ಪುಣೆ:ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ತನ್ನ ಖಾಸಗಿ ಭಾಗಕ್ಕೆ ಬಡಿದು 11 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ
ಬ್ಯಾಟರ್ ಬಾಲನ್ನು ನೇರವಾಗಿ ತನ್ನತ್ತ ಹೊಡೆದಾಗ ಶೌರ್ಯ ಎಂಬ ಬಾಲಕ ಬೌಲಿಂಗ್ ಮಾಡುತ್ತಿದ್ದ. ವೇಗವಾಗಿ ಬಂದ ಚೆಂಡು ಶೌರ್ಯನ ಮರ್ಮಾಂಗಕ್ಕೆ ಬಡಿದಿದ್ದರಿಂದ, ಆತ ಮೈದಾನದಲ್ಲೇ ಕುಸಿದು ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
VIDEO | In a shocking incident in#Pune, an 11-year-old boy died while playing cricket after a ball hit his private part.
The deceased has been identified as Shaurya Khadwe.
The incident happened in#Lohegaonon Thursday.https://t.co/0QTgGuCC6Kpic.twitter.com/7F7vB3On6E
— Free Press Journal (@fpjindia)May 6, 2024

ಕೂಡಲೇ ಸ್ನೇಹಿತರು ಬಂದು ಶೌರ್ಯನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಶೌರ್ಯ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಈ ಸಂಬಂಧ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹನ್ನೊಂದು ವರ್ಷದ ಶೌರ್ಯ ಕ್ರಿಕೆಟ್‌ನಲ್ಲಿ ಕಠಿಣ ಅಭ್ಯಾಸ ಮಾಡಿ ಉತ್ತಮ ಕ್ರಿಕೆಟರ್ ಆಗುವ ಕನಸು ಕಂಡಿದ್ದ. ಆದರೆ ಆಕಸ್ಮಿಕವಾಗಿ ಸಂಭವಿಸಿದ ಘಟನೆಯಿಂದ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಕನ್ಯಾಕುಮಾರಿ ಸಮುದ್ರದಲ್ಲಿ ಈಜಲು ಹೋದ ಐವರು ಮೆಡಿಕಲ್​ ವಿದ್ಯಾರ್ಥಿಗಳು ನೀರುಪಾಲು!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 + nine =
Remember me
