ಭೋಪಾಲ್:ಕೊರೊನಾ ಸೋಂಕಿನಿಂದಾಗಿ ದೇಶಾದ್ಯಂತ ಲಾಕ್​ಡೌನ್ ಜಾರಿಯದ್ದರೂ ನಿಯಮ ಉಲ್ಲಂಘನೆ ಹಾಗೂ ಅದೇ ಕಾರಣದಿಂದಾಗಿ ಶಿಕ್ಷೆ, ಅಮಾನತು, ಅಷ್ಟೇ ಏಕೆ ಕೊಲೆಯಂತಹ ಅಮಾನವೀಯ ಘಟನೆಗಳೂ ನಡೆಯುತ್ತಿವೆ.ಈಗ ಕರ್ಫ್ಯೂ ಜಾರಿಯಲ್ಲಿದ್ದ ಸ್ಥಳದಲ್ಲಿ ಸಮಯ ಮೀರಿ ಅಂಗಡಿ ತೆರೆದಿದ್ದ 71 ವರ್ಷ ವಯಸ್ಸಿನ ವೃದ್ಧನಿಗೆ ಪೊಲೀಸ್ ಒಬ್ಬರು ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತು ಪರ ಹಾಗೂ ವಿರೋಧಗಳೂ ಕೇಳಿಬರುತ್ತಿವೆ.ಈ ಘಟನೆ ನಡೆದದ್ದು ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ. ವೃದ್ಧನಿಗೆ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ ವೀಡಿಯೋ ನೋಡಿ ಪೊಲೀಸ್ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ವೃದ್ಧನಿಗೆ ಈ ಪರಿ ಶಿಕ್ಷೆ ನೀಡಿದ್ದು ನೈತಿಕ ಕರ್ತವ್ಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ. ಲಾಕ್​ಡೌನ್ ಅವಧಿಯಲ್ಲಿ ಸಾರ್ವಜನಿಕರಿಂದ ನಿಯಮಗಳ ಉಲ್ಲಂಘನೆ, ಕೊಲೆ, ಸುಲಿಗೆ, ಪೊಲೀಸರಿಂದ ಲಾಠಿ ಏಟು ಇಂಥ ಅದೆಷ್ಟೋ ಪ್ರಸಂಗಗಳು ನಡೆದಿವೆ.
ಎರಡನೇ ಹಂತದ ವಂದೇ ಭಾರತ್ ಮಿಷನ್ ಮೇ 16 ರಿಂದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 3 =
Remember me
