ನವದೆಹಲಿ:ಜಗತ್ತಿನಲ್ಲಿ ಈಗಾಗಲೇ ಕರೊನಾ ನಾಲ್ಕನೇ ಅಲೆ ಶುರುವಾಗಿದ್ದರೆ, ನಮ್ಮಲ್ಲಿ ಜನರು ಕೋವಿಡ್​ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಆತಂಕ ವ್ಯಕ್ತಪಡಿಸಿರುವ ಸರ್ಕಾರ, ಎಲ್ಲರೂ ಸೂಕ್ತ ಮುನ್ನೆಚ್ಚರಿಕೆ ಪಾಲಿಸಬೇಕು ಎಂಬುದಾಗಿ ಕಿವಿಮಾತನ್ನು ಹೇಳಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್​ ಭೂಷಣ್ ಹಾಗೂ ಐಸಿಎಂಆರ್​ ಡೈರೆಕ್ಟರ್​-ಜನರಲ್ ಡಾ.ಬಲರಾಂ ಭಾರ್ಗವ್​ ಅವರು ಇಂದು ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಸಮಸ್ಯೆ ಹೇಳಿಕೊಂಡ ಮತದಾರನಿಗೆ ಎರಡೇಟು ಹಾಕಿ‌ ಎಂದು ಗದರಿದ ಶಾಸಕ!
ಜಗತ್ತು ಈಗಾಗಲೇ ಕರೊನಾ ನಾಲ್ಕನೇ ಅಲೆಗೆ ಸಾಕ್ಷಿಯಾಗಿದೆ. ಮಾತ್ರವಲ್ಲ ವಿಶ್ವದ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ. 6.1ಕ್ಕೆ ತಲುಪಿದೆ. ಈ ಮಧ್ಯೆ ದೇಶದಲ್ಲಿ 358 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಯಾರೂ ನಿರ್ಲಕ್ಷ್ಯ ವಹಿಸುವಂತಿಲ್ಲ. ಎಲ್ಲರೂ ತಪ್ಪದೆ ಕರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ:Video | ಚಳಿಗೆ ಮೈ ಕಾಯಿಸಿಕೊಳ್ಳಲು ಅಡುಗೆ ಮನೆಗೇ ಬಂದ ಕಾಳಿಂಗ ಸರ್ಪ!
ನ. 26ರ ಬಳಿಕ ಯುರೋಪ್​, ಉತ್ತರ ಅಮೆರಿಕ, ಮತ್ತು ಆಫ್ರಿಕಗಳಲ್ಲಿ ಸೋಂಕಿನ ಪ್ರಮಾಣ ವಾರದಿಂದ ವಾರಕ್ಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಕಳೆದ ನಾಲ್ಕು ವಾರಗಳಲ್ಲಿ 10 ಸಾವಿರಕ್ಕಿಂತ ಕಡಿಮೆ ಇದ್ದರೂ ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಶಾಲೆಯಲ್ಲೇ ನಡೆಯುತ್ತಿತ್ತಾ ಮತಾಂತರ ಯತ್ನ?; ಕ್ರಿಸ್​​ಮಸ್​ಗೆ ಕಾನ್ವೆಂಟ್​​ಗೆ ಬರಲೇಬೇಕೆಂದು ಮಕ್ಕಳಿಗೆ ಒತ್ತಾಯ, ಹಿಂದೂ ಕಾರ್ಯಕರ್ತರ ದಾಳಿ..
ಇದರ ಬೆನ್ನಿಗೇ ಗುಜರಾತಿನ 8 ನಗರಗಳಲ್ಲಿ ನಾಳೆಯಿಂದ ನೈಟ್​ ಕರ್ಫ್ಯೂ ವಿಧಿಸಲಾಗುತ್ತಿದ್ದರೆ, ಹರ್ಯಾಣದಲ್ಲಿ ಕೋವಿಡ್​ ಲಸಿಕೆ ತೆಗೆದುಕೊಂಡಿರದಿದ್ದರೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸಲಾಗುತ್ತಿದೆ. ಅತ್ತ ಮಹಾರಾಷ್ಟ್ರದಲ್ಲೂ ನಿಯಮಗಳನ್ನು ಬಿಗಿಗೊಳಿಸಲಾಗಿದ್ದು, ರಾತ್ರಿ 9ರಿಂದ ಬೆಳಗ್ಗೆ 6ರ ವರೆಗೆ ಐದಕ್ಕಿಂತ ಹೆಚ್ಚು ಜನ ಗುಂಪು ಸೇರದಂತೆ ನಿರ್ಬಂಧ ವಿಧಿಸಲಾಗಿದೆ.
ಅವನಿಂದ ಅವಳಿಗೆ ಕರಿಮಣಿ ಪ್ರಯೋಗ; ಮಾವನ ಮನೆಯಲ್ಲಿ ಆತನಿಗೇ ಕತ್ತರಿ ಪ್ರಯೋಗ; ತಪ್ಪಿಹೋಯ್ತು ಸಂಸಾರದ ವ್ಯಾಕರಣ!
ಸಂಕ್ರಾಂತಿಯೊಳಗೆ ದೇಶದಲ್ಲಿ ಮತ್ತೊಂದು ದೊಡ್ಡ ದುರಂತ!?; ಕೋಡಿಮಠದ ಶ್ರೀಗಳಿಂದ ಭವಿಷ್ಯ
ರಾತ್ರಿ ವೇಳೆ ಹೀಗಾದರೆ ಅದು ರೂಪಾಂತರಿ ವೈರಸ್​ ಒಮಿಕ್ರಾನ್​ನ ರೋಗಲಕ್ಷಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
