ಇಸ್ಲಾಮಾಬಾದ್:ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆ.14ರಂದು ಕಾರ್ ಬಾಂಬ್ ಸ್ಪೋಟಿಸಿ 40 ಭಾರತೀಯ ಯೋಧರನ್ನು ಹತ್ಯೆಗೈದಿದ್ದ ದುಷ್ಕೃತ್ಯದ ಹೊಣೆಯನ್ನು ಕೊನೆಗೂ ಪಾಕಿಸ್ತಾನ ಹೊತ್ತುಕೊಂಡಿದೆ. ಆ ಮೂಲಕ, ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕ್ ಕುಮ್ಮಕ್ಕು ನೀಡುತ್ತಿದೆ ಎಂಬ ಭಾರತದ ಆಪಾದನೆಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮತ್ತೊಮ್ಮೆಪುಷ್ಟಿ ಸಿಕ್ಕಂತಾಗಿದೆ. ಗುರುವಾರ ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ನಡೆದ ಜಿದ್ದಾಜಿದ್ದಿನ ಚರ್ಚೆ ವೇಳೆ ಬಣ್ಣ ಬಯಲು ಮಾಡಿಕೊಂಡರು. ಒಂದು ಹಂತದಲ್ಲಿ ವಿಪಕ್ಷಗಳ ಟೀಕೆಗಳಿಂದ ಕೆರಳಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಅಹ್ಮದ್ ಚೌಧರಿ ‘ಪುಲ್ವಾಮಾ ದಾಳಿ ನಮ್ಮ ಸರ್ಕಾರದ ಸಾಧನೆ’ ಎಂದು ಕೊಚ್ಚಿಕೊಂಡರು.
ಈ ಹೇಳಿಕೆಗೆ ವಿರೋಧ ವ್ಯಕ್ತವಾದ ಬಳಿಕ ‘ನಾನು ಹೇಳಿದ್ದು ಪುಲ್ವಾಮಾದ ಉಗ್ರರ ದಾಳಿ ಬಗ್ಗೆಯಲ್ಲ. ಆ ದಾಳಿಯ ನಂತರ ನಮ್ಮ ಸೇನೆ ನಡೆಸಿದ ವೈಮಾನಿಕ ಕಾರ್ಯಾಚರಣೆ ಬಗ್ಗೆ. ನಾವು ಜನರನ್ನು ಕೊಲ್ಲುವ ಮೂಲಕ ಶೌರ್ಯ ತೋರಿಲ್ಲ. ಉಗ್ರವಾದವನ್ನು ನಾವೂ ಖಂಡಿಸುತ್ತೇವೆ’ ಎಂದು ತಿಪ್ಪೆ ಸಾರಿಸುವ ಟ್ವೀಟ್ ಮಾಡಿದ್ದಾರೆ.
ಉಗ್ರವಾದಕ್ಕೆ ಪಾಕ್ ಸರ್ಕಾರದ ಬೆಂಬಲ ಇರುವುದು ಇಡೀ ಜಗತ್ತಿಗೆ ಗೊತ್ತಿರುವ ವಿಚಾರ. ಉಗ್ರರ ಮೂಲಕ ನಡೆಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯನ್ನು ಮರೆ ಮಾಚಲು ಎಷ್ಟೇ ಪ್ರಯತ್ನಪಟ್ಟರೂ ಸತ್ಯವನ್ನು ಅಡಗಿಸಲಾಗದು ಎಂದು ಭಾರತ ಹೇಳಿದೆ. ವಿಶ್ವಸಂಸ್ಥೆ ಗುರುತಿಸಿರುವ ಉಗ್ರರಲ್ಲಿ ಅನೇಕರಿಗೆ ಪಾಕ್ ಆಶ್ರಯ ನೀಡಿದೆ. ಈಗ ಪಾಕ್ ಸಚಿವರ ಬಾಯಿಂದಲೇ ಭಯೋತ್ಪಾದನೆಯಲ್ಲಿ ಸರ್ಕಾರದ ಪಾತ್ರ ಇದೆ ಎಂಬ ನಿಜ ಹೊರಬಿದ್ದಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ಮಂಗಳವಾರ ನಡೆದ ಭಾರತ ಮತ್ತು ಅಮೆರಿಕದ 2+2 (ವಿದೇಶಾಂಗ ಮತ್ತು ರಕ್ಷಣಾ) ಸಚಿವರ ಸಭೆಯಲ್ಲೂ ಗಡಿಯಾಚೆಗಿನ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸಲಾಯಿತು. ವಿಧ್ವಂಸಕ ಕೃತ್ಯವನ್ನು ತಡೆಯಲು ಪಾಕ್ ದೃಢ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಇದನ್ನು ಟೀಕಿಸಿದ್ದ ಪಾಕ್, ಉಭಯ ದೇಶಗಳ ಈ ಅನಪೇಕ್ಷಿತ ಹೇಳಿಕೆಯನ್ನು ತಿರಸ್ಕರಿಸುವುದಾಗಿ ಬುಧವಾರ ಹೇಳಿತ್ತು.
ಇಸ್ಲಾಮಾಬಾದ್: ಪುಲ್ವಾಮಾ ದಾಳಿ ಬಳಿಕ ಭಾರತದ ವಾಯು ಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್​ರನ್ನು ಪಾಕ್ ಬಂಧಿಸಿತ್ತು. ಅಭಿನಂದನ್​ರನ್ನು ಶೀಘ್ರ ಬಿಡುಗಡೆ ಮಾಡದಿದ್ದಲ್ಲಿ ಭಾರತ ದಾಳಿ ನಡೆಸಬಹುದೆಂಬ ಆತಂಕದಲ್ಲಿ, ರಕ್ಷಣಾ ಸಚಿವರ ಜತೆಗಿನ ಸಭೆ ವೇಳೆ ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಕಾಲು ನಡುಗುತ್ತಿತ್ತು ಎಂದು ಪಿಎಂಎಲ್-ಎನ್ ನಾಯಕ ಅಯಾಜ್ ಸಾದಿಕ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹಿರಂಗ ಪಡಿಸಿದ್ದಾರೆ. ಇದರೊಂದಿಗೆ ಔದಾರ್ಯದಿಂದ ಅಭಿನಂದನ್​ರನ್ನು ಬಿಡುಗಡೆ ಮಾಡಿದ್ದಾಗಿ ಕೊಚ್ಚಿಕೊಂಡಿದ್ದ ಪಾಕ್​ಗೆ ತೀವ್ರ ಮುಖಭಂಗವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 8 =
Remember me
