ಬೆಂಗಳೂರು:ದ್ವಿತೀಯ ಪಿಯುಸಿಗೆ ಬಾಕಿ ಉಳಿದುಕೊಂಡಿದ್ದ ಇಂಗ್ಲಿಷ್​ ಪರೀಕ್ಷೆಯನ್ನು ನಿನ್ನೆ ಮಾಡುವ ಮೂಲಕ ಎಲ್ಲಾ ವಿಷಯಗಳ ಪರೀಕ್ಷೆ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಫಲಿತಾಂಶದ ಕುರಿತು ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜುಲೈ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದಿದ್ದಾರೆ.
ಎರಡು ತಿಂಗಳ ಹಿಂದೆಯೇ ಇಂಗ್ಲಿಷ್​ ಹೊರತುಪಡಿಸಿ ಉಳಿದ ವಿಷಯಗಳ ಪರೀಕ್ಷೆಗಳು ಮುಗಿದಿವೆ. ಅದಾಗಲೇ ಮೌಲ್ಯಮಾಪನ ಕೂಡ ಶುರುವಾಗಿತ್ತು. ಅದರೆ ಕರೊನಾವೈರಸ್​ ಹಿನ್ನೆಲೆಯಲ್ಲಿ ಮೌಲ್ಯಮಾಪನವನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದ್ದರಿಂದ ಇದೀಗ ಬಾಕಿ ಇರುವ ವಿಷಯಗಳ ಮೌಲ್ಯಮಾಪನಕ್ಕಾಗಿ ಎಲ್ಲ ಮೌಲ್ಯಮಾಪಕರು ಆಗಮಿಸುವಂತೆ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಚೀನಾ ಗಲಾಟೆ: ರಾಮಮಂದಿರ ನಿರ್ಮಾಣ ತಾತ್ಕಾಲಿಕ ಸ್ಥಗಿತ
ಈ ಕುರಿತು ಮಾಹಿತಿ ನೀಡಿರುವ ಸಚಿವರು, 39 ವಿಷಯಗಳ ಪೈಕಿ, 26 ವಿಷಯಗಳ ಮಾಲ್ಯಮಾಪನ ಮುಗಿದಿದೆ, 9 ವಿಷಯಗಳ ತಿದ್ದುಪಡಿ ಕೊನೆಯ ಹಂತದಲ್ಲಿದೆ, ಭೌತಶಾಸ್ತ್ರ, ರಸಾಯನಶಾಸ್ತ್ರ ಗಣಿತ, ಕಂಪ್ಯೂಟರ್ ಸೈನ್ಸ್, ಸಂಖ್ಯಾ ಶಾಸ್ತ್ರ, ಜೀವಶಾಸ್ತ್ರ ಮತ್ತು ನಿನ್ನೆ ನಡೆದಿರುವ ಇಂಗ್ಲಿಷ್ ಪತ್ರಿಕೆಗಳ ಮೌಲ್ಯಮಾಪನ ಬಾಕಿ ಉಳಿದಿದೆ ಎಂದಿದ್ದಾರೆ.
ಇಂಗ್ಲಿಷ್​ ಪರೀಕ್ಷೆಯ ಮೌಲ್ಯಮಾಪನ 20 ಜಿಲ್ಲೆಗಳಲ್ಲಿ ನಡೆಸಲಾಗುವುದು. ಮೌಲ್ಯ ಮಾಪನಕ್ಕಾಗಿ ನೀಡುವ ಗೌರವ ಧನವನ್ನು ಹಿಂದಿನ ವರ್ಷಗಳಂತೆ ತಡ ಮಾಡದೇ ಶೀಘ್ರವಾಗಿ ನೀಡಲಾಗುವುದು. ಮೊದಲ ಹಂತದ ಗೌರವ ಧನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಕಳ್ಳರನ್ನು ನೀವೂ ಹೊಗಳುತ್ತೀರಿ- ಏಕೆಂದು ವಿಡಿಯೋ ನೋಡಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five + 17 =
Remember me
