ನವದೆಹಲಿ:ನೀವು ಪಬ್​ಜಿ ಪ್ರೇಮಿಗಳಾಗಿದ್ದು, ಪಬ್​ಜಿ ನಿಷೇಧವಾದಾಗಿನಿಂದ ಚಿಂತೆಯಲ್ಲಿದ್ದರೆ ಈಗ ಚಿಂತೆ ಬಿಟ್ಟುಬಿಡಿ. ಏಕೆಂದರೆ ಈಗ ಭಾರತೀಯರಿಗಾಗಿ ಹೊಸ ರೂಪದಲ್ಲಿ ಬರಲು ಪಬ್​ಜಿ ಸಿದ್ಧವಾಗಿದೆ.
ಭಾರತೀಯರಿಗಾಗಿ ‘ಪಬ್​ಜಿ ಮೊಬೈಲ್​ ಇಂಡಿಯಾ’ ಗೇಮಿಂಗ್​ ಆ್ಯಪ್​ ತಯಾರಿಸುತ್ತಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಭಾರತದ ಮಾರುಕಟ್ಟೆಗೆ ಬರಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಇನ್ನು ಕೆಲ ದಿನಗಳಲ್ಲಿ ಬರುವುದಾಗಿ ತಿಳಿಸಲಾಗಿದೆ.
ಇದನ್ನೂ ಓದಿ:ರಸ್ತೆ ದಾಟಿ ಪ್ರಪಾತದತ್ತ ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್; ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು
ಹೊಸ ಪಬ್​ಜಿಯನ್ನು ಭಾರತೀಯರಿಗಾಗಿಯೇ ತಯಾರಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾಹಕರಿಗೆ ಸರಿಹೊಂದುವಂತೆ ಕೆಲವು ಸುಧಾರಣೆಗಳನ್ನು ತರಲಾಗಿದೆ. ಹೊಸ ಪಾತ್ರಗಳು, ಹೆಚ್ಚು ನೈಸರ್ಗಿಕತೆನ್ನು ಅಳವಡಿಸಲಾಗಿದೆ.
ಭಾರತೀಯರ ದತ್ತಾಂಶ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಹಾಗಾಗಿ ಹೊಸ ಪಬ್​ಜಿಗೆ ನಿಯಮಿತವಾಗಿ ಆಡಿಟ್​, ದೃಢೀಕರಣ ಮಾಡಲಾಗುವುದು. ದತ್ತಾಂಶಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಅದರ ಜತೆಯಲ್ಲಿ ಭಾರತದ ವಿವಿಧ ಕ್ಷೇತ್ರಗಳಲ್ಲಿ 100 ಮಿಲಿಯನ್​ ಡಾಲರ್​ ಹೂಡಿಕೆ ಮಾಡುವುದಾಗಿಯೂ ತಿಳಿಸಲಾಗಿದೆ.
ಇದನ್ನೂ ಓದಿ:ಮೋಸದ ದುಡ್ಡು-ಹೆಲಿಕಾಪ್ಟರ್​ನಲ್ಲಿ ಯಾತ್ರೆ! ಪದವಿ ಮುಗಿಸಿದ ಯುವಕರೇ ಮಿಸ್​ಮಾಡ್ದೆ ಇದನ್ನು ಓದಿ…
ಚೀನಾ ಮತ್ತು ಭಾರತ ನಡುವೆ ಬಿಕ್ಕಟ್ಟು ಹೆಚ್ಚಾದ ಬೆನ್ನಲ್ಲೇ ಚೀನಾ ಮೂಲದ 117 ಆ್ಯಪ್​ಗಳನ್ನು ಸೆಪ್ಟೆಂಬರ್​ನಲ್ಲಿ ನಿಷೇಧಿಸಲಾಗಿತ್ತು. ಪಬ್​ಜಿಯನ್ನು ಪ್ಲೇಸ್ಟೋರ್​ನಿಂದ ತೆಗೆದುಹಾಕಲಾಗಿತ್ತು. ಆದರೆ ಈ ಹಿಂದೆಯೇ ಡೌನ್​ಲೋಡ್​ ಮಾಡಿಕೊಂಡವರಿಗೆ ಆ್ಯಪ್​ ಲಭ್ಯವಿತ್ತು. ಆದರೆ ಇತ್ತೀಚೆಗೆ ಈ ಆ್ಯಪ್​ನ ಸಂಪೂರ್ಣ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. (ಏಜೆನ್ಸೀಸ್​)
ಮಮತಾ ಸರ್ಕಾರದಲ್ಲಿ ಹೆಚ್ಚಾದ ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ; ಪಕ್ಷದ ರಾಜ್ಯಾಧಕ್ಷರನ್ನೂ ಥಳಿಸಿದ ಕಿಡಿಗೇಡಿಗಳು

ತೇಜಸ್ವಿ ಈಗಲೇ ಸಿಎಂ ಆಗುವುದು ಬೇಡ, ವಯಸ್ಸಾದ ಮೇಲೆ ಆಗಲಿ: ಉಮಾ ಭಾರತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
