ಪುಣೆ:ಹಬ್ಬಗಳು ಬಂತೆಂದರೆ ಸಾಕು ಮನೆ ಶುಚಿಗೊಳಿಸುವ ಕಾರ್ಯಕ್ಕೆ ಮಹಿಳೆಯರು ಮುಂದಾಗುವುದು ಸಾಮಾನ್ಯ. ಆದರೆ, ಶುಚಿ ಕಾರ್ಯದಲ್ಲಿ ಬಿಜಿಯಾಗಿ ಒಮ್ಮೆ ಮೈಮರೆತರೆ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ. ದೀಪಾವಳಿಯ ಖುಷಿಯಲ್ಲಿರಬೇಕಾದ ಪುಣೆ ಮೂಲದ ಮಹಿಳೆಯೊಬ್ಬಳು ತಾನು ಮಾಡಿದ ಎಡವಟ್ಟಿನಿಂದ ಚಿಂತೆಯಲ್ಲಿ ಮುಳುಗಿ ಸುಖಾಂತ್ಯ ಕಂಡ ಕತೆ ಇದು.
ಪುಣೆಯ ಪಿಂಪಲ್​ ಸಾಡಗರ್​ ಏರಿಯಾ ನಿವಾಸಿ ರೇಖಾ ಸೆಲುಕರ್, ದೀಪಾವಳಿ ಸಂಭ್ರಮಾಚರಣೆಗೂ ಮುನ್ನ ಮನೆಯ ಶುಚಿ ಕಾರ್ಯದಲ್ಲಿ ಬಿಜಿಯಾಗಿದ್ದರು. ಮನೆಯಲ್ಲಿದ್ದ ಕಸವನೆಲ್ಲಾ ಹೊರಗಾಕುವ ಭರದಲ್ಲಿ ಆಕಸ್ಮಿಕವಾಗಿ ಸಣ್ಣ ಹ್ಯಾಂಡ್​ಬ್ಯಾಗ್​ ಅನ್ನು ಕಸಕ್ಕೆ ಹಾಕಿದ್ದರು. ಬಳಿಕ ಮನೆಯತ್ರ ಬಂದ ಕಸ ಸಂಗ್ರಹ ವಾಹನ ರೇಖಾರಿಂದ ಕಸ ಸ್ವೀಕರಿಸಿ ಹೋಗಿ ಅದನ್ನು ಡಂಪಿಂಗ್​ ಯಾರ್ಡ್​ಗೂ ಎಸೆದಿತ್ತು.
ಇತ್ತ ಕಸ ಹೊರಗಾಕಿದ ಎರಡು ಗಂಟೆಗಳ ಬಳಿಕ ಹ್ಯಾಂಡ್​ ಬ್ಯಾಗ್ ಒಂದು ಇಲ್ಲದಿರುವುದು ರೇಖಾಗೆ ಮನವರಿಕೆಯಾಗುತ್ತದೆ. ಅದರಲ್ಲಿ ಸುಮಾರು 3 ಲಕ್ಷ ರೂ. ಮೌಲ್ಯದ ಆಭರಣವೂ ಇರುತ್ತದೆ. ಮಂಗಳಸೂತ್ರ, ಒಂದು ಜತೆ ಆ್ಯಂಕ್ಲೆಟ್ಸ್​ ಮತ್ತು ಇನ್ನಿತರ ಆಭರಣ ಬ್ಯಾಗ್​ನಲ್ಲಿ ಇರುತ್ತದೆ. ತುಂಬಾ ವರ್ಷಗಳಿಂದ ಉಳಿತಾಯ ಮಾಡಿದ ಹಣದಿಂದ ಕೊಂಡ ಆಭರಣವಾಗಿದ್ದು, ಅದನ್ನು ಕಳೆದುಕೊಂಡ ರೇಖಾ ಕಣ್ಣೀರು ಸುರಿಸುತ್ತಾರೆ. ಕಸದಲ್ಲಿ ಸೇರಿಕೊಂಡಿರಬಹುದು ಎಂದು ಮನವರಿಕೆಯಾದ ಬೆನ್ನಲ್ಲೇ ರೇಖಾ, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸಂಜಯ್​ ಕುಟೆ ಅವರಿಗೆ ಫೋನ್​ ಮಾಡಿ ಎಲ್ಲವನ್ನು ವಿವರಿಸುತ್ತಾರೆ. ಬಳಿಕ ಸಂಜಯ್​ ಪುಣೆ ಕಾರ್ಪೋರೇಷನ್​ಗೆ ಮಾಹಿತಿ ನೀಡುತ್ತಾರೆ.
ಕಸ ಸಂಗ್ರಹ ವಾಹನ ಇನ್ನು ಏರಿಯಾದಲ್ಲೇ ಇರಬಹುದು ಎಂದು ಹುಡುಕಾಡುತ್ತಾರೆ. ಆದರೆ, ಅದಾಗಲೇ ಕಸವನ್ನು ವಾಹನ ಬೀಸಾಡಿ ಬಂದಿರುತ್ತದೆ. ಬಳಿಕ ಅಧಿಕಾರಿಯೊಬ್ಬರು ಘಟನೆ ಬಗ್ಗೆ ವಿವರಿಸಿ ಬ್ಯಾಗ್​ ಹುಡುಕೊಂಡು ಬರಲು ಸಿಬ್ಬಂದಿ ಹೇಳುತ್ತಾರೆ. ಬಳಿಕ ಸ್ಥಳಕ್ಕೆ ತೆರಳುವ ಸಿಬ್ಬಂದಿ ಸುಮಾರು 40 ನಿಮಿಷಗಳ ಶೋಧ ಕಾರ್ಯಾಚರಣೆ ಬಳಿಕ ಬ್ಯಾಗ್​ ಪತ್ತೆ ಮಾಡುತ್ತಾರೆ. ಬಳಿಕ ಅದನ್ನು ಮರಳಿ ರೇಖಾ ತಲುಪಿಸುತ್ತಾರೆ. ಬ್ಯಾಗ್​ ತೆರೆದು ನೋಡಿದ ರೇಖಾ, ಎಲ್ಲ ಆಭರಣಗಳು ಸುರಕ್ಷಿತವಾಗಿದ್ದುದ್ದನ್ನು ನೋಡಿ ನಿಟ್ಟುಸಿರು ಬಿಡುತ್ತಾರೆ. (ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × two =
Remember me
