ಪುಣೆ:ತನ್ನ ಅಪ್ರಾಪ್ತ ವಯಸ್ಸಿನ ಮಗನಿಗೆ ಐಷಾರಾಮಿ ಪೋರ್ಷೆ ಕಾರು ನೀಡಿ, 24 ವರ್ಷದ ಇಬ್ಬರು ಸಾಫ್ಟ್​ವೇರ್​ ಎಂಜಿನಿಯರ್‌ಗಳ ಸಾವಿಗೆ ಕಾರಣನಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರವಾಲ್ ನನ್ನು ಬಂಧಿಸಿದ್ದು, ಸ್ಥಳೀಯ ಸೆಷನ್ಸ್​ ನ್ಯಾಯಾಲಯ 2 ದಿನಗಳ ಪೊಲೀಸ್ ಕಸ್ಟಡಿಗೆನೀಡಿದೆ.
ಇದನ್ನೂ ಓದಿ:ದೇಶವನ್ನೇ ಬೆಚ್ಚಿ ಬೀಳಿಸುತ್ತಿರುವ ಪುಣೆ ಕಾರು ಅಪಘಾತ ಪ್ರಕರಣ! ಜನರ ಅಸಹನೆ ಕಟ್ಟೆಹೊಡೆದಿರುವುದೇಕೆ? ವಿವರ ಇಲ್ಲಿದೆ..
ತನ್ನ ಐಷಾರಾಮಿ ಕಾರನ್ನು ಚಲಾಯಿಸಲು ಅಪ್ರಾಪ್ತ ವಯಸ್ಸಿನ ಮಗನಿಗೆ ಅನುಮತಿ ನೀಡಿದ್ದಕ್ಕಾಗಿ ವಿಶಾಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಇದರ ಬೆನ್ನಲ್ಲೇ ವಿಶಾಲ್​ ಅಗರವಾಲ್​ ನಾಪತ್ತೆಯಾಗಿದ್ದ. ಅಷ್ಟೇ ಅಲ್ಲದೆ, ಪೊಲೀಸರನ್ನು ದಿಕ್ಕು ತಪ್ಪಿಸಲು ತಂತ್ರಗಳನ್ನು ರೂಪಿಸಿದ್ದ. ತನ್ನ ಕಾರಿನಲ್ಲಿ ಮನೆಯಿಂದ ಹೊರ ಹೋಗಿದ್ದ ಆತ, ಮುಂಬಯಿ ಕಡೆ ರಸ್ತೆಗೆ ತೆರಳುವಂತೆ ತನ್ನ ಚಾಲಕನಿಗೆ ಸೂಚಿಸಿದ್ದ. ತನ್ನ ಇನ್ನೊಂದು ಕಾರಿನಲ್ಲಿ ಗೋವಾಕ್ಕೆ ಹೋಗುವಂತೆ ಮತ್ತೊಬ್ಬ ಚಾಲಕನಿಗೆ ಹೇಳಿದ್ದ. ಮುಂಬಯಿಗೆ ಹೋಗುವ ಮಾರ್ಗದಲ್ಲಿ ಆತ ತನ್ನ ಕಾರಿನಿಂದ ಇಳಿದು, ಸ್ನೇಹಿತ ಕಳಿಸಿದ್ದ ಮತ್ತೊಂದು ಕಾರು ಏರಿ ಛತ್ರಪತಿ ಸಂಭಾಜಿನಗರದ ಕಡೆಗೆ ಹೊರಟಿದ್ದ.
ಪೊಲೀಸರಿಂದ ತಪ್ಪಿಸಿಕೊಳ್ಳಲು ಸಿನಿಮೀಯ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿದ್ದ. ಆದರೆ ಪೊಲೀಸರ ಕಣ್ಣಿಗೆ ಮಣ್ಣೆರಚಿ ಎಸ್ಕೇಪ್ ಆಗುವ ಆತನ ತಂತ್ರ ಕೈಕೊಟ್ಟಿತ್ತು. ಇಷ್ಟೆಲ್ಲ ಆದ ನಂತರವೂ ಅಗರ್ವಾಲ್ ನನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಶಿವಾಜಿನಗರ ಪ್ರದೇಶದ ನ್ಯಾಯಾಲಯ ಸಂಕೀರ್ಣಕ್ಕೆ ಕರೆತರುತ್ತಿದ್ದಾಗ ಆತನ ಬೆಂಬಲಿಗರು ಪೊಲೀಸ್ ವಾಹನಕ್ಕೆ ಮಸಿ ಎರಚಿ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದರು.
ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನು (ಪುರುಷ ಮತ್ತು ಮಹಿಳೆ) ಬಲಿತೆಗೆದುಕೊಂಡ ಪೋರ್ಷೆ ಕಾರನ್ನು ವಿಶಾಲ್ ಅಗರ್ವಾಲ್ ನ 17 ವರ್ಷದ ಪುತ್ರ ಚಾಲನೆ ಮಾಡುತ್ತಿದ್ದ.
ತಮಿಳುನಾಡಿನಲ್ಲಿ ಹೊಸ ಕೊರೊನಾ ವೈರಸ್ ಭೀತಿ..ಸರ್ಕಾರ ಹೇಳೋದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 17 =
Remember me
