ನವದೆಹಲಿ:ಪಾಕಿಸ್ತಾನದ ಜೈಷ್ ಎ ಮೊಹಮ್ಮದ್ ಉಗ್ರರು ಜಮ್ಮು- ಕಾಶ್ಮೀರದ ಪುಲ್ವಾಮಾದಲ್ಲಿ ನಡೆಸಿದ ಭೀಕರ ಆತ್ಮಾಹುತಿ ದಾಳಿಗೆ 40 ಸಿಆರ್​ಪಿಎಫ್ ಯೋಧರು ಹುತಾತ್ಮರಾದ ಘಟನೆಗೆ ಇಂದಿಗೆ ಒಂದು ವರ್ಷ. ಉಗ್ರರ ಕೃತ್ಯಕ್ಕೆ ಭಾರತ ಬಾಲಾಕೋಟ್ ಮೇಲೆ ವೈಮಾನಿಕ ದಾಳಿ ನಡೆಸಿ ತೀಕ್ಷ ಪ್ರತಿಕ್ರಿಯೆ ನೀಡಿದೆಯಾದರೂ ಅಂದಿನ ದುರಂತ ಭಾರತೀಯರ ಎದೆಯಲ್ಲಿ ಎಂದಿಗೂ ಮಾಸದ ಗಾಯವಾಗಿ ಉಳಿದಿದೆ.
ಘಟನೆ ಹಿನ್ನೆಲೆ:2019ರ ಫೆ.14ರಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್​ಪಿಎಫ್) ಯೋಧರನ್ನು ಜಮ್ಮುವಿನಿಂದ ಶ್ರೀನಗರಕ್ಕೆ ರವಾನಿಸಲಾಗುತ್ತಿತ್ತು. ಸುಮಾರು 2,500ಕ್ಕಿಂತ ಹೆಚ್ಚು ಯೋಧರನ್ನು ಒಳಗೊಂಡಿದ್ದ 78 ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲಾಗಿ ಶ್ರೀನಗರದ ಕಡೆಗೆ ಸಂಚರಿಸುತ್ತಿದ್ದವು. ಮಧ್ಯಾಹ್ನ 3.15ರ ಸುಮಾರಿಗೆ ವಾಹನಗಳು ಅವಂತಿಪೋರಾದ ಲೆತ್ಪೋರಾ ಬಳಿ ಬರುತ್ತಿದ್ದಂತೆ ಎದುರಿನಿಂದ ಬಂದ ಕೆಂಪು ಬಣ್ಣದ ಮಾರುತಿ ಕಾರೊಂದು 40 ಜನ ಯೋಧರಿದ್ದ ವಾಹನವೊಂದಕ್ಕೆ ಡಿಕ್ಕಿ ಹೊಡೆಯಿತು. ಭಾರಿ ಸ್ಫೋಟ ಸಂಭವಿಸಿ, ಯೋಧರ ದೇಹಗಳು ಚಿದ್ರ ಚಿದ್ರವಾಗಿದ್ದವು. ಪಾಕಿಸ್ತಾನದ ಪ್ರಮುಖ ಉಗ್ರ ಮೌಲಾನಾ ಮಸೂದ್ ಅಜರ್​ನ ಜೈಷ್ ಸಂಘಟನೆ ನಡೆಸಿದ ಈ ದಾಳಿಗೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಆತ್ಮಾಹುತಿ ದಾಳಿಕೋರ ಉಗ್ರ ಆದಿಲ್ ದರ್ ಭಾರಿ ಪ್ರಮಾಣದ ಸುಧಾರಿತ ಸ್ಪೋಟಕ ತುಂಬಿಸಿಕೊಂಡು ಬಂದು ಈ ದಾಳಿ ನಡೆಸಿದ್ದ. ಪುಲ್ವಾಮಾ ದಾಳಿಗೆ ಪ್ರತಿಯಾಗಿ ಪಾಕ್​ನ ಬಾಲಾಕೋಟ್​ನಲ್ಲಿದ್ದ ಜೈಷ್ ಉಗ್ರರ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿತ್ತು. ಸುಮಾರು 250 ಉಗ್ರರು ಮೃತಪಟ್ಟಿದರು.
ಮತ್ತಷ್ಟು ದಾಳಿಗೆ ಜೈಷ್ ಸಂಚು
ಪುಲ್ವಾಮಾದಲ್ಲಿ ನಡೆಸಿದ್ದ ದಾಳಿಯ ರೀತಿಯಲ್ಲೇ ಮತ್ತಷ್ಟು ಭೀಕರ ದಾಳಿ ನಡೆಸಲು ಜೈಷ್ ಉಗ್ರ ಸಂಘಟನೆ ಸಂಚು ರೂಪಿಸಿದೆ. ಇದಕ್ಕಾಗಿ ಉನ್ನತಮಟ್ಟದ ತರಬೇತಿ ಪಡೆದ ಭಯೋತ್ಪಾದಕರನ್ನೊಳಗೊಂಡ ‘ಘಜ್ನವಿ ಪಡೆ’ ಎಂಬ ತಂಡವನ್ನು ರಚಿಸಿದೆ ಎಂದು ಗುಪ್ತಚರ ಮೂಲಗಳಿಂದ ತಿಳಿದುಬಂದಿದೆ. ಪಾಕ್​ನ ಗುಪ್ತಚರ ಸಂಸ್ಥೆ ಐಎಸ್​ಐ ಭಾರತದಲ್ಲಿ ಅತೀ ದೊಡ್ಡ ದಾಳಿಗಳನ್ನು ನಡೆಸಲು ಜೈಷ್​ಗೆ ಬೆಂಬಲ ನೀಡುತ್ತಿದೆ. ಇದಕ್ಕಾಗಿ ಲಷ್ಕರ್, ಹಿಜ್ಬುಲ್ ಮುಜಾಹಿದ್ದೀನ್ ಸೇರಿ ಇತರ ಉಗ್ರ ಸಂಘಟನೆಗಳ ತರಬೇತಿ ಪಡೆದ ಉಗ್ರರನ್ನು ಒಟ್ಟುಗೂಡಿಸಿ ಘಜ್ನವಿ ಪಡೆ ರಚಿಸಲಾಗಿದೆ. ಈ ಉಗ್ರರು ಸ್ಪೋಟಕಗಳು ತುಂಬಿದ ವಾಹನಗಳ ಮೂಲಕ ಭಾರತದ ಭದ್ರತಾ ಪಡೆಗಳ ಮೇಲೆ ಪುಲ್ವಾಮಾ ರೀತಿ ದಾಳಿ ನಡೆಸಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
