ಬೆಂಗಳೂರು:ಬಿಹಾರದ ಬೋಧ್‌ಗಯಾದಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಏಳು ಉಗ್ರರಿಗೆ ಪಾಟ್ನಾ ಎನ್‌ಐಎ ವಿಶೇಷ ಕೋರ್ಟ್ ಶಿಕ್ಷೆ ವಿಧಿಸಿದೆ.
ಜೆಎಂಬಿಯ ಉಗ್ರರಾದ ಪೈಗಂಬರ್ ಶೇಖ್, ಅಹ್ಮದ್ ಅಲಿ, ನೂರ್ ಅಲ್ಮಾ ಮೊಮೈನ್ ಎಂಬುವರಿಗೆ ಜೀವಾವಧಿ ಶಿಕ್ಷೆ ಹಾಗೂ ಆದಿಲ್ ಶೇಖ್, ದಿಲ್ವರ್ ಹುಸ್ಸೆನ್, ಅಬ್ದುಲ್ ಕರೀಂ, ಮೌಸ್ತೈಜುರ್ ರೆಹ್ಮನ್ ಅಲಿಯಾಸ್ ತಾಹೀರ್, ಆರ್ಫಿ ಹುಸ್ಸೆನ್ ಎಂಬುವರಿಗೆ 10 ವರ್ಷ ಶಿಕ್ಷೆ ವಿಧಿಸಿ ಪಾಟ್ನಾ ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಪ್ರಮುಖ ಉಗ್ರ ಜಹೀದ್ದುಲ್ ಇಸ್ಲಾಂ ಅಲಿಯಾಸ್ ಕೌಸರ್ ಉಗ್ರ ಎಂದು ಕೋರ್ಟ್ ಆದೇಶ ನೀಡಿದೆ ಎಂದು ಎನ್‌ಐಎ ತಿಳಿಸಿದೆ.
ಬರ್ಮಾ ಮತ್ತು ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಕೌಸರ್, ಬೌದ್ಧಧರ್ಮೀಯರನ್ನು ಟಾರ್ಗೆಟ್ ಮಾಡಿದ್ದ. ಅಲ್ಲದೆ, ಭಾರತದಿಂದ ರೊಹಿಂಗ್ಯಾ ಮುಸ್ಲಿಮರನ್ನು ಹೊರಹಾಕಲು ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಿತ್ತು. ಹಾಗಾಗಿ ಬೌಧಧರ್ಮೀಯರ ಜತೆಗೆ ಹಿಂದುಗಳನ್ನೂ ಟಾರ್ಗೆಟ್ ಮಾಡಿ ಬಾಂಬ್ ಸ್ಫೋಟಿಸಲು ಪ್ಲ್ಯಾನ್ ಮಾಡಿದ್ದ.
ಪಾಟ್ನಾ ಜಿಲ್ಲೆ ಬೋಧ್‌ಗಯಾ ಬುದ್ಧ ಮಂದಿರಕ್ಕೆ ದೇಶ-ವಿದೇಶಗಳಿಂದ ಬೌದ್ಧಧರ್ಮೀಯರು ಬರುತ್ತಿದ್ದರು. ಇವರನ್ನೇ ಟಾರ್ಗೆಟ್ ಮಾಡಿ 2013 ಜು.7ರಂದು ಬೋಧ್‌ಗಯಾದಲ್ಲಿ ಸರಣಿ ಬಾಂಬ್ ಸ್ಫೋಟಿಸಿದ್ದ. ಆನಂತರ ಕೌಸ್ಸರ್ ತನ್ನ ಸಹಚರರ ಜತೆ ಬೆಂಗಳೂರಿಗೆ ಬಂದು ರಾಮನಗರ, ಸೋಲದೇವನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಅಡಗಿದ್ದರು. ಇಲ್ಲಿಯೂ ಸ್ಫೋಟಕ ತಯಾರಿಕೆ ಮಾಡಿದ್ದ. ಈ ಸುಳಿವು ಪತ್ತೆ ಮಾಡಿದ ಎನ್‌ಐಎ ಅಧಿಕಾರಿಗಳು ಸಹಾಯದಿಂದ 2018ರ ಆಗಸ್ಟ್‌ನಲ್ಲಿ ರಾಮನಗರದಲ್ಲಿ ಜೆಎಂಬಿ ಉಗ್ರ ಕೌಸರ್ ಸೇರಿ 6 ಶಂಕಿತರನ್ನು ಬಂಧಿಸಿದ್ದರು.
ಬಾಂಗ್ಲಾದೇಶದಲ್ಲಿ ಸರಣಿ ಬಾಂಬ್ ಸ್ಫೋಟದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೌಸ್ಸರ್, ಜೈಲು ಬ್ರೇಕ್ ಮಾಡಿ 2011ರಲ್ಲಿ ಪಶ್ಚಿಮ ಬಂಗಾಳಕ್ಕೆ ಬಂದಿದ್ದ. ಭಾರತದಲ್ಲಿ ಜೆಎಂಬಿ ಬಲಗೊಳಿಸುವ ಉದ್ದೇಶಕ್ಕೆ ಅತ್ತಿಬೆಲೆ, ಕೆ.ಆರ್.ಪುರ ಮತ್ತು ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ 4 ಕಡೆ ದರೋಡೆ ನಡೆಸಿದ್ದರು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.ಹೆಚ್ಚಿನ ತನಿಖೆ ಸಲುವಾಗಿ 2020ರ ಫೆಬ್ರವರಿ ಮತ್ತು ಏಪ್ರಿಲ್‌ನಲ್ಲಿ ಎನ್‌ಐಎ ಪ್ರತ್ಯೇಕ ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಪೂರ್ಣಗೊಳಿಸಿ 11 ಶಂಕಿತರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ. ಈ ಪ್ರಕರಣಗಳಲ್ಲಿ ತೀರ್ಪು ಬರಬೇಕಿದೆ.
ಹಿಜಾಬ್​ ವಿವಾದ: ಹೈಕೋರ್ಟ್​ನಿಂದ ಮಹತ್ವದ ಸೂಚನೆ; ಶಾಲಾ-ಕಾಲೇಜು ಆರಂಭಿಸಿ, ಆದರೆ…
ಆ ಕಾಲೇಜಲ್ಲಿ ಹಿಜಾಬ್​ ತೊಡಲು ಈ ಹಿಂದೆ ಅವಕಾಶ ಇರಲಿಲ್ಲ; ಮಹತ್ವದ ದಾಖಲೆ ಬಹಿರಂಗ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 3 =
Remember me
