ಮುಂಬೈ:ತಮ್ಮ ಮಾತು ಕೇಳದ ಮೂರು ವರ್ಷದ ಮಗುವಿಗೆ ಅದರ ಅಮ್ಮ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಹೆಸರು ಹೇಳಿ ಬೈದುದಕ್ಕೆ, ಖುದ್ದು ಠಾಕ್ರೆ ಅವರೇ ಅಮ್ಮನಿಗೆ ಕರೆ ಮಾಡಿದ ಕುತೂಹಲದ ಘಟನೆ ನಡೆದಿದೆ.
ಮೂರು ವರ್ಷದ ಬಾಲಕಿ ಅನ್ಶಿಕಾ ಹಾಲು ಮಾರುವವನಿಗೆ ನೋಟು ನೀಡಿದ್ದಳು. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನೋಟು ನೀಡಿದ್ದಕ್ಕೆ ಈ ಪುಟಾಣಿಯ ಅಮ್ಮ ಕಂಚನ್​ ಶಿಂಧೆ ಮಗುವಿಗೆ ಬೈದಿದ್ದರು. ಹೀಗೆಲ್ಲಾ ನೋಟುಗಳನ್ನು ನೀಡಬಾರದು. ನಿನಗೆ ಮೋದಿ ಕಾಕಾ, ಉದ್ಧವ್​ ಕಾಕಾ ತುಂಬಾ ಇಷ್ಟ ತಾನೆ? ಅವರ ಮಾತೂ ಕೇಳಲ್ವಾ ಎಂದು ಅಮ್ಮ ಕೇಳಿದ್ದರು.
ಇದನ್ನೂ ಓದಿ:ಕೆಸರು ಎರಚಿದಷ್ಟೂ ಕಮಲದ ಹೂವು ಸುಂದರವಾಗಿ ಅರಳಲಿದೆ- ದೀದೀಗೆ ಷಾ ತಿರುಗೇಟು
ಅಮ್ಮ ಬೈದುದಕ್ಕೆ ಅಳುತ್ತಾ ಮಗು, ನಾನು ಎಲ್ಲರ ಮಾತು ಕೇಳುತ್ತೇನೆ ಎಂದಿತು. ಅದಕ್ಕೆ ಅಮ್ಮ, ನೀನು ಹೀಗೆಲ್ಲಾ ಮಾತು ಕೇಳಿದೆ ನಡೆದುಕೊಂಡರೆ ಉದ್ಧವ್​ ಕಾಕಾಗೆ ಹೇಳಿಕೊಡುತ್ತೇನೆ ಎಂದರು. ಮಗು ಇನ್ನೂ ಜೋರಾಗಿ ಅಳಲು ಶುರು ಮಾಡಿತು.
ಮಗುವು ಈ ರೀತಿ ಮಾಡುವುದನ್ನು ತಾಯಿ ವಿಡಿಯೋ ಮಾಡಿ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ‘ನನ್ನ ಮಗಳಿಗೆ ಪ್ರಧಾನಿ ಮೋದಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಎಂದರೆ ತುಂಬಾ ಇಷ್ಟ’ ಎಂದು ಬರೆದುಕೊಂಡಿದ್ದ ಕಂಚನ್​ ಟ್ವೀಟ್​ ಮಾಡಿದ್ದರು. ಮಗುವಿನ ಮುಗ್ಧತೆಗೆ ಸೋತ ನೆಟ್ಟಿಗರು ಇದನ್ನು ಶೇರ್​ ಮಾಡಿದ್ದರು. ಈ ವಿಡಿಯೋ ಖುದ್ದು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ಗಮನವನ್ನೂ ಸೆಳೆಯಿತು.
ಇದನ್ನೂ ಓದಿ:ಕರೊನಾ ಟೆಸ್ಟ್​ ಮಾಡಿಸಿಕೊಂಡ ಕೇಜ್ರಿವಾಲ್​: ವರದಿ ಬರುವವರೆಗೂ ಡವಡವ
ಅವರೇ ಖುದ್ದಾಗಿ ಕಂಚನ್​ ಅವರ ಪತಿಗೆ ಕರೆ ಮಾಡಿದಾಗ ಕುಟುಂಬಸ್ಥರಿಗೆ ಅಚ್ಚರಿಯೋ ಅಚ್ಚರಿ, ‘ಶಿವ ಸೈನಿಕರಿಗೆ (ಸೇನಾ ಕಾರ್ಯಕರ್ತರಿಗೆ) ಹೀಗೆಲ್ಲಾ ನೀವು ತೊಂದರೆ ಕೊಡಬಾರದು. ನನ್ನ ಹೆಸರನ್ನು ಬಳಸಿ ನೀವು ಬಾಲಕಿ ಅನ್ಶಿಕಾಗೆ ಬೈಯ್ದಿದ್ದು ಸರಿಯಲ್ಲ’ ಎಂದು ಹಾಸ್ಯಭರಿತವಾಗಿ ಮುಖ್ಯಮಂತ್ರಿಗಳು ನುಡಿದರು. ಅಷ್ಟೇ ಅಲ್ಲದೇ ಪುಟಾಣಿ ಅನ್ಶಿಕಾ ಜತೆಯೂ ಮಾತನಾಡಿದ ಸಿಎಂ, ‘ಇನ್ನೊಮ್ಮೆ ತಂದೆ ತಾಯಿ ಬೈದರೆ, ನನಗೆ ಕರೆ ಮಾಡು’ ಎಂದೂ ಹೇಳಿದ್ದಾರೆ.
My daughter love modiji and uddhav thakre sir soooooo muchpic.twitter.com/H9IDXsrNeM
— Anshika Shinde (@Kanchan071187)June 4, 2020

ಸೆಕ್ಸ್​ ತಪ್ಪು, ರೇಪ್​ ಓಕೆನಾ ಎಂದು ನಿರ್ಮಾಪಕಿ ಏಕ್ತಾ ಕಪೂರ್​ ಪ್ರಶ್ನಿಸಿದ್ಯಾಕೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 3 =
Remember me
