ಪುಣೆ:ಜನವರಿ 16, 17 ರಂದು ಜಿ-20 ಸಮ್ಮೇಳನದ ನಡೆಯಲಿರುವ ಹಿನ್ನೆಲೆಯಲ್ಲಿ 35 ದೇಶಗಳ ಪ್ರತಿನಿಧಿಗಳು ಪುಣೆ ನಗರಕ್ಕೆ ಬಂದಿಳಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ನಗರವನ್ನು ಅಂದಗಾಣಿಸುವ ಕೆಲಸವನ್ನು ನಗರ ಸಭೆ ಮಾಡುತ್ತಿದೆ. ಇನ್ನು ಸ್ವಚ್ಛತೆಯ ವಿಚಾರದಲ್ಲಿ ಸರ್ಕಾರವನ್ನು ದೂರಿ ಪ್ರಯೋಜನವಿಲ್ಲ. ಇಲ್ಲಿ ಜನರ ಜವಾಬ್ದಾರಿಯೂ ಅತೀ ಮುಖ್ಯವಾಗಿರುತ್ತದೆ. ಸಾರ್ವಜನಿಕರ ಸಹಕಾರ ಇದ್ದಾಗ ಮಾತ್ರ ಇಡೀ ನಗರವನ್ನು ಸ್ವಚ್ಛಂದವಾಗಿರಿಸಲು ಸಾಧ್ಯವಾಗುತ್ತದೆ.
ಇದೀಗ ಪುಣೆ ಮಹಾನಗರ ಪಾಲಿಕೆ ವಿಡಿಯೋವೊಂದನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಹಾನಗರ ಪಾಲಿಕೆಯ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
‘ಸ್ವಚ್ಛ ಸರ್ವೇಕ್ಷಣಾ-2023’ ಎಂಬ ಕಾರ್ಯಕ್ರಮದಡಿಯಲ್ಲಿ ಪುಣೆ ನಗರದಲ್ಲಿ ಸ್ವಚ್ಛತಾ ಕೆಲಸ ಆರಂಭವಾಗಿದೆ. ಅದರಂತೆ ನಗರದಲ್ಲಿ ಎಲ್ಲೆಂದರಲ್ಲಿ ಉಗುಳುವುದು, ಕಸ ಎಸೆಯುವವರನ್ನು ಪತ್ತೆ ಮಾಡಿ ದಂಡ ವಿಧಿಸಲಾಗುತ್ತದೆ. ಅಂತೆಯೇ ವ್ಯಕ್ತಿಯೊಬ್ಬ ಬಂದು ರಸ್ತೆಯಲ್ಲೇ ಉಗುಳಿದ್ದಾರೆ. ಇದು ಸ್ಥಳದಲ್ಲಿದ್ದ ಪೊಲೀಸರ ಗಮನಕ್ಕೆ ಬಂದಿದೆ. ಕೂಡಲೇ ಎಚ್ಚೆತ್ತ ಅಧಿಕಾರಿ, ರಸ್ತೆಗೆ ಉಗುಳಿದ ವ್ಯಕ್ತಿಯಿಂದಲೇ ಅದನ್ನು ಶುಚಿಗೊಳಿಸಲು ಸೂಚಿಸಿದ್ದಾರೆ. ಅದರಂತೆ ಆತ ಬಟ್ಟೆಯ ಸಹಾಯದಿಂದ ರಸ್ತೆಯಲ್ಲಿ ಉಗುಳಿದ್ದನ್ನು ಸ್ವಚ್ಛಗೊಳಿಸಿದ್ದಾನೆ.
.@g20orgपरिषद व स्वच्छ सर्वेक्षण २०२३ निमित्त मुख्य रस्ते, फूटपाथ व दुभाजकांवर थुंकणाऱ्या नागरिकांवर दंडात्मक कारवाई करण्यात येत आहे. याअंतर्गत पुणे विद्यापीठ मार्गावर एका नगरिकावर कारवाई करून त्यांनी केलेली घाण त्यांच्याद्वारे स्वच्छ करण्यात आली.#PMC#G20inPune#G20Indiapic.twitter.com/YkykpcTFYh— PMC Care (@PMCPune)January 13, 2023
.@g20orgपरिषद व स्वच्छ सर्वेक्षण २०२३ निमित्त मुख्य रस्ते, फूटपाथ व दुभाजकांवर थुंकणाऱ्या नागरिकांवर दंडात्मक कारवाई करण्यात येत आहे. याअंतर्गत पुणे विद्यापीठ मार्गावर एका नगरिकावर कारवाई करून त्यांनी केलेली घाण त्यांच्याद्वारे स्वच्छ करण्यात आली.#PMC#G20inPune#G20Indiapic.twitter.com/YkykpcTFYh
ಜಿ-20 ಸಮ್ಮೇಳನದ ಸಿದ್ಧತೆಯಾಗಿ ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ನಗರದ ರಸ್ತೆಗಳನ್ನು ಸ್ವಚ್ಛಗೊಳಿಸಿ ಸುಂದರಗೊಳಿಸುತ್ತಿದೆ. ಆದರೆ, ನಾಗರಿಕರು ಮಾತ್ರ ಗೋಡೆಯಲ್ಲಿ ಚಿತ್ರಿಸಿರುವ ಮತ್ತು ಸುಂದರ ಸ್ಥಳಗಳ ಮೇಲೆ ಉಗುಳುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಎಲ್ಲ ವಾರ್ಡ್ ಕಚೇರಿಗಳ ವ್ಯಾಪ್ತಿಯಲ್ಲಿ ವಿಶೇಷ ತಂಡ ರಚಿಸಿ ಕ್ರಮ ಕೈಗೊಂಡು ದಂಡ ವಿಧಿಸಲಾಗುತ್ತಿದೆ ಎಂದು ವರದಿಯಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
