ಪುಣೆ:ಆಧುನಿಕತೆ ಬೆಳೆದಂತೆ ನಾವೆಲ್ಲರೂ ಪಾಶ್ಚಾತ್ಯ ಸಂಸ್ಕೃತಿಗೆ ಒಗ್ಗಿಕೊಳ್ಳತ್ತಿದ್ದೇವೆ. ಲಿವ್ ಇನ್ ರಿಲೇಷನ್ ಇರುವ ಜೋಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಜೋಡಿಯೊಂದು ಗೃಹ ಸಾಲವನ್ನು ಪಾವತಿಸಲು ಬೈಕ್‌ ಕದ್ದು ಸಿಕ್ಕಿಬಿದ್ದಿದ್ದಾರೆ.
ಬಂಧಿತ ಆರೋಪಿಗಳನ್ನು ವಿಕ್ರಮ್ ಮತ್ತು ಅನುರಾಧ ಎಂದು ಗುರುತಿಸಲಾಗಿದೆ. ವಿಕ್ರಮ್ ಹಾಗೂ ಅನುರಾಧ ತಮ್ಮ ಆರ್ಥಿಕ ನಿರ್ವಹಣೆಗೆ ಸಾಧ್ಯವಾಗದೇ ಮೋಟಾರ್ ಬೈಕ್ ಗಳನ್ನು ಕದಿಯಲು ನಿರ್ಧರಿಸಿದ್ದರು.   ಮನೆಗೆ ಮಾಡಿರುವ ಸಾಲವನ್ನು ಪಾವತಿಸಲು ದ್ವಿಚಕ್ರ ವಾಹನಗಳನ್ನು ಕದ್ದ ಆರೋಪದ ಮೇಲೆ ಪುಣೆಯ ಲಿವ್ ಇನ್ ರಿಲೇಶನ್ ಶಿಪ್ ಜೋಡಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಮೊಮ್ಮಗಳನ್ನು ಅಪಹರಿಸಿ ಮಗಳ ಬಳಿ 60 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟ ವೃದ್ಧ!; ಮುಂದೆನಾಯ್ತು..?ಪುಣೆಯ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು 40,000 ರೂ. ವೇತನ ಪಡೆಯುತ್ತಿದ್ದ ವಿಕ್ರಮ್. ಈತ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದ. ತನ್ನ ಪ್ರದೇಶದಲ್ಲಿಯೇ ನೆಲೆಸಿದ್ದ ಅನುರಾಧ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ನಂತರ ಇಬ್ಬರೂ ಒಟ್ಟಿಗೆ ಇರಲು ಪ್ರಾರಂಭಿಸಿದರು. ವಿವಾಹವಾಗಿರುವಾಗಲೇ ವಿಕ್ರಮ್​​ ಫ್ಲಾಟ್ ಖರೀದಿಸಿ ಗೃಹ ಸಾಲ ಪಡೆದಿದ್ದನು. ಲಿವ್ ಇನ್ ರಿಲೇಶನ್ ಶಿಪ್ ಸಂಬಂಧಕ್ಕೆ ಬಂದ ನಂತರ, ಅವರು ಖರ್ಚುಗಳನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ ಮತ್ತು ಸಾಲವನ್ನು ಪಾವತಿಸಲು ಹೆಚ್ಚುವರಿ ಹಣದ ಅಗತ್ಯವಿತ್ತು. ಇಬ್ಬರೂ ಬೈಕ್‌ಗಳನ್ನು ಕದ್ದು ನಂತರ ಅದನ್ನು ಮಾರಾಟ ಮಾಡಲು ನಿರ್ಧರಿಸಿದರು. ಪೊಲೀಸರು ತಡೆಯಬಾರದು ಅನುಮಾನ ಬರಬಾರದು ಎಂದು ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದ. ತಾವು ವಾಸಿಸುವ ಸ್ಥಳದಿಂದ ದೂರದ ಪ್ರದೇಶಗಳಲ್ಲಿ ಕಳ್ಳತನ ಮಾಡಲು ಪ್ರಾರಂಭಿಸಿದ್ದರು.
ವಿವಿಧ ಬೈಕ್ ಕಳ್ಳತನ ಪ್ರಕರಣಗಳನ್ನು ತನಿಖೆ ನಡೆಸುತ್ತಿರುವಾಗ, ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಕಂಡುಕೊಂಡಿದ್ದಾರೆ. ಆರು ತಿಂಗಳ ಅವಧಿಯಲ್ಲಿ ಸುಮಾರು 10 ಬೈಕ್‌ಗಳನ್ನು ಕಳ್ಳತನ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. 10 ಬೈಕ್‌ಗಳಲ್ಲಿ ಎಂಟು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೊಮ್ಮಗಳನ್ನು ಅಪಹರಿಸಿ ಮಗಳ ಬಳಿ 60 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟ ವೃದ್ಧ!; ಮುಂದೆನಾಯ್ತು..?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
