ಶ್ರೀನಗರ: ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ ನಡೆದ ಎನ್​ಕೌಂಟರ್​ಗೆ ಬಲಿಯಾದ ಉಗ್ರನ ಗುರುತು ಪತ್ತೆಯಾಗಿದೆ. ಆತ ಪಾಕಿಸ್ತಾನಿ ಪ್ರಜೆಯಾಗಿದ್ದು, ಜೈಷ್ ಏ ಮೊಹಮ್ಮದ್(JeM)ಗೆ ಸೇರಿದ ಮೋಸ್ಟ್ ವಾಂಟೆಡ್​ ಉಗ್ರ ಎಂದು ಗುರುತಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಈ ಭಯೋತ್ಪಾದಕ ಕಾಶ್ಮೀರ ಕಣಿವೆಯಲ್ಲಿ “ಅಬು ಸೈಫುಲ್ಲಾ” ಮತ್ತು “ಅಬು ಖಾಸಿಂ” ಎಂಬ ಹೆಸರುಗಳಿಂದ ಗುರುತಿಸಿಕೊಂಡಿದ್ದ. ಜಮ್ಮು-ಕಾಶ್ಮೀರದ ಸ್ಪೆಷಲ್ ಪೊಲೀಸ್ ಆಫೀಸರ್ (ಎಸ್​ಪಿಒ)ಗಳನ್ನು ಬೆದರಿಸಿದ ಪ್ರಕರಣ ಮತ್ತು ಇಬ್ಬರು ನಾಗರಿಕರನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣ ಮತ್ತು ಕಾಶ್ಮೀರ ಕಣಿವೆಯಿಂದ ಕಾರ್ಮಿಕೇತರರನ್ನು ಓಡಿಸಿದ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದ.
ಕಾಶ್ಮೀರದ ತ್ರಾಲ್ ಭಾಗದಲ್ಲಿ ಅಬು ಸೈಫುಲ್ಲಾ ಕಳೆದ ಒಂದೂವರೆ ವರ್ಷದಿಂದ ಸಕ್ರಿಯನಾಗಿದ್ದ. ಅನೇಕ ಅಪರಾಧಿ ಕೃತ್ಯಗಳಲ್ಲಿ, ದೇಶದ್ರೋಹಿ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಪಾಕಿಸ್ತಾನದ JeMನ ಸ್ವಯಂ ಘೋಷಿತ ಚೀಫ್ ಕಮಾಂಡರ್​ ಖಾರಿ ಯಾಸಿರ್​ನ ಆಪ್ತ ಈ ಅಬು ಸೈಫುಲ್ಲಾ. ಖಾರಿ ಯಾಸಿರ್​ 2013 ಜುಲೈನಲ್ಲಿ ಕುಪ್ವಾರದಲ್ಲಿ ರಕ್ಷಣಾ ಪಡೆಗಳ ಗುಂಡಿಗೆ ಬಲಿಯಾಗಿದ್ದ.
ಪುಲ್ವಾಮಾ ಜಿಲ್ಲೆಯ ಅವಂತಿಪೋರಾದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಮಂಗಳವಾರ ಚಾಲ್ತಿಯಲ್ಲಿದ್ದ ವೇಳೆ ಈ ಅಬು ಸೈಫುಲ್ಲಾ ಆತನ ಸಹಚರರ ಜತೆಗೆ ರಕ್ಷಣಾ ಪಡೆಗಳ ಬಲೆಗೆ ಬಿದ್ದಿದ್ದ. ಅವರನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದ ವೇಳೆ ಗುಂಡಿನ ದಾಳಿ ಶುರುಮಾಡಿದ್ದರಿಂದ ರಕ್ಷಣಾ ಪಡೆ ಕೂಡ ಪ್ರತಿದಾಳಿ ನಡೆಸಿತು. ಆಗ ಸೈಫುಲ್ಲಾ ಹತನಾಗಿದ್ದಾನೆ. (ಏಜೆನ್ಸೀಸ್)
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:13 − thirteen =
Remember me
