ಪುಣೆ:ಕರೊನಾ ಸೋಂಕು ಎಲ್ಲೆಡೆ ಸದ್ದು ಮಾಡುತ್ತಿದ್ದಂತೆ ಮುಖಗವಸು(ಮಾಸ್ಕ್​)ಗಳಿಗೆ ಭಾರೀ ಡಿಮಾಂಡ್​ ಬಂದಿದೆ. ತರಹೇವಾರಿಯ ಮಾಸ್ಕ್​ಗಳು ಮಾರುಕಟ್ಟೆಗೀಗ ಲಗ್ಗೆಯಿಟ್ಟಿವೆ. ‘ಮೋದಿ ಮಾಸ್ಕ್​’ ಕೂಡ ಮಾರುಕಟ್ಟೆಯಲ್ಲಿ ಟ್ರೆಂಡ್​ ಆಗಿದೆ. ಕೆಲವರಂತೂ ಮಸ್ಕ್​ಗಳಿಗೆ ‘ಕರೊನಾ ಮಾಸ್ಕ್​’ ಎಂದೇ ಕರೆಯುತ್ತಿದ್ದಾರೆ.
ಉಳ್ಳವರು ಆರ್ಥಿಕ ಸ್ಥಿತಿಗನುಗುಣವಾಗಿ ಮಾಸ್ಕ್​ ಖರೀದಿಸಿ ಧರಿಸುತ್ತಿದ್ದಾರೆ. ಇನ್ನೂ ಕೆಲವರು ದುಪ್ಪಟ್ಟ, ಶಿರೋವಸ್ತ್ರಗಳನ್ನೇ ಮುಖಗವಸನ್ನಾಗಿ ಬಳಸುತ್ತಿದ್ದಾರೆ. ಈ ನಡುವೆ ಇಲ್ಲೊಬ್ಬ ಚಿನ್ನದ ಮಾಸ್ಕ್​ ಮಾಡಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.ಇದನ್ನೂ ಓದಿರಿಈ ಮದುವೆಗೆ ಹೋಗಿದ್ದ 20ಕ್ಕೂ ಹೆಚ್ಚು ಜನರಿಗೆ ಕರೊನಾ ಪಾಸಿಟಿವ್​!
ಅಂದಹಾಗೆ ಚಿನ್ನದ ಮಾಸ್ಕ್​ ಹಾಕಿಕೊಳ್ಳುತ್ತಿರೋದು ಯಾರು ಗೊತ್ತಾ? ಪುಣೆಯ ಪಿಂಪ್ರಿ ಚಿಂಚವಾಡದ ಶಂಕರ್ ಕೂರದೆ ಎಂಬಾತ. ದೇಶದೆಲ್ಲೆಡೆ ಕೋವಿಡ್​ ಸೋಂಕು ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ಧರಿಸಲೆಂದೇ ಶಂಕರ್​ ಚಿನ್ನದ ಮುಖಗವಸು ಮಾಡಿಸಿಕೊಡಿದ್ದಾರೆ. ಈ ಚಿನ್ನದ ಮಾಸ್ಕ್​ಗೆ ಬರೋಬ್ಬರಿ 2.89 ಲಕ್ಷ ರೂ. ಖರ್ಚು ಮಾಡಿದ್ದಾರೆ.
ಮಾಸ್ಕ್​ ತೆಳುವಾಗಿದ್ದು, ಸಣ್ಣಸಣ್ಣ ರಂಧ್ರಗಳಿವೆ. ಉಸಿರಾಟಕ್ಕೆ ತೊಂದರೆ ಆಗದಂತೆ ಈ ರಂಧ್ರಗಳನ್ನು ಬಿಡಲಾಗಿದೆ. ಆದರೆ, ಸೋಂಕು ತಗುಲದಂತೆ ರಕ್ಷಿಸಿಕೊಳ್ಳುವಲ್ಲಿ ಈ ಮಾಸ್ಕ್​ ಎಷ್ಟರಮಟ್ಟಿಗೆ ಸಫಲ ಎಂಬುದು ತಿಳಿದಿಲ್ಲ.
ಕೋವಿಡ್​ಗೆ ಔಷಧಿ ಕೊಡಿಸುವ ನೆಪದಲ್ಲಿ ಅತ್ಯಾಚಾರ! ಸೋಂಕಿನ ಹೆಸರಲ್ಲಿ ಕಾಮುಕರ ಅಟ್ಟಹಾಸ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 2 =
Remember me
