ಚೆನ್ನೈ:ಪೆಟ್ರೋಲ್​ ಬೆಲೆ ದಿನೇದಿನೆ ಹೆಚ್ಚಳವಾಗುತ್ತಿದೆ. ಆದರೆ ಈ ಒಂದು ಪೆಟ್ರೋಲ್​ ಬಂಕ್​ ಮಾತ್ರ ಉಚಿತವಾಗಿಯೇ ಪೆಟ್ರೋಲ್​ ಕೊಡೋದಕ್ಕೆ ಸಿದ್ಧವಿದೆ. ಇಂತಹ ಒಂದು ನಿರ್ಧಾರವನ್ನು ಬಂಕ್​ ಯಾವ ಕಾರಣಕ್ಕೆ ತೆಗೆದುಕೊಂಡಿದೆ, ಫ್ರೀ ಪೆಟ್ರೋಲ್​ ಪಡೆಯೋದಕ್ಕೆ ಏನು ಮಾಡಬೇಕು ಎಂದು ಅರಿಯಲು ಮುಂದೆ ಓದಿ..
ತಮಿಳುನಾಡಿನ ಕರೂರು ಜಿಲ್ಲೆಯ ನಾಗಂಪಳ್ಳಿ ಗ್ರಾಮದಲ್ಲಿರುವ ವಲ್ಲುವರ್ ಏಜೆನ್ಸಿಗಳ ಪೆಟ್ರೋಲ್​ ಬಂಕ್​ನಲ್ಲಿ ಇಂತದ್ದೊಂದು ಆಫರ್​ ಇದೆ. ಇಲ್ಲಿ ನಿಮಗೆ ಉಚಿತ ಪೆಟ್ರೋಲ್​ ಬೇಕೆಂದರೆ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬೇಕು. 1ರಿಂದ 12ನೇ ತರಗತಿವರೆಗಿನ ಯಾವುದೇ ವಿದ್ಯಾರ್ಥಿ ತಿರುವಳ್ಳುವರ ತಿರುಕ್ಕುರಲ್​ನ ಯಾವುದಾದರೂ ದ್ವಿಪದಿಗಳನ್ನು ಹೇಳಿದರೆ ನಿಮಗೆ ಉಚಿತವಾಗಿ ಪೆಟ್ರೋಲ್​ ಸಿಗುತ್ತದೆ. 10 ದ್ವಿಪದಿ ಹೇಳಿದರೆ ಅರ್ಧ ಲೀಟರ್​ ಹಾಗೂ 20 ದ್ವಿಪದಿ ಹೇಳಿದರೆ ಒಂದು ಲೀಟರ್​ ಪೆಟ್ರೋಲ್​ ಫ್ರೀ.
ತಮಿಳುನಾಡಿನ ಶ್ರೇಷ್ಠ ಕವಿ ತಿರುವಳ್ಳುವರ ಸಾವಿರಾರು ದ್ವಿಪದಿಗಳನ್ನು ರಚಿಸಿದ್ದಾರೆ. ಅದನ್ನೆಲ್ಲ ಒಟ್ಟುಗೂಡಿಸಿ ತಿರುಕ್ಕುರಲ್ ಹೆಸರಿನ ಪಠ್ಯ ರಚಿಸಲಾಗಿದೆ. ರಾಜ್ಯದ ಮಕ್ಕಳಲ್ಲಿ ಆ ದ್ವಿಪದಿಗಳನ್ನು ಉಳಿಸಿ, ಸಾಹಿತ್ಯ ಪ್ರೀತಿಯನ್ನು ಬೆಳೆಸುವ ಸಲುವಾಗಿ ಪೆಟ್ರೋಲ್​ ಬಂಕ್​ನವರು ಈ ಯೋಜನೆ ಹಾಕಿಕೊಂಡಿದ್ದಾರಂತೆ.
ಮಕ್ಕಳು ತಾವು ಹೇಳುವ ದ್ವಿಪದಿಯನ್ನು ಬರೆದಿರುವ ಪುಟವನ್ನು ಪೆಟ್ರೋಲ್​ ಬಂಕ್​ನವರಿಗೆ ನೀಡಬೇಕು. ನಂತರ ಅದನ್ನು ನೋಡದೆಯೇ ಹೇಳಬೇಕು. ಮಕ್ಕಳು ಯಾವುದೇ ತಪ್ಪಿಲ್ಲದೆ ದ್ವಿಪದಿ ಹೇಳಿದರೆ ಬಂಕ್​ನವರು ಖುಷಿಯಿಂದ ಗಾಡಿಗೆ ಉಚಿತ ಪೆಟ್ರೋಲ್​ ತುಂಬಿಸಿ ಕಳಿಸುತ್ತಾರೆ. ತಪ್ಪು ಹೇಳಿದ್ದಾದಲ್ಲಿ, ದುಡ್ಡು ಕೊಟ್ಟು ಪೆಟ್ರೋಲ್​ ತುಂಬಿಸಿಕೊಳ್ಳಬಹುದು. (ಏಜೆನ್ಸೀಸ್​)
ಶುರುವಾಯ್ತು ದೀದಿಯ ‘ಮಾ’ ಕ್ಯಾಂಟೀನ್​; ವೋಟ್​ ಬ್ಯಾಂಕಿಂಗ್​ ತಂತ್ರ ಎಂದು ಕಾಲೆಳೆದ ಬಿಜೆಪಿ

ಗ್ರೆಟಾ ಜತೆ ದಿಶಾ ಸಂಭಾಷಣೆ ಹೇಗಿತ್ತು ಗೊತ್ತಾ? ಟೂಲ್​ಕಿಟ್​ನಲ್ಲಿತ್ತು ಈ ಎಲ್ಲ ಮಾಹಿತಿಗಳು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five + 20 =
Remember me
