ಬೆಂಗಳೂರು:ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಏನಪ್ಪ ಆ ಸುದ್ದಿ ಅಂತೀರಾ.. ತಮ್ಮ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಚಿತ್ರದ ಮೊದಲ ಹಾಡಿನ ಬಿಡುಗಡೆ ದಿನಾಂಕವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಟಾಲಿವುಡ್​​​ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಪುಷ್ಪ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಇಂದು ಅವರ 42ನೇ ಹುಟ್ಟುಹಬ್ಬವಾಗಿದ್ದು, ಶುಭಾಶಯ ಕೋರುವ ಮೂಲಕ ಬನ್ನಿ ಸಪ್ರೈಸ್ ನೀಡಿದ್ದಾರೆ.
ಇದನ್ನೂ ಓದಿ:ಸಿಂಧು ಪ್ರೋತ್ಸಾಹದ ನುಡಿ ನನ್ನ ಕಣ್ಣಂಚಲ್ಲಿ ನೀರು ತರಿಸಿದವು: ಚೈನೀಸ್ ತೈಪೆ ಆಟಗಾರ್ತಿ
ಈ ಬಗ್ಗೆ ಟ್ವೀಟ್ ಮಾಡಿರುವ ಅಲ್ಲು, ‘ನನ್ನ ಪ್ರೀತಿಯ DSP ನಿಮಗೆ ಹುಟ್ಟುಹಬ್ಬದ ಶುಭಾಶಯ. ನನ್ನಿಂದ ಕಾಯಲು ಆಗುತ್ತಿಲ್ಲ, ಪುಷ್ಪ ಚಿತ್ರಕ್ಕೆ ಅದ್ಭುತವಾಗಿ ಸಂಗೀತ ಸಂಯೋಜಿಸಿರುವ ನೀವು ಇದೇ ರೀತಿ ಮನರಂಜನೆ ನೀಡುತ್ತಿರಿ’ ಎಂದು ಬರೆದಿದ್ದಾರೆ. ಅಲ್ಲದೇ ಆಗಸ್ಟ್ 13 ರಂದು ಪುಷ್ಪ ಸಿನಿಮಾದ ಮೊದಲ ಸಾಂಗ್ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
Happy birthday my dear friend@ThisIsDSP. Can’t wait for the world to witness the fantastic album you have composed for#Pushpa, and fall in love with you and your music yet again. Keep entertaining us with your magic.pic.twitter.com/Xnd1aML2QC— Allu Arjun (@alluarjun)August 2, 2021
Happy birthday my dear friend@ThisIsDSP. Can’t wait for the world to witness the fantastic album you have composed for#Pushpa, and fall in love with you and your music yet again. Keep entertaining us with your magic.pic.twitter.com/Xnd1aML2QC
ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಾಂಗ್ ಬಿಡುಗಡೆಯಾಗಲಿದ್ದು, ದೇಶದ ಹೆಸರಾಂತ ಸಂಗೀತಗಾರರು ಆಲ್ಬಂನಲ್ಲಿ ಭಾಗಿಯಾಗಿದ್ದಾರೆ.ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಕಾಂಬಿನೇಷನ್​​ನಲ್ಲಿ ಮೂಡಿ ಬರುತ್ತಿರುವ ಪುಷ್ಪ ಮೂರನೆ ಚಿತ್ರ. ಈ ಮೊದಲು ಆರ್ಯ ಮತ್ತು ಆರ್ಯ 2 ಚಿತ್ರ ಬ್ಲಾಕ್ ಬಾಸ್ಟರ್ ಸಕ್ಸಸ್ ಕಂಡಿದ್ದವು.
VIDEO| ಉಚಿತ ಸೇಬು-ದಾಳಿಂಬೆಗಾಗಿ ಮುಗಿಬಿದ್ದ ಕಾಂಗ್ರೆಸ್ ಕಾರ್ಯಕರ್ತರು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − one =
Remember me
