ಶ್ರೀನಗರ :2019ರ ಪುಲ್ವಾಮ ಭಯೋತ್ಪಾದಕ ದಾಳಿಯ ಸಂಚುಕೋರ ಜೈಶ್​-ಎ-ಮೊಹಮ್ಮದ್ ಸದಸ್ಯ ಮೊಹಮ್ಮದ್ ಇಸ್ಮಲ್ ಅಲ್ವಿ ಅಲಿಯಾಸ್ ಲಂಬೂ ಅಲಿಯಾಸ್​ ಅದ್ನಾನ್​ಗೆ ಇಂದು ಕಾಶ್ಮೀರದ ಭದ್ರತಾ ಸಿಬ್ಬಂದಿ ಅಂತ್ಯ ಹಾಡಿದ್ದಾರೆ. ಇಂದು ಬೆಳಿಗ್ಗೆ ಪುಲ್ವಾಮದ ದಾಚಿಗಮ್​ ಅರಣ್ಯ ಪ್ರದೇಶದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಅಲ್ವಿ ಮತ್ತು ಇನ್ನೊಬ್ಬ ಜೈಶ್​ ಉಗ್ರವಾದಿ ಮೃತಪಟ್ಟಿದ್ದಾರೆ.
ಜೈಶ್​ ಮುಖ್ಯಸ್ಥ ಮಸೂದ್​ ಅಜರ್​ನ ಕುಟುಂಬಕ್ಕೆ ಸೇರಿದವನೆನ್ನಲಾದ ಮೃತ ಮೊಹಮ್ಮದ್​ ಇಸ್ಮಲ್ ಅಲ್ವಿ, ಪುಲ್ವಾಮ ದಾಳಿಯ ಸಂಚು ರಚಿಸುವಲ್ಲಿ ಮತ್ತು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಪಾಕಿಸ್ತಾನಿ ನಾಗರಿಕನಾಗಿದ್ದ ಈತನ ಹೆಸರು ನಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎನ್​ಐಎ) ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:‘ನಿನ್ನ ಮೂಳೆ ಮುರಿಯುತ್ತೇನೆ’ ಎಂದು ಎಚ್ಚರಿಕೆ ನೀಡಿದ ಟಿಎಂಸಿ ಶಾಸಕ!
ಇಂದು ಬೆಳಿಗ್ಗೆ ಉಗ್ರವಾದಿಗಳು ಬಚ್ಚಿಟ್ಟುಕೊಂಡಿರುವ ಸುಳಿವು ಸಿಕ್ಕ ಭದ್ರತಾ ಪಡೆ ಮತ್ತು ಕಾಶ್ಮೀರ ಪೊಲೀಸರು ಪತ್ತೆ ಕಾರ್ಯಾಚರಣೆ ಆರಂಭಿಸಿದರು. ಆಗ ಇಬ್ಬರು ಉಗ್ರವಾದಿಗಳು ಗುಂಡು ಹಾರಿಸಲು ಆರಂಭಿಸಿದಾಗ, ಎನ್​ಕೌಂಟರ್​ನಲ್ಲಿ ಸಾವಪ್ಪಿದರು.  ಮೃತಪಟ್ಟವರಲ್ಲಿ ಒಬ್ಬ ಇಸ್ಮಲ್​ ಅಲ್ವಿಯಾಗಿ ಗುರುತಿಸಲ್ಪಟ್ಟಿದ್ದರೆ, ಮತ್ತೊಬ್ಬನ ಗುರುತು ಇನ್ನೂ ಪತ್ತೆ ಹಚ್ಚಲಾಗುತ್ತಿದೆ ಎನ್ನಲಾಗಿದೆ.
ದಶಕಗಳಲ್ಲೇ ಅತ್ಯಂತ ಬರ್ಬರವಾದ ದಾಳಿಯಾಗಿದ್ದ ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ, 40 ಸೈನಿಕರು ಮೃತಪಟ್ಟಿದ್ದರು. ಜೈಶ್​ ಸಂಘಟನೆಯ ಸೂಯಿಸೈಡ್​ ಬಾಂಬರ್​​​ಗಳು 2019 ಫೆಬ್ರವರಿ 14 ರಂದು​ ಈ ದಾಳಿ ನಡೆಸಿದ್ದರು. ಇದಾದ ನಂತರ ಪಾಕಿಸ್ತಾನದ ಬಾಲಾಕೋಟ್​ನಲ್ಲಿದ್ದ ಜೈಶ್​ ಸಂಘಟನೆಯ ಶಿಬಿರಗಳ ಮೇಲೆ ಭಾರತ ಏರ್​ಸ್ಟ್ರೈಕ್ ನಡೆಸಿತ್ತು ಎನ್ನಲಾಗಿದೆ.(ಏಜೆನ್ಸೀಸ್)
ಡಿಸ್ಕಸ್​ ಥ್ರೋ: ಅಂತಿಮ ಸುತ್ತಿಗೆ ಭಾರತದ ಕಮಲ್​ಪ್ರೀತ್ ಕೌರ್!

ಅಮೆರಿಕದ ಜನರನ್ನು ವಂಚಿಸುತ್ತಿದ್ದ ನಕಲಿ ಕಾಲ್ ಸೆಂಟರ್! 65 ಜನರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
