ನವದೆಹಲಿ:ದೆಹಲಿ ಮೆಟ್ರೋ ರೈಲು ಇತ್ತೀಚೆಗೆ ಅಸಭ್ಯ ವರ್ತನೆಗಳ ತಾಣವಾಗುವ ಮೂಲಕ ಅಪಖ್ಯಾತಿಗೆ ಒಳಗಾಗುತ್ತಿದೆ. ಈ ಹಿಂದೆ ಯುವತಿಯೊಬ್ಬಳು ಅರೆಬರೆ ಮೈ ಕಾಣುವ ಅಶ್ಲೀಲ ಉಡುಗೆ ಧರಿಸಿ, ಪ್ರಯಾಣ ಮಾಡುವ ಮೂಲಕ ಸುದ್ದಿಯಾಗಿದ್ದಳು. ಇದಾದ ಬಳಿಕ ಜೋಡಿಯೊಂದು ರೈಲಿನ ಒಳಗೆ ಪ್ರಣಯದಾಟ ಆಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಯುವಕನೊಬ್ಬ ರೈಲಿನಲ್ಲಿ ಹಸ್ತಮೈಥುನ ಮಾಡಿಕೊಳ್ಳುವ ಮೂಲಕ ದೆಹಲಿ ಮೆಟ್ರೋಗಿರುವ ಕಳಂಕಕ್ಕೆ ಮತ್ತಷ್ಟು ಬಳಿದಿದ್ದಾನೆ.
ಯುವಕನ ಅಶ್ಲೀಲ ವರ್ತನೆಯ ವಿಡಿಯೋವನ್ನು ಪ್ರಯಾಣಿಕರೊಬ್ಬರು ಮೊಬೈಲ್​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಜನರ ನಡುವೆಯೇ ಮೈಮರೆತು ಅಶ್ಲೀಲ ವರ್ತನೆಯಲ್ಲಿ ತೊಡಗಿರುವ ಯುವಕನ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ, ಆತನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ತಾಯಿ-ಮಗಳ ಮೃತದೇಹ ಪತ್ತೆ; ಕೊಲೆ ಶಂಕೆ
ಯುವಕನ ಪಕ್ಕದಲ್ಲಿ ಕುಳಿತಿರುವವರು ಆತನ ದುರ್ವರ್ತನೆ ಕಂಡ ಕೂಡಲೇ ಎದ್ದು ದೂರ ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಚಾರ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್​ ಗಮನಕ್ಕೆ ಬಂದಿದ್ದು, ಯುವಕನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಆತನನ್ನು ಹುಡುಕಿ ಬಂಧಿಸುವಂತೆ ದೆಹಲಿ ಪೊಲೀಸರನ್ನು ಕೇಳಿದ್ದಾರೆ.
ವಿಡಿಯೋ ವೈರಲ್ ಆದ ನಂತರ, ದೆಹಲಿ ಮೆಟ್ರೋ ಇಲಾಖೆಯು ಧ್ವನಿ ಟಿಪ್ಪಣಿಯನ್ನು ಹೊರಡಿಸಿದೆ. ಮೆಟ್ರೋ ಒಳಗೆ ಸರಿಯಾಗಿ ನಡೆದುಕೊಳ್ಳುವಂತೆ ಪ್ರಯಾಣಿಕರನ್ನು ಆಗ್ರಹಿಸಿದೆ. ಇಂತಹ ಘಟನೆಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಸಹಾಯವಾಣಿ ಸಂಖ್ಯೆಗಳನ್ನು ಪ್ರಚಾರ ಮಾಡಲು DMRC ನಿರ್ಧರಿಸಿದೆ.(ಏಜೆನ್ಸೀಸ್​)
ಈ ರಾಜ್ಯ ಸರ್ಕಾರ ರಕ್ಷಾಬಂಧನದ ದಿನ 40 ಲಕ್ಷ ಮಹಿಳೆಯರಿಗೆ ಕೊಡಲಿದೆ ಸ್ಮಾರ್ಟ್​ಫೋನ್​​ ಹಾಗೂ ಉಚಿತ ಇಂಟರ್ನೆಟ್!

ಜಿ. ಪರಮೇಶ್ವರ್​ ಮೇಲೆ ಕಲ್ಲೆಸೆತ ಪ್ರಕರಣ: 2 ಆಯಾಮದಲ್ಲಿ ತನಿಖೆ ಶುರು ಮಾಡಿದ ಪೊಲೀಸರು

ಮಚ್​ಲಕ್ಷ್ಮಿ ರೀಷ್ಮಾ; ಬಾಲಿವುಡ್, ಹಾಲಿವುಡ್ ಅಲ್ಲ ‘ಕೆಡಿ’ ಚಿತ್ರಕ್ಕೆ ಕನ್ನಡತಿ ನಾಯಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 4 =
Remember me
