ಪುಣೆ:ಜೀವನ ಪೂರ್ತಿ ನೆನಪಿನಲ್ಲಿ ಉಳಿಯುವಂತೆ ಮದುವೆ ಮಾಡಿಕೊಳ್ಳುವುದು ಪ್ರತಿಯೊಬ್ಬ ವಧುವಿನ ಕನಸು. ಹೀಗಾಗಿ ಕೆಲವರು ಪ್ರೀ ವೆಡ್ಡಿಂಗ್​ ಮತ್ತು ಪೋಸ್ಟ್​ ವೆಡ್ಡಿಂಗ್​ ಫೋಟೋಶೂಟ್​ ಅಥವಾ ವಿಡಿಯೋಶೂಟ್​ ಮೊರೆ ಹೋಗುತ್ತಾರೆ. ವಿಭಿನ್ನ ಪರಿಕಲ್ಪನೆಯಲ್ಲಿ ಶೂಟ್​ ಮಾಡಿಸುತ್ತಾರೆ. ಆದರೆ, ಕೆಲವೊಮ್ಮೆ ಮದುವೆಯ ಪರಿಕಲ್ಪನೆಗಳೇ ಸಂಕಷ್ಟವನ್ನು ತಂದೊಡ್ಡುತ್ತವೆ.
ಹೌದು. ಇದಕ್ಕೆ ತಾಜಾ ಉದಾಹರಣೆಯಂತೆ ಪುಣೆಯಲ್ಲಿ ಘಟನೆಯೊಂದು ನಡೆದಿದೆ. ವಧು ಮತ್ತು ವರ ಅದ್ಧೂರಿಯಾಗಿ ಮದುವೆ ಮಂಟಪಕ್ಕೆ ಬಂದಿದ್ದಾರೆ. ಹೀಗಿ ಬರುವಾಗ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.
23 ವರ್ಷ ವಧು ಮಂಗಳವಾರ ಮದುವೆ ಮಂಟಪಕ್ಕೆ ವಿನೂತನವಾಗಿ ಎಂಟ್ರಿ ಕೊಟ್ಟರು. ಮನೆಯಿಂದ ಎಸ್​ಯುವಿ ಕಾರಿನ ಬಾನೆಟ್​ ಮೇಲೆ ಕುಳಿತು ಕಲ್ಯಾಣ ಮಂಟಪಕ್ಕೆ ಆಗಮಿಸಿದರು. ಅದನ್ನು ವಿಡಿಯೋಗ್ರಾಫರ್​ ಬೈಕ್​ ಮೇಲೆ ಕುಳಿತು ಚಿತ್ರೀಕರಿಸಿದ್ದಾರೆ. ಎಲ್ಲವೂ ಆರಾಮಾಗಿಯೇ ನಡೆದಿದೆ. ಆದರೆ, ಮದುವೆ ಬಳಿಕ ವಧುವಿನ ಕುಟುಂಬಕ್ಕೆ ಶಾಕ್​ ಒಂದು ಎದುರಾಗಿದೆ.
ವಧು ಕಾರಿನ ಮೇಲೆ ಬರುವ ವಿಡಿಯೋ ವೈರಲ್​ ಆದ ಬಳಿಕ ಪುಣೆ ಪೊಲೀಸರು ವಧುವಿನ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದು, ನೋಟಿಸ್​ ಕಳುಹಿಸಿದ್ದಾರೆ. ವಧು ಮಾತ್ರವಲ್ಲದೆ, ವಿಡಿಯೋಗ್ರಾಫರ್​, ಮತ್ತು ಕಾರು ಚಾಲಕನ ಮೇಲೆ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಕೇಸು ದಾಖಲಾಗಿದೆ. ಮದುವೆ ಆಗಿರಲಿ ಅಥವಾ ಯಾವುದೇ ಸಮಾರಂಭವಾಗಿರಲಿ ಯಾರು ಕೂಡ ಸಂಚಾರ ನಿಯಮ ಉಲ್ಲಂಘಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.(ಏಜೆನ್ಸೀಸ್​)
ಒಮ್ಮೆ ನಿದ್ರೆಗೆ ಜಾರಿದ್ರೆ ಮತ್ತೆ ಏಳಲು ಬೇಕು 25 ದಿನ! ಆಧುನಿಕ ಕುಂಭಕರ್ಣನ ದಿನಚರಿ ಕೇಳಿದ್ರೆ ಬೆರಗಾಗ್ತೀರಿ

ಜೈಲಲ್ಲಿ ಸಿಗಲಿದೆ ಬಿಸಿ ಬಿಸಿ ಚಿಕನ್ ಖಾದ್ಯ; ಹೇಗಾಗಲಿವೆ ಗೊತ್ತಾ ಮಹಾರಾಷ್ಟ್ರದ ಜೈಲುಗಳು?

ಎರಡು ಜರ್ಮನ್​ ಶಫರ್ಡ್​ ನಾಯಿಗಳಿಗೆ ಮರಣದಂಡನೆ! ಈ ತಪ್ಪಿಗೆ ಇಂಥಾ ಘೋರ ಶಿಕ್ಷೆನಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − ten =
Remember me
