ಮುಂಬೈ:ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(NCP)ನಾಯಕ ಶರದ್ ಪವಾರ್​(Sharad Pawar)ಅವರಿಗೆ ಫೇಸ್​ಬುಕ್​ನಲ್ಲಿ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಇದೀಗ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಶಿಶುಗಳ ಮಾನಸಿಕ ಯೋಗಕ್ಷೇಮಕ್ಕಾಗಿ ಗರ್ಭಿಣಿಯರು ರಾಮಾಯಣ ಓದಿ: ತೆಲಂಗಾಣ ರಾಜ್ಯಪಾಲೆ
ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ನೀಡಿದ್ದ ದೂರನ್ನು ಸ್ವೀಕರಿಸಿದ ಮುಂಬೈ ಕ್ರೈಂ ಬ್ರಾಂಚ್(Mumbai Crime Branch)ಪುಣೆ ಟೆಕ್ಕಿಯನ್ನು ಬಂಧಿಸುವಲ್ಲಿ ಸಫಲವಾಗಿದೆ. ಶಂಕಿತ ಆರೋಪಿಯನ್ನು 32 ವರ್ಷದ ಸಾಗರ್ ಬರ್ವೆ ಎಂದು ಗುರುತಿಸಲಾಗಿದ್ದು, ಎಸ್ಪ್ಲೆನೇಡ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆತನನ್ನು ಜೂನ್ 14 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಮುಂಬೈ ಪೊಲೀಸರ ಬಳಿ ತಮ್ಮ ತಂದೆಗೆ ಫೇಸ್​ಬುಕ್, ಟ್ವೀಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜೀವ ಬೆದರಿಕೆ ಕರೆ ಬಂದಿದೆ. ಶೀಘ್ರವೇ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ಬಂಧಿಸಬೇಕು ಎಂದು ದೂರು ನೀಡಿದ್ದರು. ಸುಪ್ರಿಯಾ ಅವರ ದೂರಿನ ಅನ್ವಯ ಮುಂಬೈ ಪೊಲೀಸರು ಇದೀಗ ಆತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಅಪರಾಧ ತಡೆಗೆ ಮುಂದಾದ ನಗರ ಪೊಲೀಸ್ ಆಯುಕ್ತ; ಹೊಯ್ಸಳ ವಾಹನದಲ್ಲಿ ಸಿಟಿ ರೌಂಡ್ಸ್
ಬರ್ವೆ ಎಂಬ ವ್ಯಕ್ತಿ ಫೇಸ್​ಬುಕ್​ನಲ್ಲಿ ಶರದ್ ಪವಾರ್​ ಅವರಿಗೆ ಜೀವ ಬೆದರಿಕೆ ಹಾಕಿದ್ದು, ಈ ಬೆದರಿಕೆಗಳನ್ನು ಪೋಸ್ಟ್ ಮಾಡಲು ಆತ ಎರಡು ನಕಲಿ ಖಾತೆಗಳನ್ನು ಬಳಸಿದ್ದಾನೆ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಮಹಾರಾಷ್ಟ್ರ ಸಿಎಂ ಏಕ್​ನಾಥ್ ಶಿಂಧೆ, ತನಿಖೆಗೆ ಮತ್ತಷ್ಟು ಒತ್ತು ನೀಡಿ, ಮಾಜಿ ಸಿಎಂ ಅವರ ಭದ್ರತೆಯನ್ನು ಹೆಚ್ಚಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
