ಪುದುಚೆರಿ: ಕರೊನಾ ವೈರಸ್ ಸೋಂಕು ದಿನೇದಿನೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಅಲ್ಲಲ್ಲಿ ಆಘಾತಕಾರಿ, ಕಳವಳಕಾರಿ ಸುದ್ದಿಗಳೂ ಗಮನಸೆಳೆಯುತ್ತಿವೆ. ಇವುಗಳ ನಡುವೆ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಸಮಾಧಿ ಸ್ಥಳದಲ್ಲಿ ಗುಂಡಿಗೆ ಎಸೆದ ದೃಶ್ಯವಿರುವ ವಿಡಿಯೋ ಈಗ ವೈರಲ್ ಆಗಿದೆ. ಆ್ಯಂಬುಲೆನ್ಸ್ ಸಿಬ್ಬಂದಿಯ ಈ ನಡವಳಿಕೆ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.ಈ ಆಘಾತಕಾರಿ ಘಟನೆಯ ಹಿನ್ನೆಲೆ ಹೀಗಿದೆ – 44 ವರ್ಷದ ವ್ಯಕ್ತಿ ಚೆನ್ನೈನಿಂದ ಪುದುಚೆರಿಗೆ ತವರುಮನೆಯಲ್ಲಿದ್ದ ಪತ್ನಿಯನ್ನು ಭೇಟಿಯಾಗಲು ಹೋಗಿದ್ದಾರೆ. ಅಲ್ಲಿ ತಲುಪಿದ ವ್ಯಕ್ತಿಗೆ ಎದೆ ನೋವು ಕಾಣಿಸಿಕೊಂಡು ಬೋಧ ಕಳೆದುಕೊಂಡು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಅವರು ಬದುಕಿ ಉಳಿಯಲಿಲ್ಲ. ಶವದ ಕೋವಿಡ್ 19 ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರುವುದು ದೃಢವಾಗಿದೆ.
ಕೋವಿಡ್ ನಿಯಮಾವಳಿ ಪ್ರಕಾರ ಈ ರೀತಿ ಮೃತಪಟ್ಟವರ ಅಂತಿಮ ಸಂಸ್ಕಾರದಲ್ಲಿ ಕುಟುಂಬದವರಿಗೆ ಪಾಲ್ಗೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದರಂತೆ, ಈ 44 ವರ್ಷದ ವ್ಯಕ್ತಿಯ ಮೃತದೇಹವನ್ನು ಸಮಾಧಿ ಮಾಡುವುದಕ್ಕಾಗಿ ಆ್ಯಂಬುಲೆನ್ಸ್ ಸಿಬ್ಬಂದಿ ಕೊಂಡೊಯ್ದಿದ್ದರು. ಅಲ್ಲಿ, ಅವರು ಸಮಾಧಿಯಲ್ಲಿ ಮೃತದೇಹವನ್ನು ಇರಿಸುವ ಬದಲು ಎಸೆದ ದೃಶ್ಯ ವಿಡಿಯೋ ಚಿತ್ರೀಕರಣವಾಗಿದೆ. ಇದು ವೈರಲ್ ಆಗಿದ್ದು, ಟೀಕೆ ವ್ಯಕ್ತವಾಗಿದೆ.
ಇದನ್ನೂ ಓದಿ:ಗುಜರಾತ್​ನಲ್ಲಿ ರೆಸಾರ್ಟ್​ ಪಾಲಿಟಿಕ್ಸ್ ಶುರು: ಗರಿಗೆದರಿದೆ ರಾಜ್ಯಸಭಾ ಚುನಾವಣಾ ರಾಜಕೀಯ
ಈ ಸಂಬಂಧ ಪುದುಚೆರಿ ಆರೋಗ್ಯ ನಿರ್ದೇಶಕ ಡಾ. ಮೋಹನ್ ಕುಮಾರ್ ಪ್ರತಿಕ್ರಿಯಿಸಿದ್ದು, ಈ ಘಟನೆ ಜೂನ್ 5 ರಂದು ಆಗಿದ್ದು, ಆಸ್ಪತ್ರೆಯ ಅಧಿಕೃತರಿಂದ ವಿವರಣೆ ಕೇಳಲಾಗಿದೆ. ಶವವನ್ನು ಸಮಾಧಿ ಮಾಡಲು ಕೊಂಡೊಯ್ದವರು ಉದ್ದೇಶ ಪೂರ್ವಕ ಮಾಡಿದ ಕೃತ್ಯವಲ್ಲ ಅದು. ಅವರಿಗೂ ಈ ಸೋಂಕಿನ ವಿಚಾರವಾಗಿ ಭಯ ಇದೆ. ಅಲ್ಲಿ ಸಮಾಧಿ ಮಾಡುವ ಸಂದರ್ಭದಲ್ಲಿ ಕಾಲು ಜಾರಿ ಆ ರೀತಿ ಆಗಿರಬಹುದು. ಮನುಷ್ಯ ಸಹಜ ತಪ್ಪಾಗಿದೆ. ಅವರನ್ನು ಕರೆಯಿಸಿ ಕಠಿಣ ಎಚ್ಚರಿಕೆ ನೀಡಲಾಗಿದೆ. ವ್ಯಕ್ತಿಯ ಕುಟುಂಬಸ್ಥರಿಂದ ಯಾವುದೇ ದೂರು ಬಂದಿಲ್ಲ. ಅವರು ಯಾರೂ ಈ ವಿಚಾರವಾಗಿ ನಮ್ಮನ್ನು ಭೇಟಿಮಾಡಿಲ್ಲ ಎಂದು ಹೇಳಿದ್ದಾರೆ.
ಇ-ಸರಕು ಸಾಗಣೆ ಅಕ್ರಮಗಳ ವಿರುದ್ಧ ಕ್ರಮ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:2 × five =
Remember me
