ಪುಣೆ (ಮಹಾರಾಷ್ಟ್ರ):ಪುಣೆಯಲ್ಲಿ ನಡೆದ ಪೋರ್ಷೆ ಕಾರು ಅಪಘಾತ ಪ್ರಕರಣದ ಆರೋಪಿ ಆರೋಪಿ ವೇದಾಂತ್​ ಅಗರ್ವಾಲ್​ ಅವರ ಸಂಬಂಧಕರೊಬ್ಬರಿಗೆ ಸೇರಿದ ರೆಸಾರ್ಟ್​​ನ ಅಕ್ರಮ ಭಾಗವನ್ನು ಸತಾರ ಜಿಲ್ಲಾಡಳಿತವು ಶನಿವಾರ ಧ್ವಂಸಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರ ವಿಧಾನಸಭೆಗೆ ಶೀಘ್ರ ಚುನಾವಣೆ: ಆಯೋಗ ಸುಳಿವು
ಮಹಾಬಲೇಶ್ವರದ ಮಾಲ್ಕಂ ಪೇಟ್​ ಪ್ರದೇಶದಲ್ಲಿರುವ ಕುಟುಂಬಸ್ಥರು ಒಡೆತನದ ಎಂಪಿಜಿ ಕ್ಲಬ್‌ನಲ್ಲಿ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಮೂಲಕ ಕೆಡವಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ರೆಸಾರ್ಟ್ ಅಕ್ರಮವಾಗಿದ್ದರೆ ಅಗತ್ಯವಿದ್ದರೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸತಾರ ಜಿಲ್ಲಾಧಿಕಾರಿ ಜಿತೇಂದ್ರ ದುಡಿ ಅವರಿಗೆ ನಿರ್ದೇಶಿಸಿದ ಕೆಲವೇ ದಿನಗಳಲ್ಲಿ ಈ ಕ್ರಮ ತೆಗದುಕೊಳ್ಳಲಾಗಿದೆ. ಕಳೆದ ವಾರ ರೆಸಾರ್ಟ್​ಗೆ ಜಿಲ್ಲಾಡಳಿತ ಬೀಗಮುದ್ರೆ ಹಾಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 19ರಂದು ಪುಣೆಯಲ್ಲಿ 17 ವರ್ಷದ ವೇದಾಂತ್​ ಅಗರ್ವಾಲ್​ ತನ್ನ ಐಷಾರಾಮಿ ಪೋರ್ಷೆ ಕಾರು ಅಪಘಾತ ಮಾಡಿ ಇಬ್ಬರ ಸಾವಿಗೆ ಕಾರಣನಾಗಿದ್ದ. ಚಾಲಕನಿಗೆ ತಾನೇ ಕಾರು ಚಲಾಯಿಸುತ್ತಿದ್ದೆ ಎಂದು ಒಪ್ಪಿಕೊಳ್ಳುವಂತೆ ಎಚ್ಚರಿಕೆ ನೀಡಿದ ಆರೋಪದ ಮೇಲೆ ವೇದಾಂತ್ ಅವರ ಅಜ್ಜನನ್ನು ಬಂಧಿಸಲಾಗಿದೆ.
ಪುಣೆಯಲ್ಲಿ ನಡೆದ ಪೋರ್ಷೆ ಕಾರು ಅಪಘಾತದ ಆರೋಪಿ ವೇದಾಂತ್​ ಅಗರ್ವಾಲ್​ ತಂದೆ ಹಾಗೂ ಅಜ್ಜನ ವಿರುದ್ಧ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ದಾಖಲಿಸಿದ್ದಾರೆ. ನಗರದಲ್ಲಿ ಉದ್ಯಮಿಯೊಬ್ಬರ ಮಗನ ಆತ್ಮಹತ್ಯೆಗೆ ಪ್ರಚೋದನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ಹಾಗೆಯೇ ವೇದಾಂತ್ ರಕ್ತದ ಮಾದರಿಯನ್ನು ಬದಲಿಸಿದ್ದಕ್ಕೆ ವೇದಾಂತ್ ತಂದೆ ವಿಶಾಲ್ ಅಗರ್ವಾಲ್ ಹಾಗೂ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತ ನಡೆದ ಬಳಿಕ ಆರೋಪಿ ವೇದಾಂತ್​ನನ್ನು ಪೊಲೀಸರು ಬಂಧಿಸಿದ್ದರು, ಬಳಿಕ ಬಾಲಾಪರಾಧಿ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ವಿಶಾಲ್​ ಅಗರ್ವಾಲ್​ರನ್ನು ಬಂಧಿಸಿತ್ತು.
ಸಿಡಬ್ಲ್ಯುಸಿ ಸಭೆ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಹುಲ್ ಗಾಂಧಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 1 =
Remember me
