ನವದೆಹಲಿ:ಬಾಲ್ಯದಲ್ಲಿರುವಾಗ ಮುಂದೆ ನೀನು ಏನಾಗುತ್ತೀಯಾ ಎಂದು ಅನೇಕ ಜನರು ಪ್ರಶ್ನಿಸುತ್ತಾರೆ. ಈ ವೇಳೆ ಬಹುತೇಕ ಮಕ್ಕಳು ಶಿಕ್ಷಕರು, ವೈದ್ಯರು, ಇಂಜಿನಿಯರಿಂಗ್, ಪೊಲೀಸ್​ ಮತ್ತು ಪೈಲಟ್ ಆಗುವುದಾಗಿ ಹೇಳುತ್ತಾರೆ. ಆದರೆ, ಕ್ರಮೇಣ ಬುದ್ಧಿ ಬೆಳೆದಂತೆ ಅನೇಕರಿಗೆ ಐಎಎಸ್​ ಅಧಿಕಾರಿಯಾಗುವ ಕನಸು ಬೆಳೆಯುತ್ತದೆ. ಓರ್ವ ಐಎಎಸ್​ ಅಧಿಕಾರಿ ಅಂದರೆ ಸಾಮಾನ್ಯನಲ್ಲ. ಆಡಳಿತ ವಿಭಾಗದಲ್ಲಿ ಆತನೇ ಮೊದಲು. ಆತನಿಗೆ ಅಪಾರ ಗೌರವ ಸಿಗುತ್ತದೆ.
ಐಎಎಸ್​ ಅಧಿಕಾರಿ ಕೇವಲ ಸರ್ಕಾರಿ ನೌಕರನಷ್ಟೇ ಅಲ್ಲ ಸಾರ್ವಜನಿಕರಿಗೆ ಜವಾಬ್ದಾರನಾಗಿರುತ್ತಾನೆ. ಕೆಲವೇ ಜನರು ದೊಡ್ಡವರಾದ ಮೇಲೆ ಐಎಎಸ್​ ಅಧಿಕಾರಿಗಳಾಗುತ್ತಾರೆ. ಅದಕ್ಕಾಗಿ ಸಾಕಷ್ಟು ಸಮರ್ಪಣೆ ಮತ್ತು ಪರಿಶ್ರಮ ಅಗತ್ಯ. ನಿಖರವಾದ ಗುರಿಯೊಂದಿಗೆ ಸಾಧಿಸುವ ಹಂಬಲ ಇದ್ದರೆ ಮಾತ್ರ ಯುಪಿಎಸ್‌ಸಿಯನ್ನು ಭೇದಿಸಬಹುದು. ಐಎಎಸ್ ಮತ್ತು ಐಪಿಎಸ್ ಪಡೆಯುವುದು ಒಂದು ತಪಸ್ಸಿನಂತೆ ಎಂದು ಹೇಳಬಹುದು. ಇಷ್ಟೊಂದು ಉನ್ನತ ಹುದ್ದೆಯನ್ನು ಅಲಂಕರಿಸಬೇಕಿದ್ದ ಮಹಿಳಾ ಟ್ರೈನಿ ಕಲೆಕ್ಟರ್‌ಗೆ ಕೊನೆಗೂ ತನ್ನ ಅತ್ಯುತ್ಸಾಹದಿಂದ ಎಡವಟ್ಟು ಮಾಡಿಕೊಂಡಿದ್ದಾರೆ.
2023ರ ಯುಪಿಎಸ್​ಸಿ ಫಲಿತಾಂಶದಲ್ಲಿ ಪೂಜಾ ಖೇಡ್ಕರ್ 841ನೇ ಆಲ್​ ಇಂಡಿಯಾ ರ್ಯಾಂಕ್​ ಪಡೆದುಕೊಂಡಿದ್ದಾರೆ. ಪ್ರಸ್ತುತ ಆಕೆ ಟ್ರೈನಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಆಕೆಯ ಅಧಿಕಾರ ದುರ್ಬಳಕೆ ಅತಿಯಾದ ಪರಿಣಾಮ ರಾಜ್ಯ ಸರ್ಕಾರವೇ ಕ್ರಮ ಕೈಗೊಂಡಿದೆ. ಪೂಜಾ ಅವರು ಪ್ರಸ್ತುತ ಮಹಾರಾಷ್ಟ್ರದ ಪುಣೆಯಲ್ಲಿ ಟ್ರೈನಿ ಐಎಎಸ್​ ಆಗಿ ಕೆಲಸ ಮಾಡುತ್ತಿದ್ದಾರೆ. ಇದು ತರಬೇತಿ ಅವಧಿಯಾಗಿದ್ದು, ಈ ಹಂತದಲ್ಲೇ ತನಗೆ ವಿಶೇಷ ಅಧಿಕಾರ ನೀಡುವಂತೆ ಜಿಲ್ಲಾಧಿಕಾರಿ ಕಚೇರಿಗೆ ಪೂಜಾ ಪತ್ರ ಬರೆದಿದ್ದಾರೆ. ಇದು ಟೀಕೆಗೆ ಗುರಿಯಾಗಿದೆ. ಅಲ್ಲದೆ, ತನ್ನ ಖಾಸಗಿ ಕಾರಿನ ಮೇಲೆ ಕೆಂಪು ಮತ್ತು ನೀಲಿ ದೀಪವನ್ನು ಬಳಸುವುದರ ಜೊತೆಗೆ, ವಿಐಪಿ ನಂಬರ್ ಪ್ಲೇಟ್ ಅನ್ನು ಸಹ ಅಳವಡಿಸಿದ್ದಾರೆ ಮತ್ತು ಅದರ ಮೇಲೆ ಮಹಾರಾಷ್ಟ್ರ ಸರ್ಕಾರ ಎಂದು ಬೋರ್ಡ್ ಹಾಕಿಸಿದ್ದಾರೆ.
ಇಷ್ಟಕ್ಕೆ ಪೂಜಾ ಅವಾಂತರ ಮುಗಿಯುವುದಿಲ್ಲ, ವಿಐಪಿ ನಂಬರ್ ಪ್ಲೇಟ್ ಹೊಂದಿರುವ ಸರ್ಕಾರಿ ಕಾರು, ವಸತಿ, ಸಮರ್ಪಕ ಸಿಬ್ಬಂದಿ ಹಾಗೂ ಕಾನ್​ಸ್ಟೆಬಲ್ ಸೇರಿದಂತೆ ಅಧಿಕೃತ ಚೇಂಬರ್ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿಗೆ ಬರೆದ ಪತ್ರದಲ್ಲಿ ಬೇಡಿಕೆ ಇಡಲಾಗಿದೆ. ಇದಿಷ್ಟೇ ಅಲ್ಲದೆ, ಪುಣೆಯ ಹೆಚ್ಚುವರಿ ಜಿಲ್ಲಾಧಿಕಾರಿ ಅಜಯ್ ಮೋರೆ ಇಲ್ಲದ ಸಂದರ್ಭದಲ್ಲಿ ಆ ಚೇಂಬರ್ ಕೂಡ ಒತ್ತುವರಿ ಮಾಡಿಕೊಂಡು, ತನ್ನ ಹೆಸರಿನಲ್ಲಿ ಬೋರ್ಡ್ ಹಾಕಿಕೊಂಡಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ವಾನುಮತಿ ಇಲ್ಲದೆ ಕುರ್ಚಿ, ಸೋಫಾ, ಟೇಬಲ್ ಸೇರಿದಂತೆ ಎಲ್ಲ ವಸ್ತುಗಳನ್ನು ತೆಗೆದಿದ್ದರು. ಇದಾದ ಬಳಿಕ ಆಕೆ ತನ್ನ ಹೆಸರಿಗೆ ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್, ನೇಮ್ ಪ್ಲೇಟ್, ಸೀಲ್ ಮತ್ತು ಇಂಟರ್‌ಕಾಮ್ ನೀಡುವಂತೆ ಕಂದಾಯ ಸಹಾಯಕರಿಗೆ ಸೂಚನೆ ನೀಡಿದರು.
ಪೂಜಾ ಅವರ ತಂದೆ (ನಿವೃತ್ತ ಆಡಳಿತಾಧಿಕಾರಿ) ಕೂಡ ಮಗಳ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಡ ಹೇರಿದ್ದರು. ಕೊನೆಗೆ ಆಕೆಯ ಬೇಡಿಕೆಯನ್ನು ತಡೆದುಕೊಳ್ಳಲಾಗದೆ ಪುಣೆ ಕಲೆಕ್ಟರ್ ಸುಹಾಸ್ ದಿವಾಸೆ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆಕೆಯ ಕಾರ್ಯಗಳಿಂದ ಬೇಸತ್ತ ಮಹಾರಾಷ್ಟ್ರ ಸರ್ಕಾರವು ಆಕೆಯನ್ನು ಪುಣೆಯಿಂದ ವಾಶಿಮ್‌ಗೆ ವರ್ಗಾಯಿಸಿದೆ. ಇದಲ್ಲದೆ, ಆಕೆಯ ಪ್ರೊಬೇಷನರಿ ಅವಧಿಯ ಅಂತ್ಯದವರೆಗೆ, ಆಕೆ ವಾಶಿಮ್‌ನಲ್ಲಿ ಸೂಪರ್‌ನ್ಯೂಮರರಿ ಸಹಾಯಕ ಕಲೆಕ್ಟರ್ ಆಗಿ ಕೆಲಸ ಮಾಡಲು ನಿರ್ದೇಶಿಸಲಾಗಿದೆ.(ಏಜೆನ್ಸೀಸ್​)
ಆ ಒಂದು ಕಂಡೀಷನ್​ಗೆ ಒಪ್ಪಿದ್ರೆ ಮಾಡ್ತೀನಿ! ಕೃತಿ ಶೆಟ್ಟಿ ಲಿಪ್​ಲಾಕ್​ ದೃಶ್ಯದ ರಹಸ್ಯ ಬಯಲು

ಮನೆಯೂಟ, ಹಾಸಿಗೆಗಾಗಿ ನಟ ದರ್ಶನ್​ ಬೇಡಿಕೆ: ವಿಚಾರಣೆ ನಡೆಸಿದ ಹೈಕೋರ್ಟ್​ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
