ಪುದುಚೇರಿ:ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಯುವಕನೊಬ್ಬನಿಗೆ ಪುದುಚೇರಿ ಮೂಲದ ಡಿಲಕ್ಸ್​ ಬಸ್ ಡ್ರೈವರ್​ ಮತ್ತು ಕಂಡಕ್ಟರ್​ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ.
ತನ್ನ ಗರ್ಲ್​ಫ್ರೆಂಡ್​ ಜತೆ ಬಸ್​ ಏರಿದ್ದ ಯುವಕ ಆಕೆಯನ್ನು ಮಲಗಿಸಿದ ಬಳಿಕ ಇನ್ನೊಂದು ಯುತಿಯ ಜತೆ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ಸಂತ್ರಸ್ತೆಯು ತಮಿಳುನಾಡಿನ ತಿಂಡಿವನಂ ಮೂಲದವಳು. ಸಂತ್ರಸ್ತೆಯು ಕೂಗಿಕೊಂಡ ಬಳಿಕ ಯುವಕನಿಗೆ ಡ್ರೈವರ್​ ಮತ್ತು ಕಂಡಕ್ಟರ್​ ಥಳಿಸಿದ್ದಾರೆ.
ಇದನ್ನೂ ಓದಿ:ಮೋದಿ ರೋಡ್ ಶೋ ಬಳಿ ಅನುಮಾನಾಸ್ಪದವಾಗಿ ಎಲೆಕ್ಟ್ರಿಕಲ್ ಸಾಮಗ್ರಿ ನಿಂತುಕೊಂಡಿದ್ದ ವ್ಯಕ್ತಿ; ಮುಂದೇನಾಯ್ತು?
ಆರೋಪಿಯನ್ನು ಶರತ್​ ಎಂದು ಗುರುತಿಸಲಾಗಿದೆ. ಇಡೀ ಘಟನೆಯನ್ನು ವಿಡಿಯೋ ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಬಳಿಕ ಉರುಳಾಯನಪೇಟೆಯ ವ್ಯಾಪ್ತಿಯ ಪೊಲೀಸ್​ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಸಂತ್ರಸ್ತೆಯು ಬೆಂಗಳೂರಿಗೆ ತಲುಪಲು ಪುದುಚೇರಿಯಿಂದ ಸ್ಲೀಪರ್​ ಕೋಚ್​ ಬಸ್​ ಏರಿದ್ದಳು. ಬಸ್​ ಸ್ವಲ್ಪ ದೂರ ಪ್ರಯಾಣಿಸಿದ ಕೂಡಲೇ ಹಿಂದಿನ ಸೀಟಿನಲ್ಲಿದ ಶರತ್​ ಮೈಮುಟ್ಟಲು ಶುರು ಮಾಡಿದ. ಆರಂಭದಲ್ಲಿ ಆಕಸ್ಮಿಕ ಅಂತಾ ಸಂತ್ರಸ್ತೆ ಸುಮ್ಮನಾಗಿದ್ದಳು. ಆದರೆ, ಆರೋಪಿ ಮತ್ತೆ ಅನುಚಿತವಾಗಿ ಸ್ಪರ್ಶಿಸಿ ಕ್ಷಮೆ ಕೋರಿದ್ದ. ಆಗಲೂ ಸಂತ್ರಸ್ತೆ ಸುಮ್ಮನಾಗಿದ್ದಳು. ಇದಾದ ಬಳಿಕ ಆರೋಪಿ ತನ್ನ ಬಟ್ಟೆಗಳನ್ನು ತೆಗೆದು ಸಂತ್ರಸ್ತೆಯಲ್ಲಿ ತಬ್ಬಿಕೊಳ್ಳಲು ಯತ್ನಿಸಿದ್ದಾನೆ.
ಆತನ ವರ್ತನೆಯಿಂದ ಶಾಕ್​ ಆದ ಸಂತ್ರಸ್ತೆ ಜೋರಾಗಿ ಕೂಗಿಕೊಂಡಿದ್ದಾಳೆ. ಇತ್ತ ಆರೋಪಿ ಏನೂ ಮಾಡಿಯೇ ಇಲ್ಲ ಎನ್ನುವಂತೆ ಬಸ್​ನಿಂದ ಕೆಳಗೆ ಇಳಿಯಲು ಯತ್ನಿಸಿದ್ದಾನೆ. ಈ ವೇಳೆ ಬಸ್​ನಲ್ಲಿದ್ದ ಡ್ರೈವರ್​ ಮತ್ತು ಕಂಡಕ್ಟರ್​ ಆರೋಪಿಯ ಬಳಿ ಬಂದು ಧರ್ಮದೇಟು ನೀಡಲು ಶುರು ಮಾಡಿದರು. ಈ ವೇಳೆ ಎಚ್ಚರಗೊಂಡ ಆರೋಪಿ ಶರತ್​ ಗರ್ಲ್​ಫ್ರೆಂಡ್​ ಆತನಿಗೆ ಹೊಡೆಯದಂತೆ ತಡೆಯಲು ಯತ್ನಿಸಿದಳು. ಆರೋಪಿಗೆ ಹೊಡೆಯುವ ಮುನ್ನ ಬಸ್​ ಸಿಬ್ಬಂದಿಯೊಬ್ಬರು ಆತನ ಗರ್ಲ್​ಫ್ರೆಂಡ್​ ಕಪಾಳಕ್ಕೆ ಬಾರಿಸಿದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಂತ್ರಸ್ತೆ ತನ್ನ ಕಷ್ಟವನ್ನು ವಿವರಿಸುತ್ತಿರುವ ಹಿನ್ನೆಲೆ ಧ್ವನಿಯನ್ನು ಕೇಳಬಹುದು.
ಆರೋಪಿಯ ಪ್ಯಾಂಟ್​ ಜಿಪ್​ ಓಪನ್​ ಆಗಿತ್ತು. ಇದೀಗ ಜಿಪ್​ ಹಾಕಿಕೊಂಡಿದ್ದಾನೆ ಎಂದು ವಿಡಿಯೋದಲ್ಲಿ ಸಂತ್ರಸ್ತೆ ಆರೋಪಿಸಿದ್ದಾಳೆ. ಹೊಡೆತವನ್ನು ಸಹಿಸದ ಆರೋಪಿ, ಕ್ಷಮಿಸಿ ಎಂದು ಬಸ್​ ಸಿಬ್ಬಂದಿ ಬಳಿ ಅಂಗಲಾಚಿದ್ದಾನೆ. ಆದರೂ ಬಿಡದೆ ಆತನನ್ನ ಮನಬಂದಂತೆ ಥಳಿಸಿ, ಕಾಲಿನಿಂದ ಒದ್ದು ಹಾಕಿದರು. ಬಸ್​ನಿಂದ ಕೆಳಗೆ ಇಳಿಯುವಾಗಲೂ ಇಬ್ಬರ ಮೇಲೆ ಬಸ್​ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ:ಯಾರ ಪಾಲಾಗಲಿದೆ ಸಕ್ಕರೆ ನಾಡಿನ ಸಿಹಿ? ಭದ್ರಕೋಟೆ ಉಳಿಸಿಕೊಳ್ಳಲು ಕೈ, ದಳ ಕಸರತ್ತು, ಕಮಲ ಪಾಳಯ ಪ್ರದರ್ಶಿಸಲಿದೆಯೇ ತಾಕತ್ತು?
ವಿಡಿಯೋ ವೈರಲ್ ಆದ ತಕ್ಷಣ ಉರುಳಾಯನಪೇಟೆ ಠಾಣೆಯ ಪೊಲೀಸ್ ಅಧಿಕಾರಿಗಳು ಬಸ್​ನಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಅಡಿಯಲ್ಲಿ ಶರತ್‌ನನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ.(ಏಜೆನ್ಸೀಸ್​)

ಫೋನ್​​​ ನಂಬರ್​ಗಾಗಿ ಶಾಲಾ ವಿದ್ಯಾರ್ಥಿನಿಯ ಹಿಂದೆ ಬಿದ್ದ ಕಾನ್ಸ್​ಟೆಬಲ್​! ನಂತರ ನಡೆದಿದ್ದಿಷ್ಟು…

ಒಂದೇ ಜಿಲ್ಲೆಯಲ್ಲಿ 3 ವರ್ಷವಿದ್ದ ಪೊಲೀಸರ ವರ್ಗ; ಚುನಾವಣಾ ಕರ್ತವ್ಯ ನಿಯೋಜನೆಗೆ ಮಾರ್ಗಸೂಚಿ

ಬಿಜೆಪಿಗೆ ಪೂರ್ಣ ಜನಾದೇಶ: ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 17 =
Remember me
