ಪುಣೆ:ಮೊಬೈಲ್‌ ಫೋನ್‌ ಕಳ್ಳತನವಾಗಿದೆ ಎಂದು ಪೊಲೀಸ್‌ ಸ್ಟೇಷನ್‌ಗೆ ದೂರು ನೀಡಲು ಹೋಗುವ ಹಾದಿಯಲ್ಲಿ ಕಳ್ಳನೊಬ್ಬ ಈತನ ಬೈಕ್‌ಅನ್ನೇ ಎಗರಿಸಿಬಿಟ್ಟಿದ್ದಾನೆ. ಈ ಘಟನೆ ಪುಣೆಯಲ್ಲಿ ನಡೆದಿದೆ.
29 ವರ್ಷದ ಪುಣೆಯ ವ್ಯಕ್ತಿ, ತನ್ನ ಮೊಬೈಲ್‌ ಫೋನ್‌ ಕಳ್ಳತನವಾಗಿದೆ ಅದನ್ನು ಹುಡುಕಿಕೊಡಿ ಎಂದು ಪೊಲೀಸ್‌ ಸ್ಟೇಷನ್‌ಗೆ ದೂರು ನೀಡಲು ಹೋಗುವ ಹಾದಿಯಲ್ಲಿಯೇ, ಇನ್ನೊಬ್ಬ ಕಳ್ಳ ಈತನ ಬೈಕನ್ನೇ ಎಗರಿಸಿಬಿಟ್ಟಿದ್ದಾನೆ. ಒಂದೇ ದಿನ ಮೊಬೈಲ್‌ ಹಾಗೂ ಬೈಕ್‌ ಎರಡನ್ನೂ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:ನಿಮಗೊಂದು ಸವಾಲು: ಬಂಡೆಗಳ ನಡುವೆ ಅಡಗಿರುವ ಮೊಲವನ್ನು 6 ಸೆಕೆಂಡುಗಳಲ್ಲಿ ಹುಡುಕಿ
ಕೆಲಸದ ಕಾರಣದಿಂದಾಗಿ ವ್ಯಕ್ತಿ ಇತ್ತೀಚಿಗಷ್ಟೇ ಪುಣೆಗೆ ಶಿಫ್ಟ್‌ ಆಗಿದ್ದನು. ಜುಲೈ 20 ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ ಸಹಾಯ ಕೇಳುವ ನೆಪದಲ್ಲಿ ಹಣ ಹಾಗೂ ಮೊಬೈಲ್​ ಕದ್ದು ಕಳ್ಳ ಎಸ್ಕೇಪ್​ ಆಗಿದ್ದನು. ಅಕ್ಕಪಕ್ಕದವರ ಬಳಿ ಪೊಲೀಸ್‌ ಸ್ಟೇಷನ್‌ ಎಲ್ಲಿದೆ ಅನ್ನೋದನ್ನು ತಿಳಿದುಕೊಂಡು ಕಂಪ್ಲೇಟ್​​ ಕೊಡಲು ಹೊರಟಿದ್ದಾನೆ. ಆಗ ಈ ವೇಳೆ ದಾರಿಯಲ್ಲಿ ಇನ್ನೊಬ್ಬ ವ್ಯಕ್ತಿ, ನನಗೆ ಪೊಲೀಸ್‌ ಸ್ಟೇಷನ್‌ನಲ್ಲಿ ತುಂಬಾ ಜನ ಪರಿಚಯವಿದ್ದಾರೆ. ನಾನೇ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆಂದು ಕಥೆ ಕಟ್ಟಿದ್ದಾನೆ. ಬೈಕ್‌ ಆತನಿಗೆ ಕೊಟ್ಟು ಹಿಂಬದಿ ಸೀಟ್‌ನಲ್ಲಿ ವ್ಯಕ್ತಿ ಕುಳಿತಿದ್ದ. ನನಗೆ ಸಿಗರೇಟ್‌ ಬೇಕು ತಂದುಕೊಡ್ತೀರಾ ಎಂದು ಅಪರಿಚಿತ ವ್ಯಕ್ತಿ ಕೇಳಿದ್ದಾನೆ. ಅದರಂತೆ ಫೋನ್‌ ಕಳೆದುಕೊಂಡಿದ್ದ ವ್ಯಕ್ತಿ, ಸಿಗರೇಟ್‌ ತರಲು ಅಂಗಡಿಗೆ ಹೋಗಿ ಬರುವ ವೇಳೆ, ಬೈಕ್‌ ಓಡಿಸುತ್ತಿದ್ದ ಕಳ್ಳ ಅದರೊಂದಿಗೆ ಪರಾರಿಯಾಗಿದ್ದಾನೆ.
ಇದನ್ನೂ ಓದಿ:VIDEO| ನಾಲ್ಕು ಲಕ್ಷ ರೂ. ಬೆಲೆಯ ಮಗನ ಶೂ ನೋಡಿ ಕೈ ಮುಗಿದ ತಂದೆ!
ಮೊಬೈಲ್​​ ಹಾಗೂ ಬೈಕ್​ ಕಳೆದುಕೊಂದು ಬೇಸರದಲ್ಲಿದ್ದ ವ್ಯಕ್ತಿ ಈ ಕುರಿತಾಗಿ ಪುಣೆ ಭೋಸಾರಿ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಇಬ್ಬರು ಅನಾಮಿಕ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್‌ 406 ಹಾಗೂ 420 ಕೇಸ್‌ಗಳನ್ನು ದಾಖಲಿಸಿದ್ದಾರೆ.
ಸ್ಟಾರ್‌ ಚಿಹ್ನೆ ಹೊಂದಿರುವ ಬ್ಯಾಂಕ್‌ ನೋಟ್‌ಗಳು ಕಾನೂನುಬದ್ಧವಾಗಿವೆ: ಆರ್​ಬಿಐ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 8 =
Remember me
