ಮುಂಬೈ:ವಿವಾದಿತ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಪುಣೆಯ ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ವಿರುದ್ಧ ಕಿರುಕುಳದ ದೂರು ನೀಡಿರುವ ಹಿನ್ನೆಲೆಯಲ್ಲಿ ಪುಣೆ ಪೊಲೀಸರ ಎದುರು ಶನಿವಾರ (ಜುಲೈ 20) ಹಾಜರಾಗಿ ತನ್ನ ಹೇಳಿಕೆಯನ್ನು ದಾಖಲಿಸಲಿದ್ದಾರೆ.
ಇದನ್ನೂ ಓದಿ:ಎನ್​ಟಿಎ ವೆಬ್‌ಸೈಟ್‌ನಲ್ಲಿ ನೀಟ್​-ಯುಜಿ ಫಲಿತಾಂಶ.. ಆನ್​ಲೈನ್​ನಲ್ಲಿ ಹೀಗೆ ಪರಿಶೀಲಿಸಬಹುದು..
ದೂರು ನೀಡಿದ ಬಳಿಕ ಖೇಡ್ಕರ್ ಗೆ ಸಮನ್ಸ್‌ ನೀಡಲಾಗಿತ್ತು. ಆದರೆ ಅವರು ಪೊಲೀಸರ ಎದುರು ಹಾಜರಾಗಿರಲಿಲ್ಲ. ಹೀಗಾಗಿ ಜು.20ರಂದು ಹಾಜರಾಗುವಂತೆ ಪುಣೆ ಪೊಲೀಸರು ಹೊಸ ಸಮನ್ಸ್ ಅನ್ನು ಹೊರಡಿಸಿದದ್ದಾರೆ. ಹೀಗಾಗಿ ಹಾಜರಾಗುವುದಾಗಿ ಆಕೆ ತಿಳಿಸಿದ್ದು, ‘ನಾವು ಕಾಯುತ್ತೇವೆ’ ಎಂದು ಪುಣೆಯ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಹೇಳಿದ್ದಾರೆ.
ಜುಲೈ 18 ರಂದು ಪೊಲೀಸರ ಮುಂದೆ ಹಾಜರಾಗಲು ಆಕೆಗೆ ಸಮನ್ಸ್ ನೀಡಲಾಗಿತ್ತು ಆದರೆ ಅವರು ಹಾಜರಾಗಲಿಲ್ಲ ಎಂದು ಕಮಿಷನರ್ ಹೇಳಿದರು. ಶನಿವಾರವೂ ಖೇಡ್ಕರ್ ಹಾಜರಾಗಲು ವಿಫಲವಾದರೆ ಪೊಲೀಸರು ಪರಿಸ್ಥಿತಿಯನ್ನು ಪರಿಶೀಲಿಸುತ್ತಾರೆ. ಮುಂದಿನ ಕ್ರಮವನ್ನು ನಿರ್ಧರಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಐಎಎಸ್ ತರಬೇತಿಯ ಭಾಗವಾಗಿ ಪೂಜಾ ಖೇಡ್ಕರ್ ರನ್ನು ಪುಣೆ ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ಅವರ ಅಡಿಯಲ್ಲಿ ನೇಮಿಸಲಾಯಿತು, ಆದರೆ ಆಕೆ ವಿಶೇಷ ಸೌಲಭ್ಯಗಳನ್ನು ಒತ್ತಾಯಿಸಿದ್ದಕ್ಕಾಗಿ ಜಿಲ್ಲಾಧಿಕಾರಿ ಔಪಚಾರಿಕ ದೂರು ನೀಡಿದ್ದರು. ಆದರೆ ಪೂಜಾ ಡಿಸಿ ವಿರುದ್ಧವೇ ದೂರು ನೀಡಿ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರಿಂದ ಪೊಲೀಸರು ತನಿಖೆಗೆ ಕರೆದಿದ್ದಾರೆ.
ಪ್ರಿಯಾಂಕಾ ಚೋಪ್ರಾ ಸುಂದರವಾಗಿಲ್ಲ ಎಂದಿದ್ದರು: ನಟಿಯ ಆರಂಭದ ದಿನಗಳ ರಹಸ್ಯ ಬಿಚ್ಚಿಟ್ಟ ಹಿರಿಯ ನಿರ್ದೇಶಕ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 + thirteen =
Remember me
