಾದ ಆರಂಭಿಕ ಚಿಕಿತ್ಸೆಗೆ ರೆಂಡೆಸಿವಿರ್​ ಚುಚ್ಚುಮದ್ದು ಬಳಕೆಗೆ ಸರ್ಕಾರದ ಹಸಿರುನಿಶಾನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
