ಶ್ರೀನಗರ: 2019ರ ಫೆ.14ರಂದು ಉಗ್ರರು ನಡೆಸಿದ್ದ ಪುಲ್ವಾಮಾ ದಾಳಿ ರೀತಿಯ ಉಗ್ರರ ದಾಳಿಯನ್ನು ಭದ್ರತಾ ಪಡೆ ಸಿಬ್ಬಂದಿ ಬುಧವಾರ ರಾತ್ರಿ ವಿಫಲಗೊಳಿಸಿದ್ದಾರೆ.
ಸಿಕ್ಕ ಖಚಿತ ಮಾಹಿತಿಯನ್ನು ಆಧರಿಸಿ ರಾಜಪೋರಾದ ಅವಿಗುಂಡ್​ ಬಳಿಯ ಚೆಕ್​ಪೋಸ್ಟ್​ನಲ್ಲಿ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅದರಲ್ಲಿ 20 ಕೆ.ಜಿ. ಸುಧಾರಿತ ಸ್ಫೋಟ ಇರುವುದು ಪತ್ತೆಯಾಯಿತು. ವಶಕ್ಕೆ ಪಡೆಯುವಷ್ಟರಲ್ಲಿ ವಾಹನದ ಚಾಲಕ ಗುಂಡಿನ ದಾಳಿ ನಡೆಸುತ್ತಾ, ಕತ್ತಲಲ್ಲಿ ಪರಾರಿಯಾದ ಎನ್ನಲಾಗಿದೆ.
ಇದನ್ನೂ ಓದಿ:ಒಂದು ಲಕ್ಷ ದಾಟಿತು ಅಮೆರಿಕದಲ್ಲಿ ಕರೊನಾ ಸೋಂಕಿತರ ಸಾವಿನ ಸಂಖ್ಯೆ
ಪರಾರಿಯಾಗಿರುವ ಕಾರಿನ ಚಾಲಕ ಹಿಜ್ಬುಲ್​ ಮುಜಾಹಿದ್ದೀನ್​ ಸಂಘಟನೆಗೆ ಸೇರಿದ ಉಗ್ರನಿರಬಹುದು ಎಂದು ಶಂಕಿಸಲಾಗಿದೆ.ಕಾರಿನ ಹಿಂಬದಿಯಲ್ಲಿ ಡ್ರಮ್​ವೊಂದರಲ್ಲಿ ಸ್ಫೋಟಕಗಳನ್ನು ಅಡಗಿಸಿಡಲಾಗಿತ್ತು. ತಕ್ಷಣವೇ ಸ್ಥಳಕ್ಕೆ ಬಂದ ಬಾಂಬ್​ ನಿಷ್ಕ್ರಿಯ ದಳ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿ, ಸಂಭಾವ್ಯ ಉಗ್ರರ ದಾಳಿಯನ್ನು ವಿಫಲಗೊಳಿಸಿತು ಎನ್ನಲಾಗಿದೆ.
ಕಾರಿಗೆ ನಕಲಿ ನಂಬರ್​ ಪ್ಲೇಟ್​ ಲಗತ್ತಿಸಲಾಗಿತ್ತು. ಕಥುವಾ ಜಿಲ್ಲೆಯಲ್ಲಿ ನೋಂದಾಯಿಸಲ್ಪಟ್ಟಿರುವ ಯಾವುದೋ ಸ್ಕೂಟರ್​ನ ನೋಂದಣಿ ಸಂಖ್ಯೆಯನ್ನು ಬಳಸಲಾಗಿತ್ತು ಎನ್ನಲಾಗಿದೆ. ವಾಹನವನ್ನು ಸದ್ಯ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ವಶಕ್ಕೆ ಪಡೆದುಕೊಂಡಿದೆ.
ನಾಲ್ವರ ಪ್ರಯಾಣಕ್ಕೆ ಇಡೀ ವಿಮಾನವನ್ನೇ ಬುಕ್​ ಮಾಡಿದ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 20 =
Remember me
